ಆಂಧ್ರದ 4 ಟಿಎಂಸಿ ನೀರು ಬಳಕೆಗೆ ಸಮ್ಮತಿ ಸಿಕ್ಕರೆ ನ.30ರವರೆಗೆ ಕಾಲುವೆಗಳಿಗೆ ನೀರು 2 ದಿನಗಳಲ್ಲಿ ಶುಭ ಸುದ್ದಿ ಸಿಗುವ ವಿಶ್ವಾಸ ವ್ಯಕ್ತಪಡಿಸಿದ ಸಚಿವ ಶಿವರಾಜ್ ತಂಗಡಗಿ

0

Get real time updates directly on you device, subscribe now.

ತುಂಗಭದ್ರಾ ಕಾಲುವೆಗಳಿಗೆ ನ.20ರವರೆಗೆ ನೀರು; 30ರವರೆಗೆ ವಿಸ್ತರಣೆಗೆ ಪ್ರಯತ್ನ: ಸಚಿವ ಶಿವರಾಜ್ ತಂಗಡಗಿ

ಕೇಂದ್ರದಿಂದ ಕರ್ನಾಟಕಕ್ಕೆ ತೆರಿಗೆ ಪಾಲು, ಜಿಎಸ್‌ಟಿ ಹಣ ಹಾಗೂ ಅನುದಾನ ನೀಡುವಲ್ಲಿ ಅನ್ಯಾಯ

ಕೇಂದ್ರದ ಅನುದಾನ ಮತ್ತು ಸಾಲದ ರೂಪದಲ್ಲಿ ನೀಡಿದ ಹಣದ ವಿವರವನ್ನು ದಾಖಲೆ ಸಮೇತ ಬಹಿರಂಗಪಡಿಸಲು ಬಿಜೆಪಿಗೆ ಸವಾಲು

ಎಸ್‌ಸಿ-ಎಸ್‌ಟಿ ಕಲ್ಯಾಣಕ್ಕೆ ಶೇ.24.1ರಷ್ಟು ಅನುದಾನ ಮೀಸಲಿಡುವ ಕಾನೂನನ್ನು ದೇಶಾದ್ಯಂತ ಜಾರಿಗೆ ತರುವಂತೆ ಆಗ್ರಹ

ಕೊಪ್ಪಳ: ನ.13 ತುಂಗಭದ್ರಾ ಕಾಲುವೆಗಳಿಗೆ ಈ‌ ಮೊದಲೇ ನಿರ್ಧಾರ ಮಾಡಿದಂತೆ ರಾಜ್ಯದ ಪಾಲಿನ 7 ಟಿಎಂಸಿ ನೀರಿನಲ್ಲಿ ನವೆಂಬರ್ 20ರವರೆಗೆ ಕಾಲುವೆಗಳಿಗೆ ನೀರು ಹರಿಸಲಾಗುವುದು ಎಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಸಚಿವ ಶಿವರಾಜ್. ಎಸ್.ತಂಗಡಗಿ ಅವರು ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಕೊಪ್ಪಳ ಜಿಲ್ಲಾಡಳಿತ ಭವನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರೈತರಿಗೆ ಅನುಕೂಲ ಆಗಬೇಕು ಎಂದು ಯೋಚಿಸಿ ನವೆಂಬರ್ 30ರವರೆಗೆ ಸಹ ನೀರು ಹರಿಸುವ ಪ್ರಯತ್ನದಲ್ಲಿದ್ದೇವೆ. ಈ ಬಗ್ಗೆ   ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ ಎಂದರು.

