ಹಿರೇಬಗನಾಳ ಜಾಹಗೀರ ಮಠದ ಶ್ರೀ ಗವಿಸಿದ್ದೇಶ್ವರ ಶ್ರೀಗಳ ೧೧ನೇ ವರ್ಷದ ಪುಣ್ಯಾರಾಧನೆ

Get real time updates directly on you device, subscribe now.


ಶ್ರೀಗಳು ಭಕ್ತರಿಗೆ ಅನೇಕ ತೊಂದರೆಗಳನ್ನು ನಿವಾರಣೆ ಮಾಡುವಂತಹ ಮಹಾ ಚೈತನ್ಯ ಸ್ವರೂಪಿಗಳಾಗಿದ್ದರು : ಹಡಗಲಿ ಶ್ರೀಗಳು
ಕೊಪ್ಪಳ: ಒಬ್ಬ ವ್ಯಕ್ತಿ ಇದ್ದಾಗಲೂ ಅಷ್ಟೇ ಬೆಳೆಯಬೇಕು ಅವರು ಇಲ್ಲದೇ ಇರುವ ಸಂದರ್ಭದಲ್ಲಿಯೂ ಸಹಿತ ಅವರನ್ನು ಸ್ಮರಿಸಬೇಕು. ಅಂದಾಗ ಮಾತ್ರ ಜನಮನ್ನಣೆಗೆ ಪಾತ್ರರಾದವರು ಎಂದು ನಾವು ತಿಳಿದುಕೊಳ್ಳುತ್ತೇವೆ. ಆ ನಿಟ್ಟಿನಲ್ಲಿ ಹಿರೇಬಗನಾಳದ ಗವಿಸಿದ್ದ ಮಹಾಶ್ರೀಗಳು ಅವರು ಇದ್ದ ಸಮಯದಲ್ಲಿಯೂ ಸಹಿತ ಅಷ್ಟೇ ತಪಸ್ವೀಗಳಾಗಿ, ಉದಾರಿಗಳಾಗಿ, ಆಭಾರಿಗಳಾಗಿ ಮತ್ತು ಭಕ್ತರಿಗೆ ಅನೇಕ ತೊಂದರೆಗಳನ್ನು ನಿವಾರಣೆ ಮಾಡುವಂತಹ ಮಹಾ ಚೈತನ್ಯ ಸ್ವರೂಪಿಗಳಾಗಿದ್ದರು ಎಂದು ಹೂವಿನಹಡಗಲಿಯ ಶಾಖಾ ಗವಿಮಠದ ಡಾ.ಹಿರಿಶಾಂತವೀರ ಶ್ರೀಗಳು ಹೇಳಿದರು.
ಅವರು ತಾಲ್ಲೂಕಿನ ಹಿರೇಬಗನಾಳ ಗ್ರಾಮದಲ್ಲಿರುವ ಜಾಹಗೀರ ಶ್ರೀ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ೧೧ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿ ಮಾತನಾಡಿದರು.
ಹಿರೇಬಗನಾಳ ಜಾಹಗೀರ ಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ನಿಜಕ್ಕೂ ಅವರ ಜೀವಂತಿಕೆಯನ್ನು, ತಪಸ್ಸನ್ನು, ಅವರು ಮಾಡಿರುವ ಕಾರ್ಯ ಸಾಧನೆಗಳನ್ನು ನೆನೆಸುವಂತಹ ಮತ್ತು ಸ್ಮರಿಸುವಂತಹ ಕಾರ್ಯವನ್ನು ಬಗನಾಳ ಗ್ರಾಮದ ಸಮಸ್ತ ಗುರು ಹಿರಿಯರು, ಸದ್ಬಕ್ತರು ಹಾಗೂ ತಾಯಂದಿರು ಮಾಡಿದ್ದಾರೆ. ಶ್ರೀಗಳವರ ನಿತ್ಯ ಇವತ್ತಿಗೂ ಸಹಿತ ಅವರ ಗದ್ದುಗೆಯನ್ನು ನಮಸ್ಕಾರ ಮಾಡದೇ ಹೋದರೆ ಏನೇಲ್ಲಾ ಕಾರ್ಯಗಳು ಸಹಿತ ಯಶಸ್ವಿಯಾಗುತ್ತವೆ. ಅವರಲ್ಲಿರುವ ಚೈತನ್ಯ ಶಕ್ತಿ ಬಹಳ ದೊಡ್ಡದು. ಅಂತಹ ಚೈತನ್ಯ ಶಕ್ತಿಯನ್ನು ಸ್ಮರಿಸಬೇಕಾಗುತ್ತದೆ. ಪೂಜ್ಯರು ಬಹಳ ಸರಳರು, ವಾಗ್ಮೀಗಳು, ವಿಷಾಲ ಹೃದಯದವರು, ವೈದ್ಯ ರತ್ನರಾಗಿದ್ದರು.
