ಅ.1 ರಂದು ಕೊಪ್ಪಳದಲ್ಲಿ ರಾಜ್ಯ ಸರ್ಕಾರಿ ನೌಕರರ ವಿಶೇಷ ಸಭೆ-ನಾಗರಾಜ ಜುಮ್ಮನ್ನವರ
ಕೊಪ್ಪಳ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸರ್ವ ಸದಸ್ಯ, ಪದಾಧಿಕಾರಿಗಳಿಂದ “ಬೈಲಾ ತಿದ್ದುಪಡಿ” ವಿಶೇಷ ಮಹಾಸಭೆಯು ಅ.1 ರಂದು ಕೊಪ್ಪಳ ನಗರದ ಹಿರೇಸಿಂದೋಗಿ ರಸ್ತೆಯ “ಮಹಾವೀರ” ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ರಾಜ್ಯ ಸರ್ಕಾರಿ ನೌಕರರ ಕೊಪ್ಪಳ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ ಹೇಳಿದರು.
ನಗರದ ಪತ್ರಿಕಾ ಭವನದ್ದಿ ಸುದ್ದಿಗೋಷ್ಠಿ ನಡೆಸಿ ಅ.1 ರಂದು ಬೆಳಿಗ್ಗೆ 11ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಕೊಪ್ಪಳ ಅಭಿನವ ಗವಿಶ್ರೀಗಳು ಸಾನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಉದ್ಘಾಟನೆ ಮಾಡಲಿದ್ದು, ಅಧ್ಯಕ್ಷತೆಯನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿಯ್ಯ ವಹಿಸುವರು. ಸಂಸದ ಸಂಗಣ್ಣ ಕರಡಿ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಬಸವರಾಜ ರಾಯರಡ್ಡಿ, ದೊಡ್ಡನಗೌಡ ಪಾಟೀಲ, ಜನಾರ್ಧನ ರೆಡ್ಡಿ, ಹೇಮಲತಾ ನಾಯಕ ಸೇರಿದಂತೆ ಹಲವು ಅಧಿಕಾರಿ ವರ್ಗದವರು ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ
” ಸೈಬರ್ ಹಾಸ್ಯ ಸಂಜೆ” ಈ ಆಧುನಿಕತೆಯಲ್ಲಿ ಇತ್ತೀಚಗೆ ಅನೇಕ ಸೈಬರ್ ಕ್ರೈಂಗಳು ಹೆಚ್ಚುತ್ತಿವೆ. ಇವುಗಳ ನಿಯಂತ್ರಣಕ್ಕೆ ಜಾಗತಿಕ ತಿಳುವಳಿಕೆ ಹಾಗೂ ಹಾಸ್ಯದ ಮೂಲಕ ಜಾಗೃತಿ ಮೂಡಿಸುವ ಭದ್ರತೆಯ ಮಾಸವನ್ನಾಗಿ ಆಚರಿಸಲಾಗುತ್ತದೆ. ಖ್ಯಾತ ಹಾಸ್ಯ ವಾಚಕರಾದ ಗಂಗಾವತಿ ಪ್ರಾಣೇಶ, ಸುಧಾ ಬರಗೂರು, ವೈ.ವಿ ಗುಂಡೂರಾವ್ , ಎಂ.ಎಸ್.ನರಸಿಂಹಮೂರ್ತಿ, ಹೆಚ್.ದುಂಡಿರಾಜ, ಬಸವರಾಜ ಮಹಾಮನಿ ಸೇರಿದಂತೆ ಅನೇಕ ಹಾಸ್ಯ ಕಲಾವಿದರಿಂದ ಹಾಸ್ಯ ಕಾರ್ಯಕ್ರಮ ಜರುಗುವುದು.
“ಪ್ರತಿಭಾ ಪುರಸ್ಕಾರ” ಈ ಕಾರ್ಯಕ್ರಮದಲ್ಲಿ 140 ಜನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು “ಪ್ರತಿಭಾ ಪುರಸ್ಕಾರ”ಕ್ಕೆ ಆಯ್ಕೆ ಮಾಡಲಾಗಿದೆ. ಆ ವಿದ್ಯಾರ್ಥಿಗಳನ್ನು ಸಂಘದಿಂದ ಪ್ರೋತ್ಸಾಹಿಸಿ ಹೆಚ್ಚಿನ ಪ್ರೇರಣೆ ನೀಡಲು ಸನ್ಮಾನಿಸಿ ಗೌರವಿಸಲಾಗುವುದು. ತದನಂತರದಲ್ಲಿ ಜಿಲ್ಲೆಯ ಸಚಿವ, ಸಂಸದ, ಶಾಸಕರನ್ನು ಸಹ ರಾಜ್ಯ ನೌಕರರ ಸಂಘದಿಂದ ಸನ್ಮಾನಿಸಲಾಗುವುದು. ಸುದ್ದಿಗೋಷ್ಠಿಯಲ್ಲಿ ಶಂಕರಗೌಡ ಮಾಲಿಪಾಟೀಲ, ಶಿವಪ್ಪ ಜೋಗಿ, ಗೋಪಾಲ ದುಬೆ, ಸುಧಾಕರ ಡಿ.ಜಿ, ಜಯತೀರ್ಥ ದೇಸಾಯಿ, ಎಸ್.ಎಸ್.ಸುಂಕದ ಉಪಸ್ಥಿತರಿದ್ದರು.
Comments are closed.