ಪತ್ರಕರ್ತರು ಗುಂಪುಗಾರಿಕೆ ಬಿಟ್ಟು ಅಧ್ಯಯನಶೀಲರಾಗಲು ಸಚಿವ ಬಸವರಾಜ ರಾಯರೆಡ್ಡಿ ಸಲಹೆ
Kannadanet 24×7 News

ಜಿಲ್ಲಾಮಟ್ಟದ ಪತ್ರಿಕಾ ದಿನಾಚರಣೆ: ಉದ್ಘಾಟನೆ

ಯಲಬುರ್ಗಾ.
ಪತ್ರಕರ್ತರು ರಾಜಕಾರಣಿಗಳಂತೆ ಗುಂಪು ಗಾರಿಕೆಯಲ್ಲಿ ತೊಡಗುವುದು ಸರಿಯಲ್ಲ. ಸಾಮಾಜವನ್ನು ತಿದ್ದುವ ಪತ್ರಕರ್ತರು ಹಲವು ಸಂಘಗಗಳನ್ನು ರಚಿಸಿಕೊಂಡು ಗುಂಪುಗಾರಿಕೆ ಮಾಡುವುದನ್ನು ಬಿಡಬೇಕು. ಅಧ್ಯಯನ ಶೀಲರಾಗಿ ಸಮಾಜದ ಹಿತಕ್ಕಾಗಿ ಉತ್ತಮ ಪತ್ರಕರ್ತರಾಗಿ ಕೆಲಸ ಮಾಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಸಲಹೆ ನೀಡಿದರು.