ಆಂಧ್ರಪ್ರದೇಶದ ರಿವರ್‌ ಅಸಿಸ್ಟೆನ್ಸ್‌ ಕೋಟಾದಡಿ ಒಟ್ಟು 5 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದ್ದು, ಈ ಪೈಕಿ ಈಗಾಗಲೇ 1 ಟಿಎಂಸಿ ನೀರನ್ನು ನದಿಗೆ ಹರಿಸಲಾಗಿದೆ. ಬಾಕಿ ಆಂಧ್ರಪ್ರದೇಶದ ಪಾಲಿನ ನದಿ ಸಹಾಯ ಕೋಟಾದಡಿ ಉಳಿಕೆಯಾಗಿರುವ 4 ಟಿಎಂಸಿ ನೀರನ್ನು ಬಳಸಿಕೊಳ್ಳಲು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಜತೆ ಚರ್ಚಿಸುವಂತೆ  ಮುಖ್ಯಮಂತ್ರಿ ಡಿ.ಕೆ. ಶಿವಕುಮರ್ ಅವರಿಗೆ ಮನವಿ  ಮಾಡಲಾಗಿದೆ. ಇನ್ನೆರೆಡು ದಿನಗಳಲ್ಲಿ ಶುಭ ಸುದ್ದಿ ಸಿಗಲಿದೆ ಎಂಬ ವಿಶ್ವಾಸ ಇದೆ. ಆಂಧ್ರಪ್ರದೇಶದವರು ನಾಲ್ಕು ಟಿಎಂಸಿ ನೀರನ್ನು ರಾಜ್ಯದ ಬಳಕೆಗೆ ಒಪ್ಪಿದರೆ 30ರವರೆಗೆ ನೀರು ಹರಿಸಲಾಗುವುದು ಎಂದರು.

 

ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ: ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಾದ ತೆರಿಗೆ ಪಾಲು ಮತ್ತು ಜಿಎಸ್‌ಟಿ ಹಣವನ್ನು ಸಮರ್ಪಕವಾಗಿ ನೀಡುತ್ತಿಲ್ಲ. ರಾಜ್ಯಕ್ಕೆ ಬರಬೇಕಾದ ಅನುದಾನವನ್ನೂ ಬಿಡುಗಡೆ ಮಾಡುತ್ತಿಲ್ಲ. ಹೀಗಿರುವಾಗ ಕೇಂದ್ರ ಸರ್ಕಾರದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಮೂರು ವರ್ಷಗಳಾಯಿತು. ಈ ವರ್ಷವೂ ರಾಜ್ಯಕ್ಕೆ ಹೇಳಿಕೊಳ್ಳುವಂತಹ ಯಾವುದೇ ನೆರವು ನೀಡಿಲ್ಲ. ಆದರೂ ನಮ್ಮ ರಾಜ್ಯದ ಜನರು ಬಿಜೆಪಿಯ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಇದನ್ನು ನಾವು ಮರೆಯಬಾರದು. ಮುಂದಿನ ದಿನಗಳಲ್ಲಿ ರಾಜ್ಯದ ಜನರು ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಮಾರ್ಮಿಕವಾಗಿ‌ ಹೇಳಿದರು.

ಬೆಂಗಳೂರಿಗೆ ನಾವು ಇಷ್ಟೊಂದು ಹಣ ನೀಡಿದ್ದೇವೆ ಎಂದು ಹೇಳುವವರು, ನಿಜವಾಗಿಯೂ ಎಷ್ಟು ಹಣ ನೀಡಿದ್ದೀರಿ ಎಂಬುದನ್ನು ದಾಖಲೆ ಸಮೇತ ತೋರಿಸಲಿ. ಸಾಲದ ರೂಪದಲ್ಲಿ ನೀಡಿದ ಹಣವನ್ನು ಅನುದಾನವೆಂದು ಬಿಂಬಿಸುವುದು ಸರಿಯಲ್ಲ. ಕೇಂದ್ರ ಸರ್ಕಾರ ನೀಡಿರುವ ಹಣದ ಬಗ್ಗೆ ಅಷ್ಟು ವಿಶ್ವಾಸ ಮತ್ತು ಧೈರ್ಯವಿದ್ದರೆ, ಯಾವ ಯೋಜನೆಗೆ ಎಷ್ಟು ಹಣ ಬಿಡುಗಡೆ ಮಾಡಲಾಗಿದೆ ಎಂಬ ಆದೇಶದ ಪ್ರತಿಯನ್ನು ತೋರಿಸಲಿ. ಕೇವಲ ಹೇಳಿಕೆ ನೀಡುವುದರಿಂದ ಸತ್ಯ ಬದಲಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

 

ಸುಳ್ಳೇ ಬಿಜೆಪಿಗರ ಮನೆ ದೇವರು: ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ಪರಿಣತರು. ಸುಳ್ಳೇ ಅವರ ಮನೆದೇವರು ಎಂಬಂತೆ ವರ್ತಿಸುತ್ತಿದ್ದಾರೆ. ಸುಳ್ಳು ಹೇಳಿಕೊಂಡೇ ರಾಜಕೀಯ ಮಾಡುವುದನ್ನು ಬಿಟ್ಟರೆ ಅವರಿಗೆ ಬೇರೆ ಕೆಲಸವಿಲ್ಲ. ಕೇಂದ್ರದಲ್ಲಿ 13 ವರ್ಷಗಳ ಕಾಲ ಅಧಿಕಾರದಲ್ಲಿದ್ದಾಗ ರೈತರಿಗಾಗಿ ಯಾವ ಹೊಸ ಯೋಜನೆ ಜಾರಿಗೆ ತಂದಿದ್ದೀರಿ? ಯಾವ ಅಣೆಕಟ್ಟನ್ನು ನಿರ್ಮಿಸಿದ್ದೀರಿ? ಕಾರ್ಮಿಕರಿಗಾಗಿ ಏನು ಮಾಡಿದ್ದೀರಿ? ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು ಎಂಬುದನ್ನು ಸ್ಪಷ್ಟಪಡಿಸಲಿ ಎಂದರು.

 

ನಾವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಬಜೆಟ್‌ನಲ್ಲಿ ಶೇ.24.1ರಷ್ಟು ಅನುದಾನ ಮೀಸಲಿಡುವ ಕಾನೂನನ್ನು ಜಾರಿಗೆ ತಂದಿದ್ದೇವೆ. ಇಂತಹ ಕಾನೂನನ್ನು ದೇಶದಾದ್ಯಂತ ಏಕೆ ಜಾರಿಗೆ ತರುತ್ತಿಲ್ಲ? ಗುಜರಾತ್‌ನಲ್ಲಾದರೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಇದೇ ಮಾದರಿಯಲ್ಲಿ ಶೇ.24.1ರಷ್ಟು ಬಜೆಟ್ ಅನುದಾನ ಮೀಸಲಿಡುವ ಧೈರ್ಯ ತೋರಿಸಲಿ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವವರು ಮೊದಲು ಇಂತಹ ಕ್ರಮಗಳನ್ನು ಜಾರಿಗೆ ತರಲಿ ಎಂದು ಸವಾಲೆಸೆದರು.

 

Koppal, Nov 13: Shivaraj S. Tangadagi, Minister for Kannada and Culture and Backward Classes Welfare—who also serves as the Chairman of the Tungabhadra Irrigation Advisory Committee—has clarified that water will be released into the Tungabhadra canals until November 20. This is in accordance with a prior decision regarding the state’s allocated share of 7 TMC of water. Speaking to reporters on Friday on the premises of the Koppal District Administration office, the Minister stated that efforts are underway to extend the water release until November 30 to benefit the farmers. He added that he has already discussed this matter with the Chief Minister of the state.

A total of 5 TMC of water has been allocated under the ‘River Assistance’ quota for Andhra Pradesh, of which 1 TMC has already been released into the river. A request has been made to Chief Minister D.K. Shivakumar to hold discussions with Andhra Pradesh Chief Minister Chandrababu Naidu regarding the utilization of the remaining 4 TMC from this quota. The Minister expressed confidence that positive news would emerge within the next two days. He stated that if Andhra Pradesh agrees to allow the state to use these 4 TMC of water, the release will continue until November 30.

Get real time updates directly on you device, subscribe now.

Leave A Reply

Your email address will not be published.

error: Content is protected !!