ಗೋಶಾಲೆ ಆರಂಭಿಸುವಂತೆ ಆಗ್ರಹಿಸಿ ಜಾನುವಾರುಗಳೊಂದಿಗೆ ರೈತರ ಪ್ರತಿಭಟನೆ

ಕನಕಗಿರಿ: ತಾಲೂಕಿನಾದ್ಯಂತ ಗೋಶಾಲೆಗಳನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿ ರೈತರು ಜಾನುವಾರುಗಳೊಂದಿಗೆ ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಸರ್ಕಲ್‌ನ ಸರ್ಕಾರಿ ಆಸ್ಪತ್ರೆ ಬಳಿಯಿಂದ ರೈತರು ಜಾನುವಾರುಗಳೊಂದಿಗೆ ಮೆರವಣಿಗೆ ಮೂಲಕ ಯಮನೂರಪ್ಪ ದರ್ಗಾ ಮಾರ್ಗವಾಗಿ ಮೇಲ್ಗಡೆ ಹಾದು ರಾಜಬೀದಿ ಮೂಲಕ ತಹಶೀಲ್ದಾರ್ ಕಚೇರಿಗೆ ಆಗಮಿಸಿದರು.
ತಾಲೂಕಿನಲ್ಲಿ ಮಳೆ ಕೊರತೆ ಹಾಗೂ ಮೇವಿನ ಸಮಸ್ಯೆಯಿಂದ ಜಾನುವಾರುಗಳನ್ನು ಸಾಕುವುದು ರೈತರಿಗೆ ಕಷ್ಟಕರವಾಗುತ್ತಿದೆ. ಜಾನುವಾರುಗಳಿಗೆ ಸಮರ್ಪಕ ಮೇವು ಮತ್ತು ನೀರಿನ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ತಾಲೂಕಿನಲ್ಲಿ ಹಗಲಿನಲ್ಲಿ ಏಳು ತಾಸು ರಾತ್ರಿ ಸಮಯದಲ್ಲಿ ಕಾಡುಪ್ರಾಣಿಗಳ ಹಾವಳಿ ಜಾಸ್ತಿ ಇದ್ದು ಈ ಕೂಡಲೇ ಸಾಯಂಕಾಲ 6:00ಯಿಂದ ಬೆಳಗ್ಗೆ 6 ಗಂಟೆವರೆಗೂ ಟು ಫೇಸ್ ವಿದ್ಯುತ್ ಸರಬರಾಜು ಮಾಡಬೇಕು. ಕನಕಗಿರಿಯ ಸುತ್ತಮುತ್ತ ಇರುವ ಎಲ್ಲಾ ಕೆರೆಗಳನ್ನು ಮತ್ತು ಸಣ್ಣಪುಟ್ಟ ಕೆರೆಗಳನ್ನು ದುರಸ್ತಿ ಮಾಡಿಸಿ ತುಂಬಿಸುವ ಕೆಲಸ ಜಿಲ್ಲಾಡಳಿತ ಭವನ ಮಾಡಬೇಕು. ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಈ ಹಿಂದೆ ಇದ್ದ. ಜನವರಿ ಯಲ್ಲಿ ಕನಕಗಿರಿ ಬಂದ್ ಕರೆ ಕೊಟ್ಟ 11 ಹಕ್ಕುತಾಯಗಳನ್ನು ಈ ಕೂಡಲೇ ಜಾರಿ ಮಾಡಬೇಕು. ಇನ್ನಿತರ ವಿಷಯಗಳು. ಕೆರೆತುಂಬಿಸುವ ಯೋಜನೆಯಾದ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮತದಿಂದ ಈಗಾಗಲೇ ಕನಕಗಿರಿ ತಾಲೂಕಿನಲ್ಲಿ ಸುತ್ತಮುತ್ತ ಹಳ್ಳಿಯಲ್ಲಿರುವ ದೊಡ್ಡ ಕೆರೆಗಳಿಗೆ ಮಾತ್ರ ನೀರು ಒದಗಿಸುವ ಕೆಲಸ ನಡೆಯುತ್ತಿದೆ. ಡ್ಯಾಮಿನ ಒಳಗಡೆ ನೀರುಖಾಲಿ ಯಾಗುವದರೊಳಗೆ ಈ ಕೂಡಲೇ ಎಲ್ಲಾ ಕೆರೆಗಳನ್ನು ತೀವ್ರಗತಿಯಲ್ಲಿ ತುಂಬಿಸಬೇಕು ಅದರ ಜೊತೆಗೆ ಕನಕಗಿರಿಯಲ್ಲಿ ಇನ್ನು ಚಿಕ್ಕ ಚಿಕ್ಕ ಕೆರೆಗಳು ದುರಸ್ತಿಯಾಗಿವೆ. (ಉದಾ:- ಓಣಿಮನಿ ಕೆರೆ, ಚಿನ್ನದಯ್ಯನ ಕೆರೆ) ಇನ್ನಿತರವು ಅವುಗಳನ್ನು ಸರಿಪಡಿಸಿ ಚಿಕ್ಕ ಚಿಕ್ಕ ಕೆರೆಗಳನ್ನು ತುಂಬಿಸುವದರ ಮುಖಾಂತರ ರೈತರ ನೆರವಿಗೆ ಹಾಗೂ ಪ್ರಾಣಿ ಪಕ್ಷಿಗಳ ನೆರವಿಗೆ ಧಾವಿಸಬೇಕು. ಇದನ್ನೇ ಜಿಲ್ಲೆಯಾದ್ಯಂತ ವಿಸ್ತರಿಸಬೇಕು ಹಾಗೂ ಕೃಷ್ಣ ಬಿ ಸ್ಕೀಮ್ ತಾಂತ್ರಿಕ ಸಮಸ್ಯೆಯಿಂದ ಕೋರ್ಟ್ ಮೆಟ್ಟಿಲೇರಿರುವ ಕಾರಣ ಇದರ ವರದಿಯನ್ನು ತರಿಸಿಕೊಂಡು ಪರಿಸ್ಥಿತಿ ಅವಲೋಕಿಸಿ ಕೊಪ್ಪಳ ಏತ ನೀರಾವರಿಯನ್ನು ಮಾನ್ಯ ಜಿಲ್ಲಾಧಿಕಾರಿಗಳು ಜಿಲ್ಲಾ ಆಡಳಿತ ಭವನದಿಂದ ಈ ಕೂಡಲೇ ಒಬ್ಬ ವಕೀಲರನ್ನು ನೇಮಕ ಮಾಡಿ ಕೃಷ್ಣ ಬಿ ಸ್ಕೀಮ್ ಯಾವ ಹಂತದಲ್ಲಿದೆ ಯಾಕೆ ತಡೆಹಿಡಿಯಲಾಗಿದೆ ಇದಕ್ಕೆ ಮೂಲ ಕಾರಣ ಏನು ಅದನ್ನು ಈ ಕೂಡಲೇ ಸರಿಪಡಿಸಿ. ರೈತರ ಜಮೀನಿಗೆ ಡ್ರಿಪ್ ಇರಿಗೇಶನ್ ಮುಖಾಂತರ ನೀರು ಒದಗಿಸಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು ಎಂದು ರೈತರು ತಿಳಿಸಿದರು. ಬೇಡಿಕೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವಾಗಿ ಗೋಶಾಲೆಗಳನ್ನು ಆರಂಭಿಸಿ ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು
ಆಗ್ರಹಿಸಿದರು. ಈ ಸಂದರ್ಭದಲ್ಲಿ ಗಣೇಶರೆಡ್ಡಿ ಕನಕಗಿರಿ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರು ಕೊಪ್ಪಳ. ಬಸವರಾಜ ದೇಸಾಯಿ ತಾಲೂಕ ಅಧ್ಯಕ್ಷರು. ಕನಕಗಿರಿ ಮರಿಯಪ್ಪ ಸಾಲೋಣಿ ಕಾರಟಗಿ ರೈತ ಮುಖಂಡರು. ಶರಣೇಗೌಡ ಕೇಸರಟ್ಟಿ ರೈತ ಮುಖಂಡರು.
ಜಿಲ್ಲಾ ಪ್ರಧಾನ ಕಾರ್ಯ ಕಾರ್ಯದರ್ಶಿ ವೆಂಕಟೇಶ್ ಕುಲಕರ್ಣಿ ಹುಲಿ ಐದರ್. ಮರಿಯಪ್ಪ ಹುಗ್ಗಿ ತಾಲೂಕು ಪ್ರಧಾನ ಕಾರ್ಯದರ್ಶಿ. , ಕನಕಪುರ ಅಧ್ಯಕ್ಷರು. ರಾಮಣ್ಣ ಜಾಡಿ ಅಧ್ಯಕ್ಷರು ಹುಲಿಹೈದರ್. ಬಸವರಾಜ್ ದೇಸಾಯಿ ತಾಲೂಕ ಅಧ್ಯಕ್ಷರು ಕನಕಗಿರಿ.ಲಾಲ್ ಸಾಬ್ ಜುಲಿಕೆರೆ ಕಾರ್ಯಧ್ಯಕ್ಷರು. ವೀರೇಶ್ ಬಿ ನಗರ ಘಟಕದ ಅಧ್ಯಕ್ಷರು. ಭೀಮೇಶ್ ಕುರುಬರ್ ಕೃಷ್ಣ ಕಾಖಿ ಶರಣಪ್ಪ ಕೋ ರೆಡ್ಡಿ ಶಿವಕುಮಾರ್ ಲಾಯದ ಹುಣಸಿ. R.B ಪಾಟೀಲ್ ವಕೀಲರು. ಅಮರೇಶ ಹುಲಿಹೈದರ್. ಗೋಸ್ಲೆಪ್ಪ ಗದ್ದಿ. ನಾಗೇಶ್ ಪೂಜಾರ್. ಪಾಮಣ್ಣ ಪೂಜಾರ್. ನಾಗಪ್ಪ ಕೊರೆಡ್ಡಿ. ಬಸರಿ ಹಾಳ ರೈತರು. ಗೌರಿಪುರ ರೈತರು. ಹುಲಿ ಐದರ್ ರೈತರು. ಕನಕಪುರ ರೈತರು. ಮುಸ್ಲಾಪುರ ರೈತರು. ನಾಗಲಾಪುರ ರೈತರು. ಚಿಕ್ಕ ಮಾದಿನಾಳ್ ರೈತರು. ಇನ್ನಿತರ ರೈತ ಮುಖಂಡರು ಹಾಜರಿದ್ದರು.