ಕಾರ್ಯನಿರತ ಪತ್ರಕರ್ತರ ಸಂಘ, ಕೊಪ್ಪಳ ಜಿಲ್ಲಾ ಘಟಕ ಹಾಗೂ ಯಲಬುರ್ಗಾ ತಾಲೂಕ ಘಟಕದ ಸಹಯೋಗದಲ್ಲಿ ಶುಕ್ರವಾರ ಪಟ್ಟಣದ ಬುದ್ಧ, ಬಸವ, ಅಂಬೇಡ್ಕರ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಯ ಪತ್ರಿಕಾ ದಿನಾಚರಣೆ ಹಾಗೂ ಕೆಯುಡಬ್ಯ್ಲೂಜೆ ಮತ್ತು ದತ್ತಿ ಪ್ರಶಸ್ತಿ ಪ್ರಧಾನ ಹಾಗೂ ಜಿಲ್ಲಾ ಮಟ್ಟದ ಪತ್ರಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಶಾಸಕಾಂಗ,ಕಾರ್ಯಾಂಗ, ನ್ಯಾಯಾಂಗ ಸಂವಿಧಾನದ ಲಿಖಿತ ಅಂಗವಾಗಿದ್ದರೂ ಪತ್ರಿಕಾರಂಗ ಪ್ರಜಾಪ್ರಭುತ್ವದ ಅಲಿಖಿತ ನಾಲ್ಕನೇ ಅಂಗವಾಗಿದೆ. ಪತ್ರಿಕಾರಂಗಕ್ಕೆ ಮಹತ್ವವಾದ ದೊಡ್ಡ ಸ್ಥಾನವಿದೆ. ಸಾಮಾಜಿಕ ಮತ್ತು ರಾಜಕೀಯ ವ್ಯವವಸ್ಥೆಯನ್ನೆ ತಿದ್ದುವ ಶಕ್ತಿ ಪತ್ರಿಕೆಗೆ ಇದೆ. ಇಂತಹ ಪತ್ರಿಕಾ ಕ್ಷೇತ್ರವನ್ನು ನ್ಯಾಯಬದ್ಧವಾಗಿ ನಡೆಸಿಕೊಂಡು ಹೊಗುವ ಜವಬ್ದಾರಿ ಪತ್ರಕರ್ತರ ಮೇಲಿದೆ. ಪತ್ರಕರ್ತರಾದವರಿಗೆ ಶಿಸ್ತು, ಬದ್ಧತೆ ಇರಬೇಕು. ಕುಳಿತಲ್ಲೆ ಎಲ್ಲವನ್ನು ನೋಡುವ ಅವಕಾಶವಿದ್ದರು ಕಲುಸಿತ ಸಮಾಜದಿಂದ ಕೆಡುವ ವಾತರವರಣಕ್ಕೆ ಪತ್ರಕರ್ತರು ಕಡಿವಾಣ ಹಾಕಬೇಕು. ಪತ್ರಕರ್ತರು ಕೆಲವು ನೀತಿ ಸಂಹಿತೆ ಹಾಕಿಕೊಳ್ಳಬೇಕು. ವಿಷಯ ತಿಳಿದುಕೊಂಡು ಪತ್ರಕರ್ತರು ಪ್ರಶ್ನೇ ಮಾಡಬೇಕು. ಪ್ರಶ್ನಿಸುವ ಮುಂಚೆ ಅಧ್ಯಯನ ಮಾಡಬೇಕು. ಜನಪ್ರತಿನಿಧಿಗಳ ಟೀಕೆಗಳನ್ನೆ ಹೆಚ್ಚು ಬಿಂಬಿಸುವ ಬದಲು ಅವರು ಮಾಡುವ ತಪ್ಪು ಸರಿಗಳನ್ನು ಬಿಂಬಿಸಿ ಸಮಾಜಕ್ಕೆ ತಿಳಿಸುವ ಕೆಲಸ ಪತ್ರಕರ್ತರು ಮಾಡಬೇಕು. ಪ್ರತಿ ಸೆಕೆಂಡ್ ಗೆ ಮೂರು ಲಕ್ಷ ಕೀ.ಮೀ ಸಂಚರಿಸುವ ಡಿಜಿಟಲ್ ಯುಗ ಇಂದು ವೇಗವಾಗಿ ಬೆಳೆಯುತ್ತದೆ. ಇಂತಹದರಲ್ಲಿ ಮಾಧ್ಯಮದಿಂದ ಉತ್ತಮ ಸಂಗತಿ ಹೊರಬರಬೇಕು ಎಂದು ಪತ್ರಕರ್ತರಿಗೆ ಕರೆ ನೀಡಿದರು.
ಕರ್ನಾಟ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಆಶಯ ನುಡಿ ವ್ಯಕ್ತಪಡಿಸಿ, ಇತ್ತಿಚೀಗೆ ಕ್ರಿಮಿನಲ್ ಮತ್ತು ಭ್ಲಾಕ್ ಮೇಲ್ ಮಾಡುವ ಪತ್ರಕರ್ತರು ಹೆಚ್ಚುತ್ತಿದ್ದಾರೆ. ಇದರ ಬಗ್ಗೆ ಸಮಾಜ ಮತ್ತು ರಾಜಕಾರಣಿಗಳು ಎಚ್ಚರವಹಿಸಬೇಕು ಎಂದು ಕರೆ ನೀಡಿದರು.
ಮಾಧ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ ಮಾತನಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಅತ್ಯಂತ ಕ್ರೀಯಾಶೀಲ ಸಂಘವಾಗಿ ರಾಜ್ಯಕ್ಕೆ ಮಾದರಿಯಾಗಿದೆ. ರಾಜ್ಯದ ಪತ್ರಕರ್ತರಿಗೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರು ಬೆನ್ನೆಲುಬಾಗಿದ್ದಾರೆ ಎಂದರು.
ಹಿರಿಯ ಪತ್ರಕರ್ತ ಪ್ರಸನ್ನ ದೇಸಾಯಿ, ಕೊಪ್ಪಳದ ಬ್ರಹ್ಮಾನಂದ ಬಡಿಗೇರ, ಕಾರಟಗಿಯ ಶರಣಪ್ಪ ಸೇರಿದಂತೆ ಹಲವು ಪತ್ರಕರ್ತರಿಗೆ ಜಿಲ್ಲಾ ಉತ್ತಮ ಪತ್ರಕರ್ತ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ, ಜಿಲ್ಲಾಧ್ಯಕ್ಷ ಹನುಂಮತ ಹಳ್ಳಿಕೇರಿ, ಕಕಾನಿಪ ಸಂಘದ ಜಿಲ್ಲಾ ಉಪಾಧ್ಯಕ್ಷ ರಾಜು.ಬಿ.ಆರ್, ಪ್ರಸನ್ನ ದೇಸಾಯಿ, ಚಾಂದಸಿಂಗ್ ರಜಪೂತ್, ರಾಜ್ಯ ಸಮಿತಿ ಸದಸ್ಯ ವೀರಣ್ಣ ಕಳ್ಳಿಮನಿ, ದೇವರಾಜ, ರಾಜು, ಹಿರಿಯ ಪತ್ರಕರ್ತರಾದ ಹರೀಶ ಹೆಚ್.ಎಸ್, ಸಾದೀಕ್ ಅಲಿ, ಗೊನಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕರಬಸಪ್ಪ ನಿಡಗುಂದಿ, ಮುಖಂಡ ಬಟಪನಳ್ಳಿ, ವೀರನಗೌಡ ಬಳ್ಳುಟಗಿ, ಕಳಕಪ್ಪ ಕಂಬ್ಳಿ, ಬಿಜೆಪಿ ತಾಲೂಕ ಅಧ್ಯಕ್ಷ ಮಾರುತಿ ಗೌರಾಳ ಮತ್ತಿತರರು ಇದ್ದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಯಲಬುರ್ಗಾ ತಾಲೂಕ ಅಧ್ಯಕ್ಷ ಮಲ್ಲು ಮಾಟ್ರಂಗಿ ಪ್ರಸ್ತಾವಿಕವಾಗಿ ಮಾತನಾಡಿ, ಸಂಘದಬಚಟುವಟಿಗೆ ಹಾಲಿ ಸಚಿವ ರಾಯರೆಡ್ಡಿ ಮತ್ತು ಮಾಜಿ ಸಚಿವ ಹಾಲಪ್ಪ ಆಚಾರ ಅವರು ಸಹಕಾರ ನೀಡಿದ್ದಾರೆ. ಎಲ್ಲ ಪತ್ರಕರ್ತರ ಸಹಕಾರದಿಂದ ಪಟ್ಟಣದಲ್ಲಿ ಜಿಲ್ಲಾ ಪತ್ರಿಕಾ ಸಮಾವೇಶ ಮಾಡುತ್ತಿದ್ದೇವೆ ಎಂದು ಸಹಕಾರ ನೀಡಿದ ಎಲ್ಲರಿಗೂ ಅಭಿನಂದಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ.ನಾಗರಾಜ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮಹಾಂತೇಶ ಚಲುವಾದಿ ಸ್ವಾಗತಿಸಿದರು. ತಾಲೂಕ ಗೌರವ ಅಧ್ಯಕ್ಷ ಇಮಾಮ್ ಹುಸೇನ್, ಸದಸ್ಯರಾದ ಚಂದ್ರು ಮತ್ತಿತರು ಇದ್ದರು. ಪ್ರಾರಂಭದಲ್ಲಿ ಡಿವಿಜಿ ಅವರ ಭಾವಚಿತ್ರದೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಪತ್ರಕರ್ತರು ಅದ್ದೂರಿ ಮೆರವಣಿಗೆ ನಡೆಸಿದರು.ಕ್ರಮಕ್ಕೆ ಬೀರಪ್ಪ ಅಂಡಗಿ ಒತ್ತಾಯ