ಬೀರಪ್ಪ ಅಂಡಗಿಗೆ ಶಿಕ್ಷಣ ಸೇವಾರತ್ನ ಪ್ರಶಸ್ತಿ ಪ್ರದಾನ

0

Get real time updates directly on you device, subscribe now.

ಕೊಪ್ಪಳ: ವಿಕಲಚೇತನ ನೌಕರರ ಸಂಘದ ಹಾಗೂ ಎನ್‌.ಪಿ.ಎಸ್.ನವೆಂಬರ್ ಸಂಘದ ರಾಜ್ಯಾಧ್ಯಕ್ಷ ಹಾಗೂ ಸರಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಅವರಿಗೆ ಕರ್ನಾಟಕ ಪ್ರಸ್ ಕ್ಲಬ್ ವತಿಯಿಂದ ಸೆ.20 ರ ಭಾನುವಾರ ಸಂಜೆ ಬೆಂಗಳೂರು ನಗರದ ಟೌನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಗುರು ನಮನ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಶಿಕ್ಷಣ ಸೇವಾರತ್ನ  ಪ್ರಶಸ್ತಿ ನೀಡಿ ಗೌರವಿಸಿದರು.
ಬಹದ್ದೂರಬಂಡಿ ಶಾಲಾ ಮಕ್ಕಳನ್ನು ಸ್ವಂತ ಖರ್ಚಿನಲ್ಲಿ ವಿಮಾನಯಾನ ಮಾಡಿಸಿದ್ದು,ಜೊತೆಯಲ್ಲಿ ಶಾಲಾ ಕಟ್ಟದ ಸೇರಿದಂತೆ ಮುಂತಾದ ಶೈಕ್ಷಣಿಕ ಪ್ರಗತಿಯನ್ನು  ಗಮಿಸಿ ಪ್ರಶಸ್ತಿ ನೀಡಿದ್ದಾರೆ.
ಈ ಸಮಯದಲ್ಲಿ ನಿವೃತ್ತಿ ಲೋಕಾಯುಕ್ತರಾದ ಎನ್.ಸಂತೋಷ ಹೆಗಡೆ,ಕರ್ನಾಟಕ ಪ್ರಸ್ ಕ್ಲಬ್ ಅಧ್ಯಕ್ಷರಾದ ರಾಮಸ್ವಾಮಿ,ಕಾರ್ಯದರ್ಶಿ ರಮೇಶ,ಶ್ರೀಪಾದ ಸೇರಿದಂತೆ ಮುಂತಾದವರು ಹಾಜರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!