ಸರಸ್ವತಿ ವಿದ್ಯಾಮಂದಿರ ಶಾಲೆ ಬಲ್ಡೋಟ ವಿರೋಧಿ ಹೋರಾಟಕ್ಕೆ ಬೆಂಬಲ

0

Get real time updates directly on you device, subscribe now.

ಜನಪ್ರತಿನಿದಿನಗಳು ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಅತ್ತನೂರು
ಕೊಪ್ಪಳ : ಇಲ್ಲಿನ ನಗರಸಭೆ ಆವರಣದಲ್ಲಿ ಜಂಟಿ ಕ್ರಿಯಾ ವೇದಿಕೆಯಿಂದ ನಡೆಸಲಾಗುತ್ತಿರುವ 380ನೇ ದಿನದ ಬಲ್ಡೋಟ ವಿರೋಧಿ380ನೇ ದಿನದ ಬಲ್ಡೋಟ ಹಾಗೂ ಕಾರ್ಖಾನೆಗಳ ಮಾಲಿನ್ಯ ತೊಲಗಿಸಿ ಧರಣಿಯನ್ನು  ನಗರದ ಸರಸ್ವತಿ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು, ಸಿಬ್ಬಂದಿ ಆಡಳಿತ  ವರ್ಗದವರು ಬೆಂಬಲಿಸಿದರು. ಈ ಸಂದರ್ಭದಲ್ಲಿ ಚಾಚಾ ನೆಹರು ಜಯಂತಿ ಮತ್ತು ಮಕ್ಕಳ ದಿನಾಚರಣೆಯನ್ನು ಆಚರಿಸಿ ಹೂಗುಚ್ಚ ನೀಡಿ ಪರಸ್ಪರ ಸಿಹಿ ಹಂಚಿಕೊಂಡರು. ಮಕ್ಕಳು ಕಾರ್ಖಾನೆ ತೊಲಗಿಸಿ, ಆರೋಗ್ಯ, ಭವಿಷ್ಯ ಉಳಿಸಿ ಎಂದು ಕಿರು ನಾಟಕ ಪ್ರದರ್ಶನ ಮಾಡಿದರು.
ಶಾಲಾ ಸಂಸ್ಥಾಪಕ ಆರ್.ಎಚ್.ಅತ್ತನೂರು, ಮಾತನಾಡಿ ‘ಆರೋಗ್ಯ, ಶುದ್ಧ ಪರಿಸರ ಕೇಳುವುದು ಪ್ರತಿಯೊಬ್ಬರ ಹಕ್ಕಾಗಿದೆ. ಕೊಪ್ಪಳ ಕಾರ್ಖಾನೆಗಳ ಮಾಲಿನ್ಯ ಮೆಟ್ಟಿ ನಿಲ್ಲಲು ಪ್ರತಿಯೊಬ್ಬರೂ ಬೀದಿಗಿಳಿದು ಹೋರಾಡಬೇಕು. ಈ ಮಕ್ಕಳ ಭವಿಷ್ಯ ಆತಂಕಕ್ಕೆ ಒಳಗಾಗಬಾರದು ಎಂದು ಹಿರಿಯ ತಲೆಮಾರಿನ ನಿವೃತ್ತರು ಜಾಗೃತರಾಗಿ ಇಲ್ಲಿ ವರ್ಷದಿಂದ ತಪಸ್ಸು ಮಾಡುತ್ತಿದ್ದಾರೆ. ಇದು ಕೇವಲ ಹೋರಾಟವಲ್ಲ. ಜನಪ್ರತಿನಿದಿನಗಳಿಗೆ ಇಷ್ಟೊತ್ತಿಗಾಗಲೇ ಗಂಭೀರತೆ ತಿಳಿಯಬೇಕಿತ್ತು. ಅವರು ಯಾವುದೇ ಕಾರಣಕ್ಕೂ ಈ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು. 
ಶಿಕ್ಷಕಿ ಅಫ್ರಿದಿ ಕುರಿ, ತಮನ್ನಾ ಮುಬಿನ್, ಶರಣುಕುಮಾರಿ ಎಂ, ವಾಹಿದಾ ಬೇಗಂ, ರಾಜೇಶ್ವರಿ, ತಾಹಿಸೀನ್ ಬೇಗಂ, ಗೌತಮ್, ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರೂ, ನಿವೃತ್ತ ಪಾಚಾರ್ಯ ಎಸ್.ಬಿ. ರಾಜೂರು, ಮಹಾಂತೇಶ ಮಲ್ಲನಗೌಡ್ರ, ನಿ. ಕೋರ್ಟ್ ಅಧಿಕಾರಿ ಜಿ. ಬಿ. ಪಾಟೀಲ, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ರಾಜಶೇಖರ ಏಳುಭಾವಿ, ಡಿ.ಎಚ್. ಪೂಜಾರ, ರಿಶಬ್ ಏಳುಭಾವಿ, ಕಾಶಪ್ಪ ಚಲವಾದಿ, ಗಂಗಾಧರ ಖಾನಾಪೂರ, ಜಿ. ಎಸ್. ಕಡೇಮನಿ, ಪರ್ವಿನ್ ಸಜ್ಜಿಹೊಲ, ಮೂಕಣ್ಣ ಮೇಸ್ತ್ರಿ ಬಸಾಪುರ, ಶಿವಪ್ಪ ಬನಪ್ಪನವರ, ವಿಜಯಮಹಾಂತೇಶ ಹಟ್ಟಿ, ಮಕ್ಕಳು ಪಾಲ್ಗೊಂಡರು.

Get real time updates directly on you device, subscribe now.

Leave A Reply

Your email address will not be published.

error: Content is protected !!