ಅಂಜನಾದ್ರಿ ಎಕ್ಸ್‌ಪ್ರೆಸ್ ಹೆಸರಿನಲ್ಲಿ ಗಂಗಾವತಿ- ಅಯೋಧ್ಯೆಗೆ ರೈಲು ಆರಂಭಿಸಲು ಮನವಿ
ನೈರುತ್ಯ ರೈಲ್ವೆ ವಿಭಾಗದ ಸಂಜೀವ್ ಕಿಶೋರ್ ಅವರನ್ನು ಭೇಟಿ ಮಾಡಿದ ಸಂಸದ ಸಂಗಣ್ಣ
ಗಂಗಾವತಿ- ಅಯೋಧ್ಯೆಗೆ ರೈಲು ಸಂಚಾರಕ್ಕೆ ಮನವಿ
ಕೊಪ್ಪಳ: ಅಂಜನಾದ್ರಿ ಎಕ್ಸ್‌ಪ್ರೆಸ್ ಹೆಸರಿನಲ್ಲಿ ಗಂಗಾವತಿ- ಅಯೋಧ್ಯೆಗೆ ರೈಲು
ಸಂಚಾರ ಸೇರಿ ಜಿಲ್ಲೆಯ ಇನ್ನಿತರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ನೈರುತ್ಯ ರೈಲ್ವೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಕಿಶೋರ್ ಅವರನ್ನು ಭೇಟಿ ಮಾಡಿ ಸಂಸದ ಸಂಗಣ್ಣ ಕರಡಿ ಮನವಿ ಮಾಡಿದರು.
ಸ್ವಾತಂತ್ರ್ಯ ಹೋರಾಟದ ವೇಳೆ ಭಾನಾಪುರ ರೈಲು ನಿಲ್ದಾಣಕ್ಕೆ ಮಹಾತ್ಮ ಗಾಂಧೀಜಿ ಆಗಮಿಸಿದ್ದರು. ಈ ನಿಲ್ದಾಣ ಅಭಿವೃದ್ಧಿ ಪಡಿಸಬೇಕು. ಕಲ್ಯಾಣ ಕರ್ನಾಟಕ ಕ್ಕೆ 371(ಜೆ) ಸಿಕ್ಕಿದ್ದು, ಬೀದರ್ ನಿಂದ ಹುಬ್ಬಳ್ಳಿ ವರೆಗೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಬೇಕು. ಗಿಣಗೇರಾ ರೈಲು ನಿಲ್ದಾಣದಲ್ಲಿ ನಾಲ್ಕನೇ ಫ್ಲಾಟ್ ಫಾರಂ ನಿರ್ಮಿಸಬೇಕು ಅಧಿಕಾರಿಗಳ ಜತೆ ಚರ್ಚಿಸಿದರು.
ಗಂಗಾವತಿ ರೈಲು ನಿಲ್ದಾಣದಲ್ಲಿ ಎಸ್ಕಲೇಟರ್ ಮತ್ತು ಲಿಫ್ಟ್ ಅಳವಡಿಸಬೇಕು. ನಿಲ್ದಾಣದಲ್ಲಿ ರೈಲ್ವೆ ಇಲಾಖೆ ಸಿಬ್ಬಂದಿ ನೇಮಕ, ಟಿಕೆಟ್ ಕೌಂಟರ್ ಹೆಚ್ಚಳ ಹಾಗೂ ರಿಸರ್ವೇಶನ್ ಟಿಕೆಟ್ ಬುಕ್ಕಿಂಗ್ ಮಾಡಬೇಕು. ಕಾರಟಗಿ- ಯಶವಂತಪುರ ರೈಲು ಸಂಚಾರ ಸಮಯ ಬದಲಾವಣೆ ಹಾಗೂ ಸೊಲ್ಲಾಪುರ- ಹೊಸಪೇಟೆ ರೈಲು ಗಂಗಾವತಿ ಮಾರ್ಗವಾಗಿ ಸಂಚಾರ ಆರಂಭಿಸಬೇಕು ಎಂದು ತಿಳಿಸಿದರು.
Comments are closed.