ಕೊಪ್ಪಳ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಡಿಜಿಟಲ್ ಮೊಬೈಲ್ ತಾರಾಲಯ ಸಾರ್ವಜನಿಕ ವೀಕ್ಷಣೆಗೆ ಅ.27 ರವರೆಗೆ ಅವಕಾಶ
: ಕೊಪ್ಪಳದ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಡಿಜಿಟಲ್ ಮೊಬೈಲ್ ತಾರಾಲಯ ಮತ್ತು ವಿಜ್ಞಾನದ ಮಾದರಿಗಳನ್ನು ವೀಕ್ಷಿಸಲು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಸೇರಿದಂತೆ ಸಾರ್ವಜನಿಕರಿಗೆ ಅಕ್ಟೋಬರ್ 27 ರವರೆಗೆ ಮುಕ್ತ ಅವಕಾಶವನ್ನು ನೀಡಲಾಗಿದೆ.
ಕೊಪ್ಪಳದ ತಹಶೀಲ್ದಾರ್ ಕಚೇರಿ ಆವರಣದಲ್ಲಿ, ಸಬ್ ರಿಜಿಸ್ಟಾçರ್ ಆಫೀಸ್ ಎದುರಿಗೆ ಉಪಪ್ರಾದೇಶಿಕ ವಿಜ್ಞಾನ ಕೇಂದ್ರವು ಆರಂಭವಾಗಿದ್ದು, ವಿಜ್ಞಾನ ಕೇಂದ್ರದಲ್ಲಿ ಈಗಾಗಲೇ 27 ಕ್ಕೂ ಅಧಿಕ ವಿಜ್ಞಾನದ ಮಾದರಿಗಳನ್ನು ಜೋಡಿಸಲಾಗಿದೆ. ಇದರ ಜೊತೆಗೆ ಈಗ ದಸರಾ ರಜೆಯ ಅಂಗವಾಗಿ ಡಿಜಿಟಲ್ ಮೊಬೈಲ್ ತಾರಾಲಯವನ್ನು ಕೂಡ ವಿಜ್ಞಾನ ಕೇಂದ್ರದಲ್ಲಿ ಅಳವಡಿಸಲಾಗಿದೆ. ಈ ತಾರಾಲಯವು ಅಕ್ಟೋಬರ್ 27 ನೇ ತಾರೀಖಿನವರೆಗೆ ಮಾತ್ರ ಇರಲಿದ್ದು, ನಂತರ ಎಂದಿನAತೆ ಪ್ರತಿದಿನ ಒಂದೊAದು ಸರ್ಕಾರಿ ಶಾಲೆಗೆ ಹೋಗುವ ಕಾರ್ಯಕ್ರಮ ಮುಂದುವರಿಸಲಿದ್ದಾರೆ.
ಆದ್ದರಿಂದ ಜಿಲ್ಲೆಯ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಸೇರಿದಂತೆ ಸಾರ್ವಜನಿಕರು ವಿಜ್ಞಾನ ಕೇಂದ್ರಕ್ಕೆ ಬೆಳಿಗ್ಗೆ 10 ಗಂಟೆಯಿAದ ಸಂಜೆ 05 ಗಂಟೆಯವರೆಗೆ ಭೇಟಿ ನೀಡಿ ಡಿಜಿಟಲ್ ತಾರಾಲಯ ಮತ್ತು ವಿಜ್ಞಾನದ ಮಾದರಿಗಳನ್ನು ವೀಕ್ಷಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಪ್ರಕಟಣೆ ಕೋರಿದೆ.

Comments are closed.