ಪದವೀಧರರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ: ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್
: ಶೀಘ್ರದಲ್ಲಿ ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆ ಜರುಗಲಿದ್ದು, ಪದವಿ ಹೊಂದಿದವರು ನಮೂನೆ-18ರಲ್ಲಿ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳಾದ ಪದವಿ ಪ್ರಮಾಣಪತ್ರ, ಆಧಾರ ಕಾರ್ಡ, ಮತದಾರರ ಚೀಟಿ, 2 ಪಾಸಪೋರ್ಟ ಸೈಜ್ ಫೋಟೋ ಲಗತ್ತಿಸಿ ಮತದಾರರ ಪಟ್ಟಿಯಲ್ಲಿ ಕಡ್ಡಾಯವಾಗಿ ಹೆಸರು ನೋಂದಾಯಿಸಿ ಎಂದು ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಕರೆ ನೀಡಿದರು.
ಮಂಗಳವಾರದAದು ಕೊಪ್ಪಳ ತಹಶೀಲ ಕಾರ್ಯಾಲಯದಲ್ಲಿ ಮತದಾರರ ವಿಶೇಷ ನೋಂದಣಿ ಅಭಿಯಾನದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾಥಾವು ತಹಶೀಲ ಕಾರ್ಯಾಲಯದಿಂದ ಅಶೋಕ ಸರ್ಕಲ ವೃತ್ತ, ದಿವಟರ್ ಸರ್ಕಲ್ ಮಾರ್ಗವಾಗಿ ಕೊಪ್ಪಳ ತಾಲೂಕ ಪಂಚಾಯತಿಗೆ ಆಗಮಿಸಿತು.
ಪದವೀಧರ ಮತದಾರರ ವಿಶೇಷ ನೋಂದಣಿ ನೋಡಲ್ ಅಧಿಕಾರಿ ಚಿದಾನಂದ ಅವರು ಮಾತನಾಡಿ, ಜಾಥಾದಲ್ಲಿ ಹಾಜರಿದ್ದ ಎಲ್ಲಾ ಅಧಿಕಾರಿ, ಸಿಬ್ಬಂದಿಗಳಿಗೆ ಪದವಿ ಪಡೆದ ಎಲ್ಲಾ ನೌಕರರು ಈಶಾನ್ಯ ಪದವೀಧರರ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ನಮೂನೆ-18ರ ಜೊತೆಗೆ ಅಗತ್ಯವಾದ 02 ಪಾಸಪೋರ್ಟ ಸೈಜ್ ಫೋಟೋ, ಇಲಾಖಾ ಮುಖ್ಯಸ್ಥರ ದೃಢೀಕರಣ ಹಾಗೂ ಸಹಿಯೊಂದಿಗೆ ಸಲ್ಲಿಸಬೇಕು ಎಂದು ಕ್ರಮಗಳ ಬಗ್ಗೆ ವಿವರಿಸಿದರು.
ನಂತರ ತಹಶೀಲ್ದಾರ ವಿಠ್ಠಲ್ ಚೌಗಲೆ ಮಾತನಾಡಿ, ಕಳೆದ ಬಾರಿ ನೋಂದಾಯಿಸಿದ ಎಲ್ಲಾ ಪದವೀಧರರನ್ನು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ಅಗತ್ಯ ಸ್ವೀಪ್ ಕಾರ್ಯಕ್ರಮ ಜರುಗಿಸಿ ಗ್ರಾಮ ಪಂಚಾಯತಿವಾರು ಕ್ರಮವಹಿಸಲು ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಗದೀಶ್ ಜಿ.ಎಚ್ ಮಾತನಾಡಿ, ಎಲ್ಲಾ ಇಲಾಖೆಯ ಪದವಿ ಹೊಂದಿದ ಸಿಬ್ಬಂದಿಗಳ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಕ್ರಮವಹಿಸುವಂತೆ ಕರೆ ನೀಡಿದರು.
ಕೊಪ್ಪಳ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಮಾತನಾಡಿ, ಪ್ರತಿ ಗ್ರಾಮ ಪಂಚಾಯತಿಯಲ್ಲಿ ಈ ಕುರಿತು ವ್ಯಾಪಕ ಜಾಗೃತಿ ಕಾರ್ಯಕ್ರಮ ಜರುಗಿಸಲು ಈಗಾಗಲೇ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಕುರಿತು ಅರ್ಹ ಪದವೀಧರರು ಹೆಚ್ಚಿನ ಪ್ರಮಾಣದಲ್ಲಿ ನೊಂದಣಿ ಮಾಡಲು ಈಗಾಗಲೇ ಅಗತ್ಯ ಕ್ರಮವಹಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪದವಿ ಹೊಂದಿದ ನೌಕರರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ್ ಹೆಚ್, ತಾಲೂಕ ಯೋಜನಾಧಿಕಾರಿ ರಾಜೇಸಾಬ್ ನದಾಫ್, ಉಪತಹಶೀಲದಾರ ರೇಖಾ ದೀಕ್ಷಿತ್, ವಿವಿಧ ಇಲಾಖೆಗಳ ತಾಲೂಕ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

Comments are closed.