ಸಾರ್ವಜನಿಕ ಬದುಕಿನ ಏಳ್ಗೆಯಲ್ಲಿ ಅಂಚೆ ಇಲಾಖೆಯ ಪಾತ್ರ ಪ್ರಮುಖ-ಕರಡಿ ಸಂಗಣ್ಣ
ಭಾರತೀಯ ಅಂಚೆ ಇಲಾಖೆ ಗದಗ ವಿಭಾಗದಿಂದ ಡಾಕ್ ಕಮ್ಯುನಿಟಿ ಡೆವಲಪಮೆಂಟ್ ಪ್ರೋಗ್ರಾಮ ಅಡಿಯಲ್ಲಿ ಅಂಚೆ ಜನಸಂಪರ್ಕ ಅಭಿಯಾನದ ಚಾಲನಾ ಕಾರ್ಯಕ್ರಮವು ಅಕ್ಟೋಬರ್ 12ರಂದು ನಗರದ ಸಾಹಿತ್ಯ ಭವನದಲ್ಲಿ ನಡೆಯಿತು.
ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ, ಸಾರ್ವಜನಿಕ ಬದುಕಿನ ಏಳ್ಗೆಯಲ್ಲಿ ಅಂಚೆ ಇಲಾಖೆಯ ಪಾತ್ರ ಪ್ರಮುಖವಾಗಿದೆ. ಅಂಚೆ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತಿದ್ದಾರೆ. ಮಹತ್ವದ ಪತ್ರಗಳನ್ನು ಅತ್ಯಂತ ಜತನದಿಂದ ಜನರ ಮನೆ ಬಾಗಿಲಿಗೆ ಹೋಗಿ ತಲುಪಿಸುವ ಕಾರ್ಯ ಮಾಡುವ ಅಂಚೆ ಇಲಾಖೆಯ ಸಿಬ್ಬಂದಿಯನ್ನು ಮತ್ತು ಪತ್ರಗಳ ವಿನಿಮಯ ಜತೆಗೆ ಸರ್ಕಾರದ ನಾನಾ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಅಂಚೆ ಇಲಾಖೆಯ ಅಧಿಕಾರಿಗಳನ್ನು ನಾವು ಗೌರವಿಸಬೇಕು ಎಂದು ತಿಳಿಸಿದರು.
ದೂರದೃಷ್ಟಿಯನ್ನು ಹೊಂದಿದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಅನೇಕ ಜನಪರ ಯೋಜನೆಗಳನ್ನು ರೂಪಿಸಿದ್ದಾರೆ. ಅದರ ಲಾಭವನ್ನು ಅನೇಕ ಜನರು ಪಡೆಯುತ್ತಿದ್ದಾರೆ. ಈ ಕಾರ್ಯದಲ್ಲಿ ಅಂಚೆ ಇಲಾಖೆಯ ಪಾತ್ರ ಮಹತ್ವದ್ದಾಗಿದೆ. ಈ ವಿಷಯದಲ್ಲಿ ಉತ್ತಮ ಕೆಲಸ ಮಾಡಿದ ಕೊಪ್ಪಳ ಮತ್ತು ಗದಗ ಜಿಲ್ಲೆಯ ಅಂಚೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪಾತ್ರ ಸ್ಮರಣೀಯವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ್ ಅವರು ಮಾತನಾಡಿ, ಅಂಚೆ ಇಲಾಖೆಯು ರೂಪಿಸುವ ಎಲ್ಲಾ ಯೋಜನೆಗಳು ಜನಪ್ರಿಯತೆಯಿಂದ ಕೂಡಿವೆ. ಬಹುಕೋಟಿ ಜನರಿಗೆ ಈ ಇಲಾಖೆಯ ಯೋಜನೆಗಳು ಆಸರೆಯಾಗಿವೆ ಎಂದು ತಿಳಿಸಿದರು.
ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ.ರವಿ ಅವರು ಮಾತನಾಡಿ, ಭಾರತ ದೇಶದ ಅಭಿವೃದ್ಧಿಯಲ್ಲಿ ವಿವಿಧ ಇಲಾಖೆಗಳಷ್ಟೇ ಅಂಚೆ ಇಲಾಖೆಯ ಪಾತ್ರ ಸಹ ಅಷ್ಟೇ ಪ್ರಮುಖವಾದುದಾಗಿದೆ. ಅಂಚೆ ಇಲಾಖೆಯು ಜೀವನದ ಅವಿಭಾಜ್ಯ ಅಂಗವಾಗಿದೆ. ಅಂಚೆ ಇಲಾಖೆಯಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲಿರುವ ಶ್ರದ್ಧೆ, ವಿನಯಶೀಲ ಗುಣಗಳು ಇತರರಿಗೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೊಪ್ಪಳ ನಗರಸಭೆಯ ಅಧ್ಯಕ್ಷೆ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ್, ಯುವ ಮುಖಂಡರಾದ ಮಂಜುಳಾ ಕರಡಿ, ಮಹಾಂತೇಶ ಪಾಟೀಲ, ಮಹಾಲಕ್ಷಿö್ಮ ಕಂದಾರಿ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ತಿಪ್ಪಣ್ಣ ಸಿರಸಗಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಗವಿಸಿದ್ದಪ್ಪ ಹೊಸಮನಿ, ಅಂಚೆ ಇಲಾಖೆಯ ಗದಗ ವಿಭಾಗದ ಅಧೀಕ್ಷಕರಾದ ಎನ್.ಜಿ ಭಂಗಿಗೌಡರ, ಕೊಪ್ಪಳ ಅಂಚೆ ನಿರೀಕ್ಷಕರಾದ ಮಹಾಂತೇಶ ತೊಗರಿ, ಅಂಚೆ ಅಧಿಕಾರಿಗಳಾದ ಭೀಮಸೇನ್ ಎ.ಜೆ., ಜಿ.ಎನ್.ಹಳ್ಳಿ, ಜಗದೀಶ ಚಲವಾದಿ, ವೈ.ವೈ.ಕೋಳೂರ, ರವಿ ಕಾಂತನ್ನವರ, ಸಕ್ರಪ್ಪ ಹೂಗಾರ, ಅಶೋಕ, ಕಲ್ಲಯ್ಯ ಸ್ವಾಮಿ, ಕಿರಣ್ ಹೆಬ್ಬಳ್ಳಿ, ಪರ್ವೀನ್ ಬಾನು ಹಾಗೂ ಇನ್ನೀತರರು ಇದ್ದರು. ಅಂಚೆ ಅಧಿಕಾರಿ ಅಡಿವೆಪ್ಪ ಕವಿತಾಳ ನಿರೂಪಿಸಿದರು. ಅಂಚೆ ಇಲಾಖೆಯ ಸವಿತಾ ಅವರು ಪ್ರಾರ್ಥಿಸಿದರು.
ಅಂಚೆ ಇಲಾಖೆ ಸೇವೆಗಳನ್ನು ಜನರಿಗೆ ತಲುಪಿಸಲು ಅಂಚೆ ಇಲಾಖೆ ಹಮ್ಮಿಕೊಂಡಿದ್ದ ಅಂಚೆ ಜನ ಸಂಪರ್ಕ ಅಭಿಯಾನದಲ್ಲಿ ಆಧಾರ್ ಜೋಡಣೆ, ಉಳಿತಾಯ, ವಿಮೆ ಸೇರಿದಂತೆ ಇನ್ನೀತರ ಸೇವೆಗಳನ್ನು ಬೆಳಗ್ಗೆಯಿಂದ ಸಂಜೆವರೆಗೆ ನೀಡಲಾಯಿತು.

Comments are closed.