ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ : 49 ಪಟುಗಳು ರಾಜ್ಯ ಮಟ್ಟಕ್ಕೆ ಆಯ್ಕೆ
ಕೊಪ್ಪಳ: ಶಾಲಾ ಶಿಕ್ಷಣ ಇಲಾಖೆ, ನ್ಯಾಷನಲ್ ಸ್ಪಿರಿಟ್ ಕರಾಟೆ ಅಕಾಡೆಮಿ ಹಾಗೂ ಕೊಪ್ಪಳ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಅಂಡರ್-14 ಹಾಗೂ ಅಂಡರ್-17 ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಸುಮಾರು 200 ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕರಾಟೆ ಕೌಶಲ್ಯ ಪ್ರದರ್ಶಿಸಿದರು. ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 49 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಅಂಡರ್-14 ವಿಭಾಗದಲ್ಲಿ ಕು. ವರ್ಷಾ ಶಿವಾನಂದ ಪ್ಯಾಟಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಗಳಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕು. ವರ್ಷಾ ಸೇರಿದಂತೆ ಎಲ್ಲಾ ವಿಜೇತ ಸ್ಪರ್ಧಾಳುಗಳನ್ನು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ. ಬಸವರಾಜ, ಕರಾಟೆ ತರಬೇತುದಾರರಾದ ರಾಜಾಭಕ್ಷಿ ಎಚ್.ವಿ., ಮಹಾಂತೇಶ ಎಂ., ಮಹೇಬೂಬ್ ಹುಸೇನ್, ಶಿವಾನಂದ, ಷಣ್ಮುಖ, ಸೈಯದ್ ಬಿಲಾಲ್ ಸೇರಿದಂತೆ ಇತರರು ಅಭಿನಂದಿಸಿ ಮುಂದಿನ ಹಂತದ ಸ್ಪರ್ಧೆಗಳಲ್ಲಿ ಯಶಸ್ಸು ಸಾಧಿಸುವಂತೆ ಶುಭ ಹಾರೈಸಿದರು.
ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ ಕೊಪ್ಪಳ ಶಾಲಾ ಶಿಕ್ಷಣ ಇಲಾಖೆ ನ್ಯಾಷನಲ್ ಸ್ಪ್ರೇಟ್ ಕರಾಟೆ ಅಕಾಡೆಮಿ ಕೊಪ್ಪಳ ಮತ್ತು ಕೊಪ್ಪಳ ಡಿಸ್ಟಿಕ್ಟ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಇವರ ಸಹಯೋಗದಲ್ಲಿ u-14 ಮತ್ತು u-17 ಕರಾಟೆ ಸ್ಪರ್ಧೆ ನಡಿಸಲಾಯಿತು ಅದರಲ್ಲಿ ಭಾಗವಹಿಸಿ
ದ ನಿವೇದಿತಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕೊಪ್ಪಳ ಈ ಶಾಲೆಯ ವಿದ್ಯಾರ್ಥಿನಿ ರೇಣುಕಾ ಕಲ್ಲನವರ -56 ರಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ಸ್ಟೇಟ್ ಲೆವೆಲ್ ಗೆ ಆಯ್ಕೆ ಆಗಿದ್ದಾಳೆ ಹಾಗೂ ಮೌಲಾ ನಜರ್ ಸ್ಕೂಲ್ ಕೊಪ್ಪಳ ಈ ಶಾಲೆಯ ವಿದ್ಯಾರ್ಥಿಯು -66 ರಲ್ಲಿ ಕುಮಾರ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾನೆ ಅದೇ ರೀತಿ ಎಜುಕೇರ್ ಸ್ಕೂಲ್ ಕೊಪ್ಪಳ ಈ ಶಾಲೆಯ ವಿದ್ಯಾರ್ಥಿನಿ ಆದ ಸಾಕ್ಷಿ -50 ರಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾಳೆ ಮತ್ತೆ ಮಾಸ್ತಿ ಪಬ್ಲಿಕ್ ಸ್ಕೂಲ್ ಕೊಪ್ಪಳ ಈ ಶಾಲೆಯ ವಿದ್ಯಾರ್ಥಿ ಆದ ಶಂಕರ್ ಕಲ್ಲನವರ -36 ರಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾನೆ ಎಲ್ಲಾ ಕ್ರೀಡಾಪಟುಗಳಿಗೆ ಹೆಚ್ ವಿ ರಾಜಾಭಕ್ಷಿ ಸರ್, ಡಿ ಪಿ ಒ ಬಸವರಾಜ್ ಸರ್,ನಿತೀಶ್ ಪುಲಸ್ಕರ್ ಸರ್ ಹಾಗೂ ತರಬೇತಿದಾರರು ದೇವಪ್ಪ ಕಲ್ಲನವರ ಮತ್ತು ಶಿವಣ್ಣ ಹಾದಿಮನಿ, ಮಹೇಬೂಬ್ ಸರ್ ಈ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಸಲ್ಲಿಸಿದ್ದಾರೆ

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಾಂಪಿಯನ್ಸ್ ಕರಾಟೆ ಕ್ಲಬ್ ವಿದ್ಯಾರ್ಥಿಗಳ ಅಮೋಘ ಸಾಧನೆ – ರಾಜ್ಯಮಟ್ಟಕ್ಕೆ ಆಯ್ಕೆ
ಕೊಪ್ಪಳ: ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 14 ಮತ್ತು 17 ವರ್ಷ ವಯೋಮಾನದ ವಿಭಾಗದಲ್ಲಿ ಭಾಗವಹಿಸಿದ ಚಾಂಪಿಯನ್ಸ್ ಕರಾಟೆ ಕ್ಲಬ್‌ನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳು ಒಟ್ಟು 7 ಚಿನ್ನ
ದ ಪದಕ ಹಾಗೂ 4 ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಶಾಲೆ ಹಾಗೂ ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಇಂದರಗಿ ಹಾಗೂ ಗ್ಲೋಬಲ್ ಹೈಯರ್ ಪ್ರೈಮರಿ ಸ್ಕೂಲ್, ಕುಷ್ಟಗಿ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದದವರು ಹರ್ಷ ವ್ಯಕ್ತಪಡಿಸಿ, ರಾಜ್ಯಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಮತ್ತಷ್ಟು ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ತರಬೇತುದಾರರಾದ ಮಾರುತಿ ಎಲ್.ಎಚ್. ಹಾಗೂ ಮುಖ್ಯ ತರಬೇತುದಾರರಾದ ರಾಕೇಶ್ ಕುಂಬಾರ್ ಅವರನ್ನು ಅಭಿನಂದಿಸಿದ್ದಾರೆ