ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿಯೂ ಪ್ರಗತಿ ಹೊಂದಬೇಕು- ಸಂಸದ ರಾಜಶೇಖರ ಹಿಟ್ನಾಳ
ಕೊಪ್ಪಳ : ಸಮಾಜದಲ್ಲಿ ಬಹಳಷ್ಟು ಶ್ರಮಪಡುವ ಶ್ರಮಜೀವಿಗಳ ಸಮಾಜ, ಸರಳತೆಯಿಂದ ಸಮಾನತೆಯಿಂದ ಸ್ವಾಭಿಮಾನದಿಂದ ಬದುಕುತ್ತಿರುವ ಸಮಾಜ ಎಂದರೆ ಮುಸ್ಲಿಂ ಸಮಾಜ. ಈ ಸಮುದಾಯ ಮುಖ್ಯವಾಹಿನಿಗೆ ಬರಬೇಕು ಎಲ್ಲ ಸವಲತ್ತುಗಳೂ ಸಿಗಬೇಕು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಬೆಳೆಯಬೇಕು ಎಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಐದುಸಾವಿರ ಕೋಟಿ ರೂಪಾಯಿಯನ್ನು ಬಜೆಟ್ ನಲ್ಲಿ ನೀಡಿದರು. ಶಾದಿ ಮಹಲ್ ನಂತಹ ಯೋಜನೆಗಳಿಗೆ ಅನುದಾನವನ್ನು ನಿಗದಿ ಮಾಡುವುದಷ್ಟೇ ಅಲ್ಲ ಆ ಅನುದಾನವನ್ನು ತಂದು ಇಂತಹ ಸುಂದರ ಕಟ್ಟಡಗಳನ್ನು ನಿರ್ಮಾಣ ಮಾಡುವುದಕ್ಕೆ ಸಮುದಾಯದವರು ನಿರಂತರ ಪ್ರಯತ್ನ ಪಡುವುದು ಶ್ರಮ ವಹಿಸುವುದು ಇದೆಯಲ್ಲ ಅದಕ್ಕೆ ಅಭಿನಂದಿಸುತ್ತೇನೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು
ಅವರು ಇಂದು ಓಜನಹಳ್ಳಿ ಕ್ರಾಸ್ನಲ್ಲಿ ಭಾಗ್ಯನಗರ ಜಾಮಿಯಾ ಮಜೀದ್ (ಸುನ್ನಿ) ಕಮಿಟಿಯ ವತಿಯಿಂದ ನಿರ್ಮಿಸಲಾಗಿರುವ ನೂತನ ಶಾದಿ ಮಹಲ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಇತೀಚಿನ ದಿನಗಳಲ್ಲಿ ಮುಸ್ಲಿಂ ಸಮುದಾಯದ ಅಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ತರಲಾಗುತ್ತಿದೆ. ಈ ಹಿಂದೆ ಮೈನಾರಿಟಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಇರುತ್ತಿರಲಿಲ್ಲ.ಮಕ್ಕಳನ್ನು ಶಾಲೆಗೆ ಸೇರಿಸಿ ಎಂದು ಮನವಿ ಮಾಡಿಕೊಳ್ಳಬೇಕಾಗುತ್ತಿತ್ತು. ಆದರೆ ಈಗ ಪರಸ್ಥಿತಿ ಬದಲಾಗಿದೆ. ಅಬ್ದುಲ್ ಕಲಾಂ, ಮುರಾರ್ಜಿ ಶಾಲೆಗಳು ಸೇರಿದಂತೆ ಎಲ್ಲ ಶಾಲೆಗಳಲ್ಲಿ ಮಕ್ಕಳು ಅಡ್ಮಿಷನ್ ಮಾಡಿಸುತ್ತಿದ್ದಾರೆ. ಇದು ಸಮಾಜ ಮುಖ್ಯವಾಹಿನಿಗೆ ಬರಲು ಸಹಾಯಕವಾಗುತ್ತದೆ. ಶಾದಿ ಮಹಲ್ ನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಲಾಗಿದೆ. ಇನ್ನೂ ಉಳಿದಂತಹ ಕಾಮಗಾರಿಗಳಿಗೆ ಅನುದಾನವನ್ನು ಕೊಡುತ್ತೇವೆ ಎಂದು ಹೇಳಿದರು.