ಪೂಜ್ಯ ಜಗದ್ಗುರು ೧೬ನೇ ಪೀಠಾಧೀಪತಿಗಳಾಗಿರುವ ಮರಿಶಾಂತವೀರ ಶ್ರೀಗಳ ಪರಮ ಶಿಷ್ಯರಾಗಿದ್ದರು. ಜೊತೆಗೆ ಅವರ ಮೇಲೆ ಅಪ್ರತಿಮವಾಗಿರುವ ಪ್ರೀತಿ, ವಾತ್ಸಲ್ಯ ಪ್ರೇಮವನ್ನು ಕಂಡಂತವರು. ನಿಜಕ್ಕೂ ಸಹಿತ ಅಂತಹ ಪರಮ ಪೂಜ್ಯರು ಬಗನಾಳ ಗ್ರಾಮಕ್ಕೆ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ದೊರೆತಿದ್ದು, ಭಕ್ತರ ಸುದೈವ ಮತ್ತು ಪುಣ್ಯ ಎಂದು ಹೇಳಬಹುದು. ಏಕೆಂದರೆ, ಪೂಜ್ಯರಲ್ಲಿದ್ದಂತ ಸರಳತೆ ನಿಜಕ್ಕೂ ಅವರನ್ನು ಎಂದು ಮರೆಯುವಂತಿಲ್ಲ.
ಯಾರನ್ನು ಏನು ಕೇಳದೇ ಯಾರಿಗೂ ಸಹಿತ ತೊಂದರೆ ಕೊಡದೇ ಬದುಕಿ ಬಾಳಿ ತಮ್ಮ ತಪಸ್ಸನ್ನು ಆಚರಿಸಿ ಭಕ್ತರನ್ನು ಉದ್ದಾರ ಮಾಡಿರುವ ಕೀರ್ತಿ ಬಗನಾಳ ಶ್ರೀಗಳಾದ ಗವಿಸಿದ್ದ ಮಹಾಸ್ವಾಮಿಗಳಿಗೆ ಸಲ್ಲುತ್ತದೆ. ಮನುಷ್ಯನಿಗೆ ಏನು ಬೇಕು ಅನ್ನುವಂತಹದ್ದನ್ನು ಮತ್ತು ಆಯಾ ರೋಗಿಗೆ ಏನು ಔಷಧಿ ಕೊಡಬೇಕು ವಿಚಾರ ಮಾಡಬೇಕು. ಆತನನ್ನು ಉದ್ದಾರ ಮಾಡಬೇಕು ಎನ್ನುವ ಗುಣ ವೈಶಾಲ್ಯತೆ ಅವರಲ್ಲಿತ್ತು. ಯಾವ ದುಡ್ಡಿಗೆ ಸಹಿತ ಅವರು ಆಸೆ ಪಡದೇ ಇವರಲ್ಲಿ ಇದ್ದಂತ ಪಾಂಡಿತ್ಯವನ್ನು ಬೆಳೆಸಿ ಔಷಧಿ ಉಪಚಾರವನ್ನು ಕೊಟ್ಟು ಅವರನ್ನು ಗುಣಮುಖರನ್ನಾಗಿ ಮಾಡಿ ಆ ಕುಟುಂಬದ ಬೆಳಕಾಗಿರುತಕ್ಕಂತದ್ದನ್ನು ಈ ನಾಡು ಸ್ಮರಿಸುತ್ತದೆ. ಗಳಿಸಿದ್ರೆ ಸಾಕಷ್ಟು ಸಂಪತ್ತುಗಳಿಸಬಹುದಿತ್ತು, ಆದರೆ ಭೌತೀಕೆ ಸಂಪತ್ತಿಗಿಂತ, ಆಧಾತ್ಮೀಕ ಸಂಪತ್ತು ಭಕ್ತರ ಸಂಪತ್ತನ್ನು ಗಳಿಸಿರುತಕ್ಕಂತ ಪೂಜ್ಯರು ಯಾರಾದರೂ ಇದ್ದರೆ ಅದು ಬಗನಾಳದ ಶ್ರೀಗಳು. ಅವರು ನಿತ್ಯಲು ಇದ್ದಾರೆ ಎನ್ನುವುದಕ್ಕೆ ಇವತ್ತಿನ ಕಾರ್ಯಕ್ರಮವೇ ಸಾಕ್ಷಿ ಎಂದು ಹೂವಿನಹಡಗಲಿಯ ಶಾಖಾ ಗವಿಮಠದ ಡಾ.ಹಿರಿಶಾಂತವೀರ ಶ್ರೀಗಳು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಇಟಗಿ ಮಹಾಸ್ವಾಮಿಗಳು, ಮೈನಳ್ಳಿಯ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಮೃತ್ಯುಂಜಯ ಶ್ರೀಗಳು, ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು. ಪುಣ್ಯರಾಧನೆ ನಿಮಿತ್ಯ ಅಂದು ಬೆಳಿಗ್ಗೆಯಿಂದ ರುದ್ರಾಭಿಷೇಕ, ಮಹಾಮಂಗಳಾರತಿ ಜರುಗಿತು. ನಂತರ ಗ್ರಾಮದ ವಿವಿಧ ಭಾಗಗಳಲ್ಲಿ ಶ್ರೀಗಳ ಭಾವಚಿತ್ರದ ಮೆರವಣಿಗೆ ಜಾಂಜ್ ಮೇಳದೊಂದಿಗೆ ಬಹು ವಿಜೃಂಭಣೆಯಿಂದ ಜರುಗಿತು. ನಂತರ ಆಗಮಿಸಿದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

Get real time updates directly on you device, subscribe now.

Comments are closed.

error: Content is protected !!
%d bloggers like this: