ಬರ ಪೀಡಿತ ಘೋಷಣೆಗೆ ಆಗ್ರಹಿಸಿ ಸೆ. 15, 16 ಜೆಡಿಎಸ್ ಪಾದಯಾತ್ರೆ

Get real time updates directly on you device, subscribe now.

ಕೊಪ್ಪಳ: ಕೊಪ್ಪಳವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಜೆಡಿಎಸ್ ಸೆಪ್ಟೆಂಬರ್ 15 ಮತ್ತು 16ರಂದು ‘ನ್ಯಾಯಕ್ಕಾಗಿ ನಡಿಗೆ’ ಹೆಸರಿನ
ಬೃಹತ್ ಪಾದಯಾತ್ರೆಯನ್ನು ಆಯೋಜಿಸಿದೆ ಎಂದು ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಪಾದಯಾತ್ರೆ ಸಪ್ಟೆಂಬರ್ 15 ರ ಮುಂಜಾನೆ 9 ಗಂಟೆಗೆ ಬೆಳಗಟ್ಟಿಯಲ್ಲಿ ಆರಂಭವಾಗುತ್ತದೆ. ಪಕ್ಷದ ಮುಖಂಡರು ರಘುನಾಥನಹಳ್ಳಿ, ಅಳವಂಡಿ, ಕಂಪ್ಲಿ, ಮೊರನಾಳ, ಬೆಟಗೇರಿ, ಬಿಸರಳ್ಳಿ ಮೂಲಕ ಸಾಗಿ ಸಿಂದೋಗಿಯಲ್ಲಿ ಠಿಕಾಣಿ ಹೂಡಲಿದ್ದಾರೆ. ಸೆಪ್ಟೆಂಬರ್ 16ರ ಮುಂಜಾನೆ ಪಾದಯಾತ್ರೆ ಸಿಂದೋಗಿಯಿಂದ ಆರಂಭವಾಗಿ ಕಾಟ್ರಳ್ಳಿ, ಕೋಳೂರು ಹಾಗೂ ದದೇಗಲ್ ಮೂಲಕ ಸಾಗಿ ಕೊಪ್ಪಳದ ಜಿಲ್ಲಾಡಳಿತ ಭವನದ ಆವರಣದಲ್ಲಿ ಅಂತ್ಯವಾಗಲಿದೆ. ಆನಂತರ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ,” ಎಂದು ಹೇಳಿದ್ದಾರೆ.

ಶಾಸಕರ ನಿಷ್ಕ್ರಿಯತೆ, ಅದಕ್ಷತೆ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷತೆಯಿಂದಾಗಿ ಕೊಪ್ಪಳಕ್ಕೆ ಅನ್ಯಾಯವಾಗಿದೆ. ಸುಮಾರು 70% ಜಮೀನುಗಳಲ್ಲಿ ಬಿತ್ತನೆಯಾಗಿಲ್ಲ. ಬಿತ್ತನೆಯಾಗಿರುವ ಜಮೀನುಗಳಲ್ಲಿ ಬೆಳೆಗಳು ಒಣಗಿವೆ. ಮಳೆ ಕೊರತೆಯಿಂದಾಗಿ ಕುಡಿಯುವ ನೀರಿಗೂ ಆಹಾಕಾರ ಎದ್ದಿದೆ. ಜಿಲ್ಲೆಯಿಂದ ಇಬ್ಬರು ಸಚಿವರಿದ್ದರೂ ಈ ವಾಸ್ತವ ಅವರಿಗೆ ಕಾಣಿಸದೆ ಇದ್ದದ್ದು ಅಕ್ಷಮ್ಯ. ನ್ಯಾಯಕ್ಕಾಗಿ ಆಗ್ರಹಿಸಿ ಈ ಪಾದಯಾತ್ರೆ ಜರುಗಲಿದೆ. ನ್ಯಾಯ ಸಮ್ಮತವಾಗಿ ಕೊಪ್ಪಳ ಬರ ಪೀಡಿತ ತಾಲೂಕುಗಳ ಪಟ್ಟಿಗೆ ಸೇರದೆ ಇದ್ದರೆ ಇನ್ನೂ ಉಗ್ರ ಹೋರಾಟಗಳನ್ನು ಜೆಡಿಎಸ್ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.

ನ್ಯಾಯಕ್ಕಾಗಿ ಆಯೋಜನೆಗೊಂಡ ಈ ಪಾದಯಾತ್ರೆಯಲ್ಲಿ ಸಾರ್ವಜನಿಕರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಅವರು ವಿನಂತಿಸಿದ್ದಾರೆ.

jds-padayatre-koppal-cv-chandrashekar

Get real time updates directly on you device, subscribe now.

Comments are closed.

error: Content is protected !!