ಗಾಂಧಿ ಜಯಂತಿ ನಿಮಿತ್ಯ ಕವಿಗೋಷ್ಠಿ- ೨೦೦ನೇ ಕವಿಸಮಯ ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ

Get real time updates directly on you device, subscribe now.

ಕೊಪ್ಪಳ : ಕಳೆದ ಎಂಟತ್ತು  ವರ್ಷಗಳಲ್ಲಿ ಕವಿಸಮಯದಲ್ಲಿ ಭಾಗವಹಿಸಿದ್ದ ಕವಿಗಳ, ಕವಯತ್ರಿಯರ ಸಾಕಷ್ಟು ಕವನ ಸಂಕಲನಗಳು ಕೊಪ್ಪಳ ಜಿಲ್ಲೆಯಲ್ಲಿ ಬಿಡುಗಡೆಯಾಗಿವೆ. ಸಾಕಷ್ಟು ಜನರನ್ನು ತಲುಪಿವೆ. ಕವಿಸಮಯದ  ೨೦೦ನೇ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಪುಸ್ತಕಗಳ ಪ್ರಕಟಣೆ ,ಕವಿಗೋಷ್ಠಿ, ವಿಚಾರಸಂಕಿರಣ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ ಎಂದು ಪತ್ರಕರ್ತ, ಕವಿ ಸಿರಾಜ್ ಬಿಸರಳ್ಳಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗಾಂಧಿ ಜಯಂತಿ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ  ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಲವಾರು ದಿನಗಳಿಂದ ಕವಿಸಮಯ ಕಾರ್ಯಕ್ರಮ ನಿರಂತರವಾಗಿ ನಡೆದಿಲ್ಲ. ಮತ್ತೆ ಕವಿಸಮಯವನ್ನು ಮುಂದವರೆಸೋಣ , ಪ್ರಬಂದ ಬರಹದಲ್ಲಿ ಹೆಸರು ಮಾಡಿರುವ  ಬರಹಗಾರ ಅಮರದೀಪ್ ಅವರ ಪ್ರಬಂಧ ಸಂಕಲನ, ಕವಿತೆಗಳ ಸಂಕಲನವೂ ಹೊರಬರಬೇಕಿದೆ ಎಂದು ಹೇಳಿದರು.ಇನ್ನೋರ್ವ ಕವಿ ಮಹೇಶ ಬಳ್ಳಾರಿ ಮಾತನಾಡಿ ಕವಿಸಮಯವನ್ನು ಪುನಶ್ಚೇತನಗೊಳಿಸೋಣ ಇದಕ್ಕೆ ನಿರಂತರತೆ ತಂದುಕೊಡೊಣ ಮತ್ತು ೨೦೦ನೇ ಕವಿಸಮಯ ಕಾರ್‍ಯಕ್ರಮವನ್ನು ಅರ್ಥಪೂರ್ಣವಾಗಿ ಎಲ್ಲರೂ ಸೇರಿ ಆಚರಿಸೋಣ ಎಂದು ಹೇಳಿದರು. ಹಿರಿಯ ಕವಿ ಎ.ಪಿ.ಅಂಗಡಿಯವರು ಕವಿಸಮಯದ ನಿರಂತರವಾಗುವುದರಿಂದ ಸಾಕಷ್ಟು  ಹೊಸ ಬರಹಗಾರರಿಗೆ  ವೇದಿಕೆ ದೊರಕಿಸಿಕೊಟ್ಟಂತಾಗುತ್ತದೆ ಎಂದು ಹೇಳಿದರು. ಇದಕ್ಕೂ ಮೊದಲು ನಡೆದ ಸರಳ ಕವಿಗೋಷ್ಠಿಯಲ್ಲಿ ಮಹೇಶ ಬಳ್ಳಾರಿ-ಗಾಂಧಿ, ಎ.ಪಿ.ಅಂಗಡಿ- ಐದೊಂದ್ಲ ಐದು, ಗಾಂಧಿಜಿ ಕವಿತೆ, ಅಮರದೀಪ್ – ಗಾಂಧಿ ದ್ವಿಪದಿಗಳು ಹಾಗೂ ಸಿರಾಜ್ ಬಿಸರಳ್ಳಿ- ನನ್ನಜ್ಜನ ಹುಡುಕಿಕೊಡಿ, ಕೋಲು-ಚಾಳೀಸು ಕವಿತೆಗಳನ್ನು ವಾಚನ ಮಾಡಿದರು.  ಮಹೇಶ ಬಳ್ಳಾರಿ ಸ್ವಾಗತಿಸಿ ನಿರೂಪಿಸಿದರು, ಅಮರದೀಪ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!