ಶಿಬಿರಾರ್ಥಿಗಳೊಂದಿಗೆ ಟ್ಯಾಕ್ಟರ್, ಟಾಟಾ ಎಸಿಯಲ್ಲಿ ಸಿಇಓ ಪ್ರಯಾಣ

Get real time updates directly on you device, subscribe now.

 

: ಕೊಪ್ಪಳದ ಎಸ್‌ಬಿಐ ಆರ್ಸೆಟಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಮಹಿಳೆಯರ 30 ದಿನಗಳ ಟ್ರಾಕ್ಟರ್ ಚಾಲನಾ ಮತ್ತು ಲಘು ವಾಹನ ಚಾಲನಾ ತರಬೇತಿಯ ಸಮಾರೋಪ ಸಮಾರಂಭವನ್ನು ಅಕ್ಟೋಬರ್ 04ರಂದು ನಗರದ ಆರ್ಸೆಟಿ ಸಂಸ್ಥೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಭಾಗವಹಿಸಿ, ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಜಿಲ್ಲೆಯ ಗ್ರಾಮ ಪಂಚಾಯತಗಳಲ್ಲಿನ ಸ್ವಚ್ಛತಾ ವಾಹನಗಳನ್ನು ಚಲಾಯಿಸಲು ಚಾಲನಾ ತರಬೇತಿ ಪವೆದಿರುವ ಮಹಿಳೆಯನ್ನು ನೇಮಕ ಮಾಡಿಕೊಳ್ಳಲಾಗುವುದು. ಪ್ರತಿ ಮನೆಗಳಿಂದ ಕಸ ಸಂಗ್ರಹಣೆ ಮಾಡಬೇಕು. ಗ್ರಾಮದ ಸ್ವಚ್ಛತೆಗೆ ಶ್ರಮಿಸಬೇಕು. ಅಲ್ಲದೇ ತೆರಿಗೆ ಸಂಗ್ರಹಣೆಗೂ ಒತ್ತು ನೀಡಬೇಕು. ನೇಮಕವಾದ ಬಳಿಕ ಆರು ತಿಂಗಳವರಗೆ ಗ್ರಾಪಂ ನಿಂದ ವೇತನ ಸಿಗಲಿದೆ. ತದನಂತರ ತಾವು ಸಂಗ್ರಹಿಸುವ ತೆರಿಗೆ ಹಣದಲ್ಲಿಯೇ ನಿಮಗೆ ವೇತನ ಸಿಗಲಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ದುಂಡಪ್ಪ ತುರಾದಿ, ಲಿಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕರಾದ ವಿರೇಂದ್ರ ಕುಮಾರ, ಎಸ್.ಬಿ.ಐ ಆರ್ಸೆಟಿ ನಿರ್ದೇಶಕರಾದ ಶ್ರೀನಿವಾಸ್ ರಾಜಾಪುರೋಹಿತ, ಜಿಲ್ಲಾ ಪಂಚಾಯತ್ ಸಂಜೀವಿನಿ ಘಟಕದ ಅಂಬಣ್ಣ, ಆರ್ಸೆಟಿ ಸಂಸ್ಥೆಯ ಫೇಕಲ್ಟಿ ಲಕ್ಷ್ಮಿಕಾಂತ, ಕೌಶಲ್ಯಾಭಿವೃದ್ಧಿ ಇಲಾಖೆಯ ಮಂಜುನಾಥ ಬೆಲ್ಲದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
*ಪ್ರಮಾಣ ಪತ್ರ ವಿತರಣೆ:* ಕೊಪ್ಪಳದ ಎಸ್‌ಬಿಐ ಆರ್ಸೆಟಿ ಸಂಸ್ಥೆಯಿಂದ ಸೆಪ್ಟೆಂಬರ್ 06ರಿಂದ ಅಕ್ಟೋಬರ್ 05 ರವರೆಗೆ 30 ದಿನಗಳ ಕಾಲ ತರಬೇತಿ ಪಡೆದ ಜಿಲ್ಲೆಯ ಗ್ರಾಮೀಣ ಬಾಗದ ಒಟ್ಟು 28 ಮಹಿಳಾ ಶಿಬಿರಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಶಿಬಿರಾರ್ಥಿಗಳೊಂದಿಗೆ ಟ್ಯಾಕ್ಟರ್, ಟಾಟಾ ಎಸಿನಲ್ಲಿ ಸಿಇಓ ಪ್ರಯಾಣ: ಕಾರ್ಯಕ್ರಮಕ್ಕೂ ಮುನ್ನ ಸಂಸ್ಥೆಯಲ್ಲಿ ತರಬೇತಿ ಪಡೆದ ಮಹಿಳೆಯರು ಟ್ರಾಕ್ಟರ್, ಟಾಟಾ ಎಸಿ ವಾಹನಗಳನ್ನು ಚಲಾಯಿಸುವುದನ್ನು ಸಿಇಓ ಅವರು ಸ್ವತಃ ವಾಹನದಲ್ಲಿ ಕುಳಿತು ಕೊಪ್ಪಳ ಅಶೋಕ ಸರ್ಕಲ್ ದಿಂದ ಬಸ್ ಸ್ಟಾಂಡ್ ವರೆಗೆ ಪ್ರಯಾಣ ಮಾಡುವ ಮೂಲಕ ವೀಕ್ಷಿಸಿದರು. ಮಹಿಳೆಯರ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

 

Get real time updates directly on you device, subscribe now.

Comments are closed.

error: Content is protected !!
%d bloggers like this: