ದಾನಗಳಲ್ಲಿ ರಕ್ತದಾನ ಮಹಾದಾನವಾಗಿದೆ – ಅಮರೇಗೌಡ ಪಾಟೀಲ್ ಬಯ್ಯಾಪೂರ
ಕುಷ್ಟಗಿ. ; ಪ್ರತಿಯೊಬ್ಬ ನಾಗರಿಕರು ರಕ್ತದಾನ ಮಾಡಿ ಇನ್ನೂಬ್ಬರ ಜೀವ ಉಳಿಸುವ ಕಾರ್ಯಮಾಡಬೇಕು ಎಂದು ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು. ಪ್ರವಾದಿ ಮಹ್ಮದ್ ಪೈಗಂಬರ್ ಜನ್ಮ ದಿನದ ಪ್ರಯುಕ್ತ ಸಂಜೀವಿನಿ ರಕ್ತ ಬಂಡಾರ ಮತ್ತು ವಿಭಜನೆ ಸೆಂಟರ್ ಕೊಪ್ಪಳ ಹಾಗೂ ಹಜರತ್ ಹೈದರಲಿ ನೌಜವಾನ್ ಕಮೀಟಿ ಕುಷ್ಟಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಬೆಳಿಗ್ಗೆ ಇಲ್ಲಿನ ಬಾಲಕಿಯರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಗತ್ತಿನಲ್ಲಿ ಹಣ ಕೊಟ್ಟರೆ ಬೇಕಾದ್ದು ಸಿಗುತ್ತದೆ ಆದರೇ ರಕ್ತ ಮಾತ್ರ ಸಿಗುವುದ ಕಡಿಮೆ ಕಾರಣ ಸಾರ್ವಜನಿಕರು ಸಕಾಲದಲ್ಲಿ ರಕ್ತದಾನ ಮಾಡುವ ಮೂಲಕ ರೋಗಿಗಳ ಪ್ರಾಣವನ್ನು ಉಳಿಸುವಲ್ಲಿ ಮುಖ್ಯ ಪಾತ್ರವಹಿಸಬೇಕು. ದಾನಗಳಲ್ಲಿ ರಕ್ತದಾನ ಮಹಾದಾನವಾಗಿದೆ ಜೀವಿತದಲ್ಲಿ ಒಮ್ಮೆ ರಕ್ತದಾನ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಶಾಸಕ ಹಸನಸಾಬ ದೋಟಿಹಾಳ, ತಾಜುದ್ದೀನ್ ದಳಪತಿ, ಆರ್.ಟಿ ಸುಬಾನಿ, ಹಜರತ್ ಹೈದರಲಿ ನೌಜವಾನ್ ಕಮೀಟಿ ಅಧ್ಯಕ್ಷ ಮೌಲಾ ಗುಮಗೇರಿ, ಅಲ್ತಾಫ್ ಗೂಡದೂರ, ಕಾರ್ಯದರ್ಶಿ ಸದ್ದಾಂ ಗುಮಗೇರಿ, ಮೈಹೆಬೂಬ ಎಲಿಗಾರ, ಭಾಷಾ ಸವಡಿ, ಅಲ್ತಾಫ್ ಲಡ್ಡಿ, ಅಸ್ಪಕ್ ಇಟಗಿ, ಸುಲೇಮಾನ್ ಮುದಗಲ್, ಸದ್ದಾಂ ಕಾಯಗೆಡ್ಡಿ, ಮುರ್ತುಜಾ ಬಂಗಾಳಿ, ಸದ್ದಾಂ ಬೆಲ್ಲದ್, ಸಂಜೀವಿನಿ ರಕ್ತ ನಿಧಿ ಕೇಂದ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮೈಹೆಬೂಬ ಜಿಲಾನಿ, ವ್ಯವಸ್ಥಾಪಕ ಶಶಿಕುಮಾರ್ ಪಾಟೀಲ್, ಸಂದೇಶ ಕುಮಾರ್ ಮಳ್ಳಿಕೇರಿ, ಯಮನೂರ ಗುಮಗೇರಿ, ರಾಜು ಎಲಿಗಾರ, ಅನ್ವರ್ ದಡ್ಡಿ ಹಾಗೂ ಹಜರತ್ ಹೈದರಲಿ ನೌಜವಾನ್ ಕಮೀಟಿ ಸದಸ್ಯರು ಮತ್ತು ಮುಸ್ಲಿಂ ಸಮುದಾಯದ ಮುಖ್ಯಸ್ಥರು, ರಕ್ತದಾನಿಗಳು ಉಪಸ್ಥಿತರಿದ್ದರು. 100ಕ್ಕು ಹೆಚ್ಚು ಜನರು ಶಿಬಿರದಲ್ಲಿ ರಕ್ತದಾನ ಮಾಡಿದರು.
Comments are closed.