ಕೊಪ್ಪಳ ಜಿಲ್ಲೆಗೆ ಕೇಂದ್ರ ಬರ ಅಧ್ಯಯನ  ತಂಡ ಆಗಮನ; ಬೆಳೆ ಹಾನಿ ಪರಿಶೀಲನೆ

Get real time updates directly on you device, subscribe now.

 ಜಿಲ್ಲೆಯಲ್ಲಿ ಬರ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ಕೈಗೊಳ್ಳಲು ಕೇಂದ್ರ ಬರ ಅಧ್ಯಯನ (ಐಎಂಟಿಸಿ) ತಂಡ ಅಕ್ಟೋಬರ್ 06ರಂದು ಕೊಪ್ಪಳ ಜಿಲ್ಲೆಗೆ ಆಗಮಿಸಲಿದೆ.
ಕೇಂದ್ರ ಕುಡಿಯುವ ನೀರು ಹಾಗು ನೈರ್ಮಲ್ಯ ಸಚಿವಾಲಯದ ಹೆಚ್ಚುವರಿ ಸಲಹೆಗಾರರಾದ ಡಿ. ರಾಜಶೇಖರ್ ಐ.ಎ.ಎಸ್ ನೇತೃತ್ವ, ಪಶುಸಂಗೋಪನೆ ಇಲಾಖೆಯ ‌ನಿರ್ದೇಶಕರಾದ ಆರ್ ಥಾಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತರಾದ ಮೋತಿರಾಂ, ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕರಾದ ಕರೀಗೌಡ ಐ.ಎ.ಎಸ್ ಅವರನ್ನು ಒಳಗೊಂಡ ತಂಡವು ಅ.06ರಂದು ಜಿಲ್ಲೆಗೆ ಭೇಟಿ ನೀಡಲಿದೆ.
ತಂಡವು ಅಂದು ಗದಗ ಜಿಲ್ಲೆಯ ಗಜೇಂದ್ರಗಡದಿಂದ ಮಧ್ಯಾಹ್ನ 3 ಗಂಟೆಗೆ ನಿರ್ಗಮಿಸಿ 3.20ಕ್ಕೆ  ಬಂಡಿ ಕ್ರಾಸ್ ಗೆ ಆಗಮಿಸಿ 3.20ರಿಂದ 3.30ರವರೆಗೆ ಯಲಬುರ್ಗಾ ತಾಲೂಕಿನ ಯಲಬುರ್ಗಾ ಹೋಬಳಿ ವ್ಯಾಪ್ತಿಯ ರೈತರ ಹೊಲಗಳಿಗೆ ಭೇಟಿ ನೀಡಿ ಕೃಷಿ ಬೆಳೆಗಳ ಅಧ್ಯಯನ ಮಾಡಲಿದೆ. ಬಳಿಕ 3.35 ರಿಂದ 3.50 ರವೆರೆಗೆ ಕುಷ್ಟಗಿ ತಾಲೂಕಿನ ಹನುಮಸಾಗರ ಹೋಬಳಿ ವ್ಯಾಪ್ತಿಯ ಡೊಣ್ಣೆಗುಡ್ಡಾ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸುವರು.
ಬಳಿಕ ಕುಷ್ಟಗಿ ತಾಲೂಕಿನ ಯಲಬುಣಚಿ ಗ್ರಾಮಕ್ಕೆ ತೆರಳಿ  ಹನುಮನಾಳ ಹೋಬಳಿಯ ಜಮೀನಿನಲ್ಲಿ 3.55 ರಿಂದ 04 ಗಂಟೆವರೆಗೆ ಬೆಳೆ ಹಾನಿ ವೀಕ್ಷಣೆ ನಡೆಸುವರು. ಬಳಿಕ ಸಂಜೆ 4.05 ರಿಂದ 4.15 ರವರೆಗೆ ಬೆನಕನಾಳ ಗ್ರಾಮದ ಹೊಲದಲ್ಲಿ, ಸಂಜೆ 4.20 ರಿಂದ 4.30ರವರೆಗೆ ಮದ್ನಾಳ ಗ್ರಾಮದಲ್ಲಿ ಬೆಳೆ ಹಾನಿ ವೀಕ್ಷಣೆ ನಡೆಸುವರು.
ಬಳಿಕ 4.40 ರಿಂದ 4.55ರವರೆಗೆ  ಬಾದಿಮನಾಳ ಗ್ರಾಮದ ಕೆರೆಯ ಹತ್ತಿರ ಬೆಳೆ ಹಾನಿ ಮತ್ತು ನರೇಗಾ ಕಾಮಗಾರಿಯ ಬಗ್ಗೆ ಪರಿಶೀಲಿಸುವರು.
ಬಳಿಕ ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮಕ್ಕೆ ತೆರಳಿ  5.10 ರಿಂದ 5.30 ರವರೆಗೆ ಚಳಗೇರಾ ಗ್ರಾಮದ ರೈತರ ಕೃಷಿ ಜಮೀನಿಗೆ ಭೇಟಿ ನೀಡಿ ಪರಿಶೀಲಿಸುವರು. ಅದೇ ಗ್ರಾಮದ ಮತ್ತೊಬ್ಬ ರೈತನ ತೋಟಗಾರಿಕೆ ಬೆಳೆಯ ವೀಕ್ಷಣೆ ಹಾಗೂ ಆರ್.ಕೆ.ವಿ.ವೈ & ವರ್ಮಿ ಕಾಂಪೋಸ್ಟ್ ಘಟಕಕ್ಕೆ ಭೇಟಿ ನೀಡುವರು. ಬಳಿಕ 5.45ಕ್ಕೆ ಕುಷ್ಟಗಿ ಮಾರ್ಗವಾಗಿ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮಕ್ಕೆ ತೆರಳಿ ಸಂಜೆ 5.50 ರಿಂದ 6.05 ರವರೆಗೆ ಕೃಷಿ ಬೆಳೆಗಳು ಮತ್ತು ನರೇಗಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡುವರು. ಅಲ್ಲಿಂದ ನಿರ್ಗಮಿಸಿ ಕೊಪ್ಪಳ ತಾಲೂಕಿನ ಹೊಸೂರ ಕ್ರಾಸ್ ಬಳಿಗೆ ಬಂದು
ಸಂಜೆ 6.15 ರಿಂದ 6.25 ರವರೆಗೆ ಇರಕಲಗಡ ಹೋಬಳಿಯ ಮೆತಗಲ್ ಕ್ರಾಸ್ ಹತ್ತಿರದ ಹೊಲದಲ್ಲಿ ಮತ್ತು ಬಿ.ಹೊಸಳ್ಳಿ ಗ್ರಾಮದಲ್ಲಿ ಕೃಷಿ ಬೆಳೆ ವೀಕ್ಷಣೆ ಮಾಡುವರು. ಅಲ್ಲಿಂದ 6.45ಕ್ಕೆ ನಿರ್ಗಮಿಸಿ ಹಿಟ್ನಾಳ ಟೋಲ್‌ಗೇಟ್ ಮಾರ್ಗವಾಗಿ ವಿಜಯನಗರ ಜಿಲ್ಲೆಯ ಕಡೆಗೆ ಬರ ಅಧ್ಯಯನ ತಂಡವು ತೆರಳಲಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: