ಪಾದಯಾತ್ರೆ ಹಾಗೂ ಗಾಂಧೀ ಭಜನ್ ಕಾರ್ಯಕ್ರಮ

Get real time updates directly on you device, subscribe now.


ಶಿಕ್ಷಕರ ಕಲಾಸಂಘದ ವತಿಯಿಂದ ನಗರದ ಅಶೋಕ ವೃತ್ತದಿಂದ ಭಾನಾಪೂರ ರೈಲು ನಿಲ್ದಾಣಕ್ಕೆ ಬೆಳಿಗ್ಗೆ 05 : 30 ಕ್ಕೆ ಪಾದಯಾತ್ರೆಯ ಮೂಲಕ ಸಂಚರಿಸಲಾಗುವುದು. ಕೊಪ್ಪಳದ ಚಿಂತಕರು, ಬರಹಗಾರರು, ಸಾಂಸ್ಕೃತಿಕ ಮನಸ್ಸಿನ ಹಾಗೂ ವಿವಿಧ ಇಲಾಖೆಯ ನೌಕರರು ಭಾಗವಹಿಸಲಿದ್ದಾರೆ.

ಸುಟ್ಟವ್ವ ಹರಿಜನ ಮಗ ಶೇಖಪ್ಪ ಹರಿಜನ, ವೀರಭದ್ರಪ್ಪ ಶಿರೂರ ಅವರ ಮಗ ದೇವಪ್ಪ ಶಿರೂರ, ಕಾಳಪ್ಪ ಪತ್ತಾರ ಅವರ ಮಗ ಶಂಕರ ಪತ್ತಾರ ಪಾಲ್ಗೊಳ್ಳಲಿದ್ದಾರೆ.

ಸಂಜೆ ನೌಕರರ ಸಾಂಸ್ಕೃತಿಕ ಭವನದಲ್ಲಿ ಗಾಂಧೀ ಬೆಳಕು ಕಾರ್ಯಕ್ರಮ, ಶಿಕ್ಷಕರ ಕಲಾ ಸಂಘ (ರಿ) ಕೊಪ್ಪಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜರುಗಲಿದೆ.

ಗಾಂಧೀ ಬೆಳಕು ಕಾರ್ಯಕ್ರಮದಲ್ಲಿ ಗಾಂಧೀಜಿ ಕುರಿತು ಉಪನ್ಯಾಸ, ಭಜನ್ ಗಳು ಜುಗಲ್ ಬಂದಿ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಮಾಡಿದ ಶಿವಪ್ಪ ಹಡಪದ, ಪ್ರಭಾಕರ ದಾಸರ, ಹಳ್ಳೂರಪ್ಪ ಕೋಟೆ, ಸಿರಸಪ್ಪ ಗಡಾದ,  ಶಿವಮ್ಮ ಗದಗೇರಿ ಅವರನ್ನು  ಸನ್ಮಾನಿಸುವ  ಕಾರ್ಯಕ್ರಮ ಜರುಗಲಿವೆ.

ಕಾರ್ಯಕ್ರಮದಲ್ಲಿ ಅಶೋಕ ಸರ್ಕಲ್ ನಾಟಕ ತಂಡ, ಕಲರವ ಶಿಕ್ಷಕರ ಬಳಗ, ಮತ್ತಿತ್ತರ ಸಂಘಟನೆಗಳು ಪಾಲ್ಗೊಳ್ಳುತ್ತಿವೆ.

Get real time updates directly on you device, subscribe now.

Comments are closed.

error: Content is protected !!