ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ: ಇಬ್ಬರ ಬಂಧನ
ಕುಷ್ಟಗಿ ಪೊಲೀಸ್ ರ ಕಾರ್ಯ ಶ್ಲಾಘನೆ ಎಸ್.ಪಿ ಯಶೋಧಾ ವಂಟಗೋಡಿ
ಕುಷ್ಟಗಿ.ಸ ; ದ್ವೇಷ ಹಾಗೂ ಅಶ್ಲೀಲ ಪದ ಬಳಕೆ ಮಾಡಿದ್ದಾನೆ ಎಂದು ಆರೋಪಿಸಿ ವ್ಯಕ್ತಿ ಯೊಬ್ಬನನ್ನು ಮಚ್ಚಿನಿಂದ ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಕುಷ್ಟಗಿ ಪೊಲೀಸರು ಬಂಧಿಸಿ ಆರೋಪಿಗಳ ವಿರುದ್ಧ ಪ್ರಕರಣದಾಖಲಿಸಿದ ಘಟನೆ ಶನಿವಾರ ಬೆಳಿಗ್ಗೆ ಜಾಲಿಹಾಳ ಗ್ರಾಮದಲ್ಲಿ ನಡೆದಿದೆ.
ಸೆ.25 ರಂದು ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಜಾಲಿಹಾಳ-ಶಿರಗುಂಪಿ ರಸ್ತೆಯ ಬಸನಗೌಡರವರ ಹೊಲದ ಪಕ್ಕದ ರಸ್ತೆಯಲ್ಲಿ ಭಾಗ್ಯರಾಜ ಅಲಿಯಾಸ್ ಭಾಗಪ್ಪ ತಂದೆ ಹನುಮಪ್ಪ ಕ್ಯಾದಗುಂಪಿ (30) ಜಾಲಿಹಾಳ
ಗ್ರಾಮದ ಗೌಂಡಿ ಕಾರ್ಮಿಕ ಈತನನ್ನು ಯಾರೋ ಅಪರಿಚಿತರು ಹರಿತವಾದ ಆಯುಧದಿಂದ
ಕುತ್ತಿಗೆಯ ಹತ್ತಿರ ಕೊಯ್ದು ಚುಚ್ಚಿ ಕೊಲೆ ಮಾಡಿರುವ ಬಗ್ಗೆ ಕುಷ್ಟಗಿ ಪೊಲೀಸ್ ಠಾಣೆಯ ಪ್ರಕಾರ ಪ್ರಕರಣ ದಾಖಲಾಗಿತ್ತು.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಯಶೋಧಾ ವಂಟಗೋಡಿ, ಪೊಲೀಸ್ ಉಪಾಧೀಕ್ಷಕ ಸಿದ್ದಲಿಂಗಪ್ಪಗೌಡ ಪಾಟೀಲ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು.