![]()






ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವಚನ ನೀಡಿದ ಗವಿಮಠದ ಗವಿಸಿದ್ದೇಶ್ವರ ಸ್ವಾಮಿಗಳು ಸಮಾಜದಲ್ಲಿ ದೀಪ ಹಚ್ಚುವ ಕೆಲಸವನ್ನು ಮಾಡಬೇಕು ಬೆಂಕಿ ಹಚ್ಚುವ ಕೆಲಸವನ್ನು ಮಾಡಬಾರದು . ಮನುಷ್ಯನು ಧರ್ಮದ ಅರ್ಥವನ್ನು ತಿಳಿದುಕೊಳ್ಳಬೇಕು . ಧರ್ಮ ಏನು ಹೇಳುತ್ತೆ ಎನ್ನುವುದನ್ನು ತಿಳಿದುಕೊಳ್ಳಬೆಕು. ಇನ್ನೊಬ್ಬರ ಕಣ್ಣಲ್ಲಿ ಕಣ್ಣೀರು ಬರದಂತೆ ನೋಡಿಕೊಳ್ಳುವುದೇ ಧರ್ಮ. ಮಾವಿನ ಗಿಡವನ್ನು ಮಾವಿನ ಗಿಡವನ್ನಾಗಿ, ಬೇವಿನ ಗಿಡವನ್ನು ಬೇವಿನ ಗಿಡವನ್ನಾಗಿಯೇ ಹಾಗೂ ಜಾಲಿಗಿಡವನ್ನು ಜಾಲಿ ಗಿಡವನ್ನಾಗಿಯೇ ನೋಡುತ್ತೇವೆ. ಅದೇ ರೀತಿ ಮನುಷ್ಯನನ್ನು ಮನುಷ್ಯನನ್ನಾಗಿಯೇ ನೋಡುವುದೇ ನಿಜವಾದ ಧರ್ಮ . ಎಲ್ಲ ಧರ್ಮಗಳಲ್ಲಿ ಇರುವುದು ಮಾನವ ಪ್ರೀತಿ. ಕೈಯಲ್ಲಿ ಒಳ್ಳೆಯ ಕೆಲಸ ಇರಬೇಕು . ತಲೆಯಲ್ಲಿ ಚಲೋ ವಿಚಾರ ಇರಬೇಕು ಹೃದಂiÀiದಲ್ಲಿ ಪ್ರೀತಿ ಇರಬೇಕು. ಧರ್ಮ ಎಂದರೆ ಎಲ್ಲರನ್ನೂ ಪ್ರೀತಿಸುವುದು. ಇಂತಹ ಕಟ್ಟಡ ಕಟ್ಟಿ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಿದ್ದೀರಿ ಇದು ನಿಜವಾದ ಧರ್ಮ ಇಂತಹ ಸತ್ಕಾರ್ಯಗಳು ಊರಲ್ಲಿ ನಡೆಯುತ್ತಿರಲಿ ನಮ್ಮ ಊರು ಸದಾ ಶಾಂತಿಯ ತೋಟವಾಗಿರಲಿ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಭಾಗವಹಿಸಿದ್ದ ಮಾಜಿ ಶಾಸಕ ಬಸವರಾಜ್ ಹಿಟ್ನಾಳ ಮಾತನಾಡಿ ಸಾಕಷ್ಟು ಅನುದಾನವನ್ನು ತಂದು ಅಭಿವೃದ್ದಿ ಮಾಡಲಾಗುತ್ತಿದೆಯಾದರೂ ಇದು ಸಾಲದು ಯಾಕೆಂದರೆ ಸಮುದಾಯ ದೊಡ್ಡದಾಗಿದೆ. ಸಮುದಾಯವೂ ಸಹ ಶಿಕ್ಷಣಕ್ಕೆ ಅಧ್ಯತೆ ನೀಡಬೇಕು ಕೇವಲ ಸಮುದಾಯಭವನಗಳನ್ನು ನಿರ್ಮಿಸಿದರೆ ಮಾತ್ರ ಸಾಲದು . ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕು , ಶೈಕ್ಷಣಿಕವಾಗಿಯೂ ಅಭಿವೃದ್ದಿಯಾಗಬೇಕು ಅಂದಾಗಲೇ ಸಮಗ್ರ ಅಭಿವೃದ್ದಿ ಸಾಧ್ಯ. ಸಂಘಟನೆ , ಹೋರಾಟದಿಂದ ಮಾತ್ರ ಅಭಿವೃದ್ದಿ ಸಾಧ್ಯ. ಭಾಗ್ಯನಗರದ ಎಲ್ಲ ಸಮಾಜದವರ ಒಗ್ಗಟ್ಟು ಇದು ಎಲ್ಲರಿಗೂ ಮಾದರಿ ಎಂದು ಹೇಳಿದರು. ಹಿರಿಯ ವಕೀಲ ಹಾಗೂ ಮುಸ್ಲಿಂ ಸಮುದಾಯದ ಹಿರಿಯ ಮುಖಂಡರಾದ ಎಸ್ .ಅಸೀಪ್ ಅಲಿಯವರು ಮಾತನಾಡಿ ಶೈಕ್ಷಣಿಕ ಸಂಸ್ಥೇಗಳನ್ನು ಸ್ಥಾಪಿಸುವ ಮೂಲಕ ಎಲ್ಲ ಮಕ್ಕಳಿಗೆ ಶಿಕ್ಷಣ ದೊರೆಯುವಂತೆ ಮಾಡಬೇಕು. ಎಲ್ಲ ಭಿನ್ನಮತಗಳನ್ನು ಮರೆತು ಒಂದಾಗಿ ಹೋದಾಗ ಅಭಿವೃದ್ದಿ ಸಾಧ್ಯ. ಈ ವಿಚಾರದಲ್ಲಿ ಭಾಗ್ಯನಗರ ಎಲ್ಲರಿಗೂ ಮಾದರಿ ಎಂದು ಹೇಳಿದರು. ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಉದ್ಯಮಿಗಳಾದ ಶ್ರೀನಿವಾಸ ಗುಪ್ತಾ, ಹಿರಿಯ ವಕೀಲರು ಭಾಗ್ಯನಗರದ ಹಿರಿಯ ಮುಖಂಡರಾದ ರಾಘವೇಂದ್ರ ಪಾನಘಂಟಿ, ನಗರಸಭೆಯ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್, ಕಾಟನ್ ಪಾಷಾ, ಕೃಷ್ಣಾ ಇಟ್ಟಂಗಿ ಮಾತನಾಡಿದರು. ಭಾಗ್ಯನಗರ ಶಂಕರಾಚಾರ್ಯ ಮಠದ ಶ್ರೀಗಳು ಆಗÀಮಿಸಿದ್ದರು.
ಇದೇ ಸಂದರ್ಭದಲ್ಲಿ ಶಾದಿಮಹಲ್ನ ಉಳಿದ ಕಾಮಗಾರಿಗಾಗಿ ಅನುದಾನವನ್ನು ನೀಡುವಂತೆ ಸಂಸದರಿಗೆ ಮನವಿ ಸಲ್ಲಿಸಲಾಯಿತು. ಸ್ವಾಗತ ಹಾಗೂ ನಿರೂಪಣೆಯನ್ನು ಚನ್ನಪ್ಪ ತಟ್ಟಿ ನೆರವೇರಿಸಿದರು. ಪ್ರಾಸ್ತಾವಿಕವಾಗಿ ಹೊನ್ನೂರಸಾಬ ಬೈರಾಪುರ ಮಾತನಾಡಿದರು . ಅಧ್ಯಕ್ಷತೆಯನ್ನು ವಹಿಸಿದ್ದ ಭಾಗ್ಯನಗರ ಜಾಮಿಯ ಮಜೀದ ಕಮಿಟಿಯ ಅಧ್ಯಕ್ಷರಾದ ಇಬ್ರಾಹಿಂಸಾಬ ಬಿಸರಳ್ಳಿ ಮಾತನಾಡಿ ಶಾದಿಮಹಲ್ ಕಟ್ಟಡಕ್ಕೆ ಅಡುಗೆಕೋಣೆ, ಡೈನಿಂಗ್ ಹಾಲ್ ಹಾಗೂ ಶೌಚಾಲಯ ಸೇರಿದಂತೆ ಇತರೆ ಕಾಮಗಾರಿಗಳು ಬಾಕಿ ಇದ್ದು ಅವುಗಳಿಗೆ ಅನುದಾನವನ್ನು ನೀಡಬೇಕು ಎಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಶಾದಿಮಹಲ್ ನಿರ್ಮಾಣಕ್ಕೆ ಕಾರಣಿಕರ್ತರಾದ ಎಲ್ಲರಿಗೂ ಆತ್ಮೀಯವಾಗಿ ಸನ್ಮಾನಿಸಲಾಯಿತು. ಶ್ರೀನಿವಾಸ ಗುಪ್ತಾರವರು ಐದು ಲಕ್ಷ ರೂಪಾಯಿಗಳ ದೇಣಿಗೆ ನೀಡಿದರೆ , ಕೆ.ಎಂ.ಸಯ್ಯದ್ ರವರು ಕಟ್ಟಡಕ್ಕೆ ಬೇಕಾಗುವ ಇಟ್ಟಂಗಿಗಳನ್ನು ನೀಡುವುದಾಗಿ ಹೇಳಿದ್ದಾರೆ. ಅವರಿಗೆ ಸಮಿತಿಯಿಂದ ಧನ್ಯವಾದಗಳನ್ನು ಅರ್ಪಿಸಲಾಯಿತು.


ಕರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ರಮೇಶ ಹ್ಯಾಟಿ, ಮಾಜಿ ಅಧ್ಯಕ್ಷ ತುಕಾರಮಪ್ಪ ಗಡಾದ, ಪಟ್ಟಣ ಪಂಚಾಯತ್ ಸದಸ್ಯರಾದ ಹನುಮಂತಪ್ಪ, ಶಿವರಾಂ ಮ್ಯಾಗಳಮನಿ, ಮೋಹನ್ ಅರಕಲ್, ಪರಶುರಾಮ ನಾಯಕ್, ಗವಿಸಿದ್ದಪ್ಪ ಮಗಿಮಾವಿನಹಳ್ಳಿ, ಶಿಲ್ಪಾ , ಪರಶುರಾಮ ಪವಾರ, ಮಾನ್ವಿ ಪಾಷಾ, ಸಲಿಂ ಅಳವಂಡಿ, ಮೈಲೈಕ್ ಜಿಲಾನ ಕಿಲ್ಲೇದಾರ್, ಫಕ್ರುದ್ದೀನ್ ನದಾಪ್, ಉಪಾಧ್ಯಕ್ಷ ಮೌಲಾಹುಸೇನ ಹಣಗಿ, ಹಾಜಿ ಕುತ್ಬುದ್ದಿನ್ , ಜಾಫರಸಾಬ, ರಾಜು ಕವಲೂರು, ರಶೀದಸಾಬ ಆದೋನಿ, ಮರ್ದಾನಸಾಬ ಹಿರೇಮಸೂತಿ, ಮೆಹಬೂಬ ಬಳಿಗಾರ, ಕಬೀರಸಾಬ, ಶರೀಪಸಾಬ ಪಿಂಜಾರ್, ಬಾಬಾ ಪಟೇಲ್ , ಅನ್ವರಸಾಬ ಬಿಸರಳ್ಳಿ, ಚಾಂದಪಾಷಾ ಕಿಲ್ಲೇದಾರ, ಮೆಹಬೂಬ ನವನಗರ, ಮೋದಿನಸಾಬ, ಖಾದರಸಾಬ ನೂರಬಾಷಾ, ಅಮೀನಸಾಬ sಸೂಡಿ ಶಾಬುದ್ದಿನಸಾಬ, ಪೀರಾಹುಸೇನ ಹೊಸಳ್ಳಿ, ಮುನೀರ ಸಿದ್ದೀಖಿ, ಅಜೀಮ್ ಅತ್ತಾರ, ಖತೀಬ್ ಬಾಷು ಸೇರಿದಂತೆ ಭಾಗ್ಯನಗರ, ನವನಗರ ಹಾಗೂ ಕೊಪ್ಪಳದ ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿದ್ದರು.
Comments are closed.