ಆರ್ಯ ವೈಶ್ಯ ಮಹಿಳಾ ಸಂಘದಿಂದ ದೇವರಾಜ್‌ಗೆ ಸನ್ಮಾನ

Get real time updates directly on you device, subscribe now.


ಗಂಗಾವತಿ: ಕಾರಟಗಿ ಪಟ್ಟಣದ ಕನ್ನಿಕಾ ಪರಮೇಶ್ವರಿ ದಏವಸ್ಥಾನದಲ್ಲಿ  ಶರನ್ನವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ
ಖ್ಯಾತ ನೃತ್ಯ ನಿರ್ದೇಶಕ ಹಾಗು ಕರ್ನಾಟಕ ಕಾರ್ಯನಿರತ ಪತ್ರಕರ್ತರ  ಸಂಘದ ಗಂಗಾವತಿ ತಾಲೂಕಾ ಪ್ರಧಾನ ಕಾರ್ಯದರ್ಶಿ ಬಿ.ದೇವರಾಜ್ ಇವರಿಗೆ ಅದ್ಧೂರಿ ಸನ್ಮಾನ ಮಾಡಲಾಯಿತು.
ಇದಕ್ಕೂ ಮುನ್ನಾ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಎರಡನೇ ದಿನ ಸೋಮವಾರದಂದು ದೇವಿಗೆ ವಿಶೇಷ
ಅಲಂಕಾರ ಹಾಗೂ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಜರುಗಿದವು. ನವರಾತ್ರಿಯ ಪ್ರಯುಕ್ತ ಕನ್ನಿಕಾ ಪರಮೇಶ್ವರಿ ದೇವಿಗೆ ವಿಶೇಷ ಪೂಜೆ
ಪುನಸ್ಕಾರಗಳು ಜರುಗಿದವು, ಆರ್ಯ ವೈಶ್ಯ ಮಹಿಳಾ ಸಂಘದ ಸದಸ್ಯರು, ಮಕ್ಕಳಿಂದ ಕೋಲಾಟ, ಭರತನಾಟ್ಯ, ಭಜನೆ ದಾಂಡಿಯ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು, ಶರನ್ನವರಾತ್ರಿಯ ಕಾರ್ಯಕ್ರಮದಲ್ಲಿ ದೇವಸ್ಥಾನ ಆಡಳಿತ ಮಂಡಳಿಯ ಗೌರವ ಅಧ್ಯಕ್ಷ
ಪ್ರಹ್ಲಾದ ಶೆಟ್ಟಿ, ಅಧ್ಯಕ್ಷರು ಪಿ.ಗೋವಿಂದರಾಜ್, ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!