ಜಮಾಅತೆ ಇಸ್ಲಾಮೀ ಹಿಂದ್,ವತಿಯಿಂದ ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮುಹಮ್ಮದ್ (ಸ) ಒಂದು ವಿಚಾರ ಗೋಷ್ಠಿ

Get real time updates directly on you device, subscribe now.

ಪ್ರವಾದಿಯವರ ಸಂದೇಶವು ಯಾವುದೇ ಒಂದು ಪ್ರದೇಶ, ಕಾಲಕ್ಕೆ ಸೀಮಿತವಾದುದಲ್ಲ
ಕೊಪ್ಪಳ: ಇದೇ ಭಾನುವಾರದಂದು ಬೆಳಿಗ್ಗೆ ೧೦:೪೫ ಗಂಟೆಗೆ ಜಮಾಅತೆ ಇಸ್ಲಾಮೀ ಹಿಂದ್,ಕೊಪ್ಪಳ ವತಿಯಿಂದ ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮುಹಮ್ಮದ್ (ಸ)ಎಂಬ ಶೀರ್ಷಿಕೆಯಡಿ ಯಲ್ಲಿ ಒಂದು ವಿಚಾರ ಗೋಷ್ಠಿಯನ್ನು ಸಾಹಿತ್ಯ ಭವನ, ಅಶೋಕಸರ್ಕಲ್ ಹತ್ತಿರ, ಕೊಪ್ಪಳದಲ್ಲಿ ಆಯೋಜಿಸಲಾಗಿದೆ. ಪ್ರವಾದಿ ಮುಹಮ್ಮದ(ಸ)ರು ಹೇಳಿರುವರು: “ಎಲ್ಲಾ ಸೃಷ್ಟಿಗಳೂ ಅಲ್ಲಾಹನ ಕುಟುಂಬವಾಗಿದ್ದು ಆತನ ಕುಟುಂಬದವರೊಂದಿಗೆ ಸದ್ವರ್ತನೆ ತೋರುವವರವರು ಯಾವುದೇ ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತವಾದವರಲ್ಲ. ಈ ಭೂಲೋಕದಲ್ಲಿರುವ ಪ್ರತಿಯೊಬ್ಬರಿಗೂ ಅವರು ಪ್ರವಾದಿಯಾಗಿದ್ದಾರೆ. ಅವರ ಸಂದೇಶವು ಯಾವುದೇ ಒಂದು ಪ್ರದೇಶ, ಕಾಲಕ್ಕೆ ಸೀಮಿತವಾದುದಲ್ಲ. ಅದು ಸಾರ್ವತ್ರಿಕವೂ ಸಾರ್ವಕಾಲಿಕವೂ ಆಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್‌ನ ಕಾರ್ಯಕರ್ತ ಅಫ್ತಾಬ್ ಹುಸೇನ್ ಕುಷ್ಟಗಿ ಹೇಳಿದರು.
ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು, ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮುಹಮ್ಮದ್ (ಸ) ಎಂಬ ವಿಚಾರ ಗೋಷ್ಠಿಯಲ್ಲಿ ಶ್ರೀ ಶ್ರೀ ಚೈತನ್ಯಾನಂದ ಸ್ವಾಮೀಜಿಗಳು, ಕೊಪ್ಪಳ ಕಾರ್ಯಕ್ರಮದ ಸಾನಿಧ್ಯವಹಿಸುವರು.
ಮುಖ್ಯ ಅತಿಥಿಗಳಾಗಿ ಸಂಗಣ್ಣ ಕರಡಿ ಲೋಕಸಭಾ ಸದಸ್ಯರು. ರಾಘವೆಂದ್ರ ಹಿಟ್ನಾಳ್ ಶಾಸಕರು, ಕೊಪ್ಪಳ. ಯೋಗೇಶ್ ಮಾಸ್ಟರ್ ಚಿಂತಕರು ಮತ್ತು ಲೇಖಕರು. ಫಾದರ್ ಜೋ ಪ್ರಾಚಾರ್ಯರು ಎಸ್.ಎಫ್.ಎಸ್ ಶಾಲೆ ಕೊಪ್ಪಳ ಹಾಗೂ ಇನ್ನು ಅನೇಕ ಗಣ್ಯ- ಮಾನ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು. ವಿದ್ವಾಂಸರು ಹಾಗೂ ಪ್ರವಚನಕಾರರಾದ ಮುಹಮ್ಮದ್ ಕುಂಞ ಅವರು ಸೀರತ್-ಪ್ರವಚನ ನೀಡುವರು.
ಅದೇ ರೀತಿಯಾಗಿ ಸಮಾಜದಲ್ಲಿ ಶಾಂತಿ- ಸೌಹಾರ್ದತೆಗಾಗಿ ಸಕ್ರೀಯಗೊಂಡಿರುವ ಸದ್ಭಾವನಾ ಮಂಚ್, ಕೊಪ್ಪಳ ಹಾಗೂ ಜಮಾಅತೆ ಇಸ್ಲಾಮೀ ಹಿಂದ್,ಕೊಪ್ಪಳ ವತಿಯಿಂದ ದಿ.೧೪ ರ ಶನಿವಾರ ಸಾಯಂಕಾಲ ೦೭:೦೦ ಗಂಟೆಗೆ ಪವಾರ್ ಗ್ರಾಂಡ್ ಹೋಟೇಲ್, ಕೊಪ್ಪಳದಲ್ಲಿ ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕ ಕಾರ್ಯದರ್ಶಿಗಳಾದ ಮುಹಮ್ಮದ್ ಕುಂಞ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ದೇಶದಲ್ಲಿ ಧರ್ಮದ ಹೆಸರಲ್ಲಿ ಅಧರ್ಮದ ವೈಭವೀಕರಣವಾಗುತ್ತಿರುವುದು ಸಮಾಜ ಹಾಗೂ ದೇಶಕ್ಕೆ ಮಾರಕವಾಗಿದೆ.
