ಶಾಸಕ ಜನಾರ್ಧನ ರೆಡ್ಡಿ ವಿರುದ್ದ ಮುಂದುವರೆದ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ

Get real time updates directly on you device, subscribe now.

ಹೌದು ಅಣ್ತಾಮ್ಮಾ ಜನಾರ್ದನ ರೆಡ್ಡಿ, ನಾನು ಹೇಳಿದ್ದೂ ಅದನ್ನೇ ಅಲ್ಲವೇ!

ಕೊಪ್ಪಳ : ಅಣ್ತಮ್ಮ ಎನ್ನುತ್ತ ಶಾಸಕ ಜನಾರ್ಧನ ರೆಡ್ಡಿ ವಿರುದ್ದ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ಮುಂದುವರೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಪೋಸ್ಟ್ ಮಾಡಿರುವ ಅವರು
ಹೌದು ಅಣ್ತಾಮ್ಮಾ ಜನಾರ್ದನ ರೆಡ್ಡಿ, ನಾನು ಹೇಳಿದ್ದೂ ಅದನ್ನೇ ಅಲ್ಲವೇ!

ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ನೀನು ಎಷ್ಟು ಬಾರಿ ನನ್ನನ್ನು ಸಂಪರ್ಕಿಸಿದ್ದೆ? ನಮ್ಮ ಅಭ್ಯರ್ಥಿಗೆ ಬೆಂಬಲ ನೀಡುತ್ತೇನೆ ಎಂದು ಎಷ್ಟು ಬಾರಿ ಗೋಗರೆದಿದ್ದೆ? ಎಲ್ಲಿ, ಯಾವ ರೀತಿಯಲ್ಲಿ ಸಹಾಯ ಪಡೆದೆ ಎಂಬುದನ್ನೂ ನಾನೇ ಹೇಳಿದ್ದೇನೆ.

ಇದಕ್ಕೆ ಉತ್ತರಿಸಲಾಗದೆ ‘ಇಂಗು ತಿಂದ ಮಂಗ’ ರೀತಿ ಆಡುತ್ತಿದ್ದೀಯ. ಹೀಗಾಗಿ ‘ಇದ್ದದ್ದು ಇದ್ದಂಗೆ ಹೇಳಿದರೆ ಎದ್ದು ಬದ್ದು ಎದೆಗೆ ಒದ್ದಂತೆ’ ಎಂಬ ಗಾದೆ ನಿನಗೆ ಸರಿ ಹೊಂದುವAತೆ ಬೇರೆ ಯಾರಿಗೂ ಹೊಂದಾಣಿಕೆ ಆಗುವುದಿಲ್ಲ.
ಉಂಡ ಮನೆಗೆ ಎರಡು ಬಗೆಯುವ ದ್ರೋಹಿ ನೀನು. ‘ಕಳ್ಳನಿಗೆ ತನ್ನ ನೆರಳೇ ಭಯ’ ಎಂಬAತೆ ನಿನ್ನ ಕರಾಳ ಕೆಲಸಗಳೇ ಇಂದು ನಿನ್ನ ಕಾಡುತ್ತಿವೆ.
ಸತ್ಯ ಎದುರಿಸಲಾಗದೆ ಸತ್ಯ ನುಡಿದವರ ಮೇಲೆ ಹಗೆ ಸಾಧನೆಗೆಹೊರಟಿದ್ದೀಯ.
‘ತಾನು ಮಾಡಿದ ಕರ್ಮದ ಫಲವನ್ನು ತಾನು ಅನುಭವಿಸಲೇ ಬೇಕು’ ಇದು ಕರ್ಮ ಸಿದ್ಧಾಂತದ ಸಾರ್ವಕಾಲೀಕ ಸತ್ಯ.
‘ಬಿತ್ತಿದಂತೆ ಬೆಳೆ’ ಎಂಬAತೆ ನೀನು ಬಿತ್ತಿದ್ದರ ಫಲವೇ ಇಷ್ಟೂ ವರ್ಷ ಜೈಲಲ್ಲಿ ಉಂಡಿದ್ದು.
ಇನ್ನಾದರೂ ಸತ್ಯವ ನುಡಿಯಲು ಕಲಿ. ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ನೆಲೆಯಿಲ್ಲ ಎಂಬುದ ಅರಿ.

ಬೇರೆಯವರ ಮುಖದಲ್ಲಿ ಏನಿದೆ ಅಣ್ತಮ್ಮಾ, ನಮ್ಮ ಮುಖದ ಮೇಲಿನ ಗಣಿ ಅಕ್ರಮದ ಧೂಳು ಒರೆಸಿಕೊಂಡರೆ ಸಾಕಾಗಿದೆ ಅಲ್ವಾ? ಎಂದು ಹೇಳಿದ್ದಾರೆ

 

https://x.com/sstangadagi/status/2098006080106504597?s=20

Get real time updates directly on you device, subscribe now.

Comments are closed.

error: Content is protected !!