ಇಂದರಗಿ ಪರಶುರಾಮ್ ವಣಗೇರಿಗೆ ಪುಟ್ಟರಾಜ ಶ್ರೀ ಗೌರವ
ಗಂಗಾವತಿ: ರಕ್ತರಾತ್ರಿ ನಾಟಕದ ಮೂಲಕ ಕರ್ನಾಟಕ ಮನೆಮಾತಾದ ಗಂಗಾವತಿ ವಿಧಾನಸಭಾ ಕ್ಷೇತ್ರದ ಇಂದರಗಿ ಗ್ರಾಮದ ಪರಶುರಾಮ್ ವಣಗೇರಿಗೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮಸಾರಿ ನೆಲ್ಕುದ್ರಿ ಗ್ರಾಮದಲ್ಲಿ ಶ್ರೀ ಪಟ್ಟರಾಜ್ ಸಂಗೀತ ಕಲಾ ಬಳಗ ಗೊಲ್ಲರಹಳ್ಳಿ ಇವರು ಹಮ್ಮಿಕೊಂಡಿದ್ದ ಗಾನಯೋಗಿ ಪುಟ್ಟರಾಜ ಗವಾಯಿಗಳ ಪುಣ್ಯ ಸ್ಮರಣೆಯ ಕಾರ್ಯಕ್ರಮದಲ್ಲಿ ಶ್ರೀ ಪುಟ್ಟರಾಜ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯನಗರ, ಶ್ರೀ ವಿಶ್ವಜ್ಯೋತಿ ಕಲಾ ಸೇವಾ ಟ್ರಸ್ಟ್ ಸಹಯೋಗದಲ್ಲಿ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಪಂಡಿತ ಶ್ರೀ ಪುಟ್ಟರಾಜ ಸಂಗೀತ ಕಲಾ ಬಳಗದ ಅಧ್ಯಕ್ಷ, ಪತ್ರಕರ್ತ ನಾಗರಾಜ್ ಮಾತನಾಡಿ, ಪರಶುರಾಮ್ ಅವರು ಗ್ರಾಮದಲ್ಲಿ ಜನಿಸಿದರೂ ಕೂಡಾ ಕಬ್ಬಣದ ಕಡಲೆಯಂಥ ರಕ್ತರಾತ್ರಿ ನಾಟಕದ ಸಂಭಾಷಣೆಯನ್ನು ನಿರರ್ಗಳವಾಗಿ ನುಡಿಯುತ್ತಾರೆ ಅವರು ಕಲೆಯ ಬಗೆಗಿನ ಅವರ ಗೀಳು ಇಂದು ಪ್ರಶಸ್ತಿ
ಪಡೆಯುವಂತೆ ಮಾಡಿದೆ. ಅವರ ಆಂಗೀಕ ಭಾವಾಭಿನಯ, ಪಾತ್ರದಲ್ಲಿ ತಲ್ಲೀನರಾಗುವ ಅವರ ಸಾಮಾರ್ಥ್ಯ ಎತ್ತರದಲ್ಲಿದ್ದು, ಅವರನ್ನು ಕಿರಿಯ ಕಲಾವಿದರು ಅವರನ್ನು ಅನುಕರಿಸಬೇಕಿದೆ ಎಂದು ಗುಣಗಾನ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಕಲಾವಿದರ ಒಕ್ಕೂಟದ ವಿಜಯನಗರ ಜಿಲ್ಲಾಧ್ಯಕ್ಷ ರಮೇಶ್ ಹಂಚಿನಮಿ, ಈ ಸಂದರ್ಭದಲ್ಲಿ ಕೋಲ್ಕಾರ್ ಯಲ್ಲಪ್ಪ, ಚಿಂತ್ರಪಳ್ಳಿಯ ಆರ್,ಬಿ.ಬೆಳ್ಳಕ್ಕಿ, ಬ್ಯಾಡರ ಬಸವರಾಜ್ ಇದ್ದರು. ಇಟಗಿ
ದೊಡ್ಡಬಸಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
Comments are closed.