ರಾಜೀವ್ ಬಗಾಡೆ ಆತ್ಮಹತ್ಯೆ ಪ್ರಕರಣ: ೭ ಜನರ ವಿರುದ್ದ ಪ್ರಕರಣ ದಾಖಲು
ಕೊಪ್ಪಳ : ಗುತ್ತಿಗೆದಾರ ರಾಜೀವ. ಬಗಾಡೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ೭ ಜನರ ವಿರುದ್ದ ನಗರಠಾಣೆಯಲ್ಲಿ ಎಪ್ ಐಆರ್ ದಾಖಲಾಗಿದೆ.
- ಅಕ್ಟೋಬರ್ ೧೦ ರಂದು ಕೊಪ್ಪಳದ ಪಿಶ್ ಲ್ಯಾಂಡ್ ಬಳಿ ವಿಷ ಸೇವಿಸಿದ್ದ ರಾಜೀವ್ ಬಗಾಡೆಯವರನ್ನು ಮೊದಲು ಚಿಕಿತ್ಸೆಗಾಗಿ ಸ್ಥಳೀಯ ಕೆ.ಎಸ್. ಹಾಸ್ಪಿಟಲ್ ಗೆ ದಾಖಲು ಮಾಡಲಾಗಿತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ೧೩ರಂದು ಸಾವನ್ನಪ್ಪಿದ್ದರು. ತಮ್ಮ ಮಗನ ಆತ್ಮಹತ್ಯೆ ಗೆ ಕಾರಣರಾಗಿದ್ದಾರೆ ಎಂದು ೭ ಜನರ ವಿರುದ್ದ ರಾಜೀವ್ ಬಗಾಡೆಯವರ ತಂದೆ ಮೋಹನ್ ಬಗಾಡೆ ದೂರು ದಾಖಲಿಸಿದ್ದಾರೆ. ಗುತ್ತಿಗೆದಾರ ದೊಡ್ಡಪ್ಪ ಹರಿಗುರ, ಮಲ್ಲಿಕಾರ್ಜುನ, ಪ್ರಸನ್ನ , ಆರ್.ಎಂ.ರಫಿ, ಡಾ.ಉಪೇಂದ್ರ ರಾಜು, ಮುನಿ ವಿಜಯಕುಮಾರ, ಚನ್ನಪ್ಪ ಕೋಟಿಹಾಳ ವಿರುದ್ದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.