ಸದ್ಭಾವನಾ ಮಂಚ್ ಸಮಾಜಮುಖಿ ವೇದಿಕೆಯಾಗಿದ್ದು ಯಾವುದೇ ರಾಜಕೀಯ ಸಾಧನೆಯ ಉದ್ದೇಶವಿಲ್ಲದೆ, ಮಾನವೀಯ ಸಂಬಂಧಗಳನ್ನು ಶಿಥಿಲಗೊಳಿಸುವ ಪ್ರಯತ್ನಗಳ ನಡುವೆ ಈ ವೇದಿಕೆಯಿಂದ ಎಲ್ಲ ವರ್ಗಗಳಿಗೆ ನ್ಯಾಯ ಮತ್ತು ಹಕ್ಕುಗಳು ಲಭಿಸುವಂತಾಗಬೇಕು. ದೇಶದಲ್ಲಿ ಗಲಭೆಗಳನ್ನು ಸೃಷ್ಟಿಸಿ ಅದರಿಂದ ರಾಜಕೀಯ ಲಾಭ ಪಡೆಯುವ ವರ್ಗ,ಅದು ತುಂಬಾ ಚಿಕ್ಕದು.ಆದರೆ, ಸಜ್ಜನರ ದೊಡ್ಡ ವಿಭಾಗವು ಮೌನಮುರಿಯುವುದರ ಮೂಲಕ ಪ್ರತಿಭಟಿಸುವುದು ಇಂದಿನ ಕಾಲದ ಬೇಡಿಕೆಯಾಗಿದೆ. ವರ್ತಮಾನದಲ್ಲಿಯೂ ಶ್ರೇಣಿಕೃತ ವ್ಯವಸ್ಥೆಯನ್ನು ಉಳಿಸಿಕೊಂಡು ದುರ್ಬಲ ವರ್ಗದವರನ್ನು ಶೋಷಿಸುವ ಪ್ರಯತ್ನ ಮುಂದುವರೆದುಕೊಂಡೇ ಇದೆ.
ಅಶಾಂತಿಯ ವಾತಾವರಣದಲ್ಲಿ ಕೇಡು-ದ್ವೇಷವನ್ನು, ಪ್ರೀತಿ-ವಿಶ್ವಾಸದ ಮೂಲಕ ಎದುರಿಸಿ ಗೆಲುವು ಸಾಧಿಸಬಹುದು. ನಾವು ಇಂದು ಅಪಾಯದ ಮಟ್ಟವನ್ನು ತಲುಪಿದ್ದು, ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿಯನ್ನು ಅರಿಯಬೇಕಾದುದು ಅವಶ್ಯಕವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಎಲ್ಲ ಜಾತಿ, ಧರ್ಮದ ಜನರು ಪಾಲ್ಗೊಳ್ಳುವಂತಹ,ಸಮಾಜದಲ್ಲಿ ಬೆರೆಯುವಂತಹ ವಾತಾವರಣ ನಿರ್ಮಾಣವಾಗಬೇಕು ಎನ್ನುವ ಉದ್ದೇಶದಿಂದ ಸದ್ಭಾವನ ಮಂಚ್, ಕೊಪ್ಪಳ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದರಲ್ಲಿ ಸಮಾಜದ ಪ್ರತಿಯೊಂದು ಸಮುದಾಯದ ಜನರು ಸದ್ಭಾವನಾ ಮಂಚ್ ವೇದಿಕೆಯ ಸದಸ್ಯರಾಗಿದ್ದು, ಕೊಪ್ಪಳದ ರಾಜಕೀಯೇತರರು ಸಮಾಜದ ಹಿತಚಿಂತಕರು, ಸಮಾಜ ಸುಧಾರಕರು, ನಗರದ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂಬ ಮಹದುದ್ದೇಶವೂ ಇದರಲ್ಲಿ ಅಡಗಿದೆ. .ಭಾನುವಾರದ ಸಾಹಿತ್ಯ ಭವನದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಎಂದರು. ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್,ಕೊಪ್ಪಳ ಘಟಕದ ಅಧ್ಯಕ್ಷ ಸೈಯದ್ ಹಿದಾಯತ್‌ಅಲಿ, ಜಮಾಅತ್‌ನ ಸದಸ್ಯ ಮುಹಮ್ಮದ್ ಫಹೀಮುದ್ದೀನ್, ಕಾರ್ಯದರ್ಶಿ ಕಲೀಮುಲ್ಲಾ ಖಾನ್, ಹಾಗೂ ಅಸ್ಗರ್ ಖಾನ್ ಉಪಸ್ಥಿತರಿದ್ದರು

Get real time updates directly on you device, subscribe now.

Comments are closed.

error: Content is protected !!