ಅವರ ಮಾರ್ಗದರ್ಶನದಲ್ಲಿ ಸಿಪಿಐ ಯಶವಂತ ಬಿಸನಳ್ಳಿ, ಪಿ.ಎಸ್.ಐ ಮುದ್ದುರಂಗಸ್ವಾಮಿ, ಎ.ಎಸ್.ಐ ದುರುಗಪ್ಪ, ವಸಂತ ಹನಮಸಾಗರ ಠಾಣೆ ಎ.ಎಸ್.ಐ ಶ್ರೀಧರ, ಹೆಚ್.ಸಿ ಪರಶುರಾಮ, ಪಿಸಿ ಅಮರೇಶ್ ಹುಬ್ಬಳ್ಳಿ, ಹೆಚ್.ಸಿ ಪ್ರಶಾಂತ, ಪಿ.ಸಿ ಹನುಮಂತ, ಪಿ.ಸಿ ಮಾಸಪ್ಪ, ಪಿ.ಸಿ ರವಿ ನಡುವಿನಮನಿ, ಪಿ.ಸಿ, ಸಿ.ಡಿ.ಆರ್
ಸೆಲ್ ನ ಸಿಬ್ಬಂದಿ ಕೊಟೇಶ್ ಹೆಚ್.ಸಿ,
ಮಂಜುನಾಥ ಎ.ಪಿ.ಸಿ, ಪ್ರಸಾದ
ಎ.ಪಿ.ಸಿ ತಂಡದಿಂದ ಪ್ರಕರಣದ ತನಿಖೆ ಕೈಗೊಂಡು ಸಾಕ್ಷಾಧಾರಗಳ ಆಧಾರದ ಮೇಲೆ
ಕೂಲಂಕುಶವಾಗಿ ಪರಿಶೀಲನೆ ನಡೆಸಿ ಸೆ.30 ಶನಿವಾರ ಬೆಳಿಗ್ಗೆ ಆರೋಪಿತರಾದ ಸಂತೋಷ್
ತಂದೆ ಸಿದ್ದಪ್ಪ ಗೋತಗಿ (19) ಸಾ: ಜಾಲಿಹಾಳ 2) ದುರುಗಪ್ಪ ತಂದೆ ಹನುಮಂತ
ಪೂಜಾರಿ (22) ಸಾ: ಜಾಲಿಹಾಳ, ರವರನ್ನು ಪತ್ತೆ ಮಾಡಿ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಘಟನೆ ವಿವರ: ಕೊಲೆಯಾದ ವ್ಯಕ್ತಿ ಮತ್ತು ಆರೋಪಿತರು ಒಂದೇ ಗ್ರಾಮ ಮತ್ತು ಒಂದೇ ಸಮುದಾಯದವರಿದ್ದು ಮೃತನು ಆರೋಪಿ ಸಂತೋಷನಿಗೆ
ಈಗ್ಗೆ ಸುಮಾರು 2 ತಿಂಗಳಿನಿಂದ ಕುಡಿದ ನಶೆಯಲ್ಲಿ ನಿನ್ನ ತಾಯಿ ಮತ್ತು ಅಕ್ಕನನ್ನು ನನ್ನ ಜೊತೆ ಮಲಗಲು
ಎಂದು ವಿಪರೀತ ಕಿರಿಕಿರಿ ಮಾಡುತ್ತಾ ಬಂದಿದ್ದು ಹಾಗೂ ಆರೋಪಿ ದುರುಗಪ್ಪನ
ಪ್ರೇಯಸಿಗೆ
ಮೋಬೈಲ್ ನಿಂದ ಸಂದೇಶ ಕಳಿಸಿದ್ದರಿಂದ ಇವರಿಬ್ಬರ ನಡುವೆ ದ್ವೇಷ ಬೆಳೆದು ಆರೋಪಿತರಿಬ್ಬರೂ ಸೇರಿ ಭಾಗಪ್ಪನನ್ನು ಮಚ್ಚಿನಿಂದ ಕೊಚ್ಚಿ, ಚುಚ್ಚಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಎಸ್.ಪಿ ಯಶೋಧಾ ವಂಟಗೋಡಿ ತಿಳಿಸಿದ್ದಾರೆ.
ಪ್ರಾರಂಭದಲ್ಲಿ ಕೊಲೆ ಮಾಡಿದ ಆಪಾದಿತರ ಮಾಹಿತಿಯೇ ಇಲ್ಲದ ಸೂಕ್ಷ್ಮ ರೀತಿಯ ಕೊಲೆ ಪ್ರಕರಣ ದಾಖಲಾದ 4 ದಿನಗಳಲ್ಲಿ ಪತ್ತೆ ಮಾಡಿ ಪ್ರಕರಣ ಭೇದಿಸಿದ ಕುಷ್ಟಗಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ
ತಂಡಕ್ಕೆ ಎಸ್.ಪಿ ಯಶೋಧಾ ವಂಟಗೋಡಿ ಪ್ರಶಂಸನೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದರು.
Comments are closed.