ವಿಕಲಚೇತನ ನೌಕರರನ ಮೇಲೆ  ಹಲ್ಲೆ ಕ್ರಮಕ್ಕೆ ಬೀರಪ್ಪ ಅಂಡಗಿ ಒತ್ತಾಯ

0

Get real time updates directly on you device, subscribe now.

ಕೊಪ್ಪಳ: ಮಂಡ್ಯ ಜಿಲ್ಲೆಯ ಹುಲಿಕೇರೆ ಗ್ರಾಮ ಪಂಚಾಯತಿಯಲ್ಲಿ ದ್ವೀತಿಯ ದರ್ಜೆ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿರುವ ವಿಕಲಚೇತನ ನೌಕರನಾದ ನವೀನ ಎಂಬುವರ ಮೇಲೆ ಖಾತೆಯನ್ನು ಮಾಡಿಕೊಟ್ಟಿಲ್ಲ ಎಂಬ ಕಾರಣಕ್ಕಾಗಿ ಕೂಡಿ ಹಾಕಿ ಕೋಲು ಹಾಗೂ ಬೆಂಕಿ ನಂದಿಸುವ ಸಿಲಿಂಡರಿನಿಂದ ಚೆಲುವರಾಜು ಎಂಬುವರು ಹಲ್ಲೆ ಮಾಡಿರುವುದನ್ನು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಅವರು ಖಂಡಿಸುವುದರ ಜೊತೆಯಲ್ಲಿ ಹಲ್ಲೆ ಮಾಡಿದವರನ್ನು ಕೂಡಲೇ ಬಂದಿಸಿ ಕಾನೂನಿನ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಖಾತೆ ಮಾಡಿ ಕೊಡಲಿಲ್ಲ ಎಂಬ ಒಂದೇ ಒಂದು ಕಾರಣಕ್ಕಾಗಿ ವಿಕಲಚೇತನ ನೌಕರರನ ಮೇಲೆ ಹಲ್ಲೆ ಮಾಡಿರುವುದು ವಿಕಲಚೇತನ ನೌಕರರ ಸಮೂಹಕ್ಕೆ ಮಾಡಿದ ಅವಮಾನವಾಗಿದೆ.ಯಾವುದೇ ಪ್ರಮಾದವಾದರೂ ಕೂಡಾ ಅದಕ್ಕೆ ಅದರದೇಯಾದ ಕಾನೂನುಗಳು ಇರುತ್ತವೆ.ಅದನ್ನು ಬಿಟ್ಟು ಕಾನೂನು ಕೈಗೆ ತೆಗೆದುಕೊಳ್ಳುವುದರ ಮೂಲಕ ಕೋಲು ಹಾಗೂ ಬೆಂಕಿ ನಂದಿಸುವ ಸಿಲಿಂಡರನಿಂದ ಹಲ್ಲೆ ಮಾಡಿರುವುದು ಅಕ್ಷಮ್ಯ ಅಪರಾದವಾಗಿದೆ.ಹಲ್ಲೆ ಮಾಡಿದ ಚೆಲುವರಾಜ ಅವರನ್ನು ಕೂಡಲೇ ಬಂಧಿಸಿಬೇಕು ಅಲ್ಲದೇ ಅವನಿಗೆ ಕಾನೂನಿನ ರೀತಿಯಲ್ಲಿ ಶಿಕ್ಷೆ ನೀಡುವ ನಿಟ್ಟಿನಲ್ಲಿ ಸರಕಾರದ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಇದರ ಬಗ್ಗೆ ಒಂದು ವಿಶೇಷ ತಂಡವನ್ನು ರಚಿಸಬೇಕು.ಇಂತಹ ಘಟನೆಗಳಿಂದ ವಿಕಲಚೇತನ ನೌಕರರು ಭಯದ ವಾತಾವರಣದಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ.ಹಲ್ಲೆ ಮಾಡಿದವನ ವಿರುದ್ಧ ಕ್ರಮ ಕೈಗೊಂಡಾಗ ಮಾತ್ರ ವಿಕಲಚೇತನ ನೌಕರರು ನೆಮ್ಮದಿ ವಾತಾವರಣದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!