Sign in
Sign in
Recover your password.
A password will be e-mailed to you.
ಕೊಪ್ಪಳ : ನಗರದ ಶ್ರೀಗವಿಸಿದ್ದೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಯಾದ ಶಿವಪ್ಪ ತಂದೆ ನಿಂಗಪ್ಪ ಜಾಲಣ್ಣನವರು ಇವರು 2022 ರ ಡಿಸೆಂಬರ್ ತಿಂಗಳಿನಲ್ಲಿ ಬೆಳಗಾವಿಯಲ್ಲಿ ನಡೆದ ಅಗ್ನಿವೀರ್ ನೇಮಕಾತಿಯಲ್ಲಿ ಆಯ್ಕೆಯಾಗಿದ್ದರು. ಇದೀಗ ಅರುಣಾಚಲ ಪ್ರದೇಶದ ತವಂಗ್ 312 ಫೀಲ್ಡ್ ರೆಜಿಮೆಂಟಿಗೆ ಸ್ಥಳ ನಿಯೋಜನೆ ಪಡೆದುಕೊಂಡಿದ್ದು ಈ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾನೆ. ಮೂಲತಃ ಕ್ರೀಡಾಪಟು ಆಗಿದ್ದ ಶಿವಪ್ಪ ವಿಶ್ವವಿದ್ಯಾಲಯದ ಅಥ್ಲೆಟಿಕ್ಸ 5 ಕಿಲೋಮೀಟರ ಓಟ ಹಾಗೂ ಗುಡ್ಡಗಾಡು ಓಟದಲ್ಲಿ ಬ್ಲೂ ಆಗಿದ್ದು, ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯಗಳ ಕ್ರೀಡಾ ಕೂಟದಲ್ಲಿ ಸಹ ಭಾಗವಹಿಸಿರುತ್ತಾನೆ. ಈ ಸಾಧನೆಗೆ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತ ಪಡಿಸಿದೆ. ಇದೇ ಸಂದರ್ಭದಲ್ಲಿ ಶಿವಪ್ಪ ಇವರಿಗೆ ಪ್ರಾಚಾರ್ಯರು, ದೈಹಿಕ ನಿರ್ದೇಶಕರು , ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಸನ್ಮಾನಿಸಿ ಅಭಿನಂದಿಸಿದ್ದಾರೆ.
Comments are closed.