ಆರ್ಥಿಕವಾಗಿ ಅಭಿವೃದ್ದಿ ಹೊಂದಬೇಕಾದರೆ ಸಹಕಾರ ಕ್ಷೇತ್ರದಿಂದ ಮಾತ್ರ ಸಾಧ್ಯ-ಶೇಖರಗೌಡ ಮಾಲಿ ಪಾಟೀಲ್                                          ಶೇಖರಗೌಡ ಮಾಲಿ ಪಾಟೀಲ್

0

Get real time updates directly on you device, subscribe now.

ಕೊಪ್ಪಳ-೧೪, ನಗರದ “ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣ”ದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ, ಕೊಪ್ಪಳ ತಾಲೂಕಿನ ಎಲ್ಲಾ ಸಹಕಾರ ಸಂಘಗಳು ಹಾಗೂ ಸಹಕಾರ ಇಲಾಖೆ, ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ  “೭೩ನೇ ಸಹಕಾರ ಸಪ್ತಾಹದ ಅಂಗವಾಗಿ” ಧ್ಯೇಯ: “ಸಹಕಾರ ಸಂಸ್ಥೆಗಳ ಬೆಳವಣಿಗೆಯಲ್ಲಿ ಉತ್ತಮ ಪರಿಸರ, ತಂತ್ರಜ್ಞಾನ, ಕೌಶಲ್ಯಾಧಾರಿತ, ವೃತ್ತಿಪರ ಸೇವೆ” ಹಾಗೂ ಇಂದಿನ ವಿಷಯ “ಸುಸ್ಥಿರ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ”ದ ಕುರಿತು ಸಹಕಾರ ಸಪ್ತಾಹದ ಮೊದಲ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶೇಖರಗೌಡ ಮಾಲಿ ಪಾಟೀಲ್ ಅಧ್ಯಕ್ಷರು, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್‌ರರು ಮಾತನಾಡುತ್ತಾ ಜವರಾಲ್ ನೆಹರುರವರ ಕೊಡುಗೆ ಅಪಾರ ಈ ಕ್ಷೇತ್ರದ ಮೂಲಕ ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದವರನ್ನು ಅಭಿವೃದ್ದಿಪಡಿಸಲು ಅವರ ಕಂಡ ಕನಸು ನನಸಾಗುವಲ್ಲಿ ಸಹಕಾರ ಕ್ಷೇತ್ರದ ಮೂಲಕ ಮಾತ್ರ ಸಾದ್ಯವೆಂಬದನ್ನು ಮನಗೊಂಡಿದ್ದವರು, ಈ ನಿಟ್ಟಿನಲ್ಲಿ ನಾವು ನೀವೆಲ್ಲರು ಸಹಕಾರ ಕ್ಷೇತ್ರವನ್ನು  ಬಲಪಡಿಸುವದರ ಜೊತೆಗೆ ಸಹಕಾರ ಸಂಘಗಳನ್ನು ಬಲಪಡಿಸೋಣವೆಂದರು.
ಕಾರ್ಯಕ್ರಮದ ಉಧ್ಘಾಟಣೆಯನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಮಲ್ಲಯ್ಯ ರವರು ವಹಿಸ ಮಾತನಾಡುತ್ತಾ ಸಹಕಾರ ಸಂಘಗಳ ಮೂಖಾಂತರ ಸರಕಾರದ ಸೇವೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ನಮ್ಮ ನಿಮ್ಮೇಲ್ಲರ ಪಾತ್ರ ಅತ್ಯುಮುಲ್ಯವೆಂದು ಹೇಳಿದರು.
ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕರಾದ ತೊಟ್ಟಪ್ಪ ಕಾಮನೂರು ಇವರು ಸಹಕಾರ ಸಪ್ತಾಹದ ಉದ್ದೇಶದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು,
ಕಾರ್ಯಕ್ರಮದ ಅಥಿತಿಗಳಾದ ಕಾಸ್ಕಾರ್ಡ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕರಾದ ಬಸನಗೌಡ ಪಾಟೀಲ್, ಗಂಗಾ-ಯಮುನಾ ಸೌಹಾರ್ದ ಸಹಕಾರಿಯ ಶಶಿಕುಮಾರ ಗಡ್ಡಿ ಇವರುಗಳು ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶರಣಬಸವ ನಾಯಕ, ಸಹಕಾರ ಅಭಿವೃದ್ಧಿ ಅಧಿಕಾರಿಯಾದ ಯಲ್ಲಪ್ಪÀ, ಯಲಬುರ್ಗಾ ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ದುರಗಪ್ಪ ತಿಪ್ಪನಾಳ, ಹಾಗೂ ಸಹಕಾರ ಯೂನಿಯನ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಅಕ್ಷಯ್‌ಕುಮಾರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಹಕಾರ ಸಪ್ತಾಹದ ವಿಷಯದ ಕುರಿತು ಶ್ರೀಮತಿ ಡಾ|| ಸೀತಾ ಪಾಟೀಲ ಪ್ರಾಧ್ಯಾಪಕರು ಕೊಪ್ಪಳ ವಿಶ್ವವಿದ್ಯಾಲಯ ಕೊಪ್ಪಳ ಇವರು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ರಾಜ್ಮಾ ಇವರು ಪ್ರಾರ್ಥಿಸಿದರು. ಯೂನಿಯನ್ನಿನ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಅಕ್ಷಯ್‌ಕುಮಾರ ಇವರು ಗಣ್ಯರನ್ನು ಸ್ವಾಗತಿಸಿದರು, ಕಾರ್ಯಕ್ರಮವನ್ನು ರಾಜಶೇಖರ ಎಂ. ಹೊಸಮನಿ ನಿರೂಪಿಸಿದರು. ಕೊನೆಯಲ್ಲಿ ದುರುಗಪ್ಪ ತಿಪ್ಪನಾಳ ಇವರು ವಂದಿಸಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!