ಸರಕಾರಿ ನೌಕರರ ಕಷ್ಟ ಸುಖಗಳೊಂದಿಗೆ ಸ್ಪಂದಿಸಿ ಜೊತೆಗೂಡಿ ಕೆಲಸ ಮಾಡುತ್ತೇನೆ-ದೊಡ್ಡನಗೌಡ ಎಚ್ ಪಾಟೀಲ್

Get real time updates directly on you device, subscribe now.

ಕುಷ್ಟಗಿ. ; ವಿಧಾನಸಭಾ ಚುನಾವಣೆಯಲ್ಲಿ ನನಗೆ ಅತೀ ಹೆಚ್ಚು ಮತವನ್ನು ನೀಡಿ 3ನೇ ಬಾರಿಗೆ ಶಾಸಕರಾಗಿ ಅಧಿಕಾರ ಸ್ವೀಕರಿಸಿ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿದ ನಿಮ್ಮೇಲರಿಗೊ ಅನಂತ ಅನಂತ ಧನ್ಯವಾದಗಳು ಎಂದು ಶಾಸಕ ದೊಡ್ಡನಗೌಡ ಎಚ್ ಪಾಟೀಲ್ ಧನ್ಯವಾದ ಸಮರ್ಪಿಸಿದರು.

ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಘಟಕದ ವತಿಯಿಂದ ಗುರುವಾರ ಮಧ್ಯಾಹ್ನ ಇಲ್ಲಿನ ಬಸವ ಭವನದಲ್ಲಿ ಏರ್ಪಡಿಸಿದ್ದ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭ ಹಾಗೂ ಕಾರ್ಯಕಾರಿ ಸಮಿತಿಯ ನೂತನ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಸಕ್ತ ದಿನಗಳಲ್ಲಿ ಕೆಲವು ಜನರು ಸರಕಾರಿ ನೌಕರರಿಗೆ ಕಿರುಕುಳ ನೀಡುವ ವಿಷಯ ನನ್ನ ಗಮನಕ್ಕೆ ಬಂದಿದೆ. ತಾಲೂಕಿನ ಪ್ರತಿಯೊಬ್ಬ ಸರಕಾರಿ ನೌಕರರ ಕಷ್ಟ ಸುಖಗಳೊಂದಿಗೆ ಸ್ಪಂದಿಸಿ ಜೊತೆಗೂಡಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ಸರಕಾರಿ ನೌಕರರು ಹಾಗೂ ಜನಪ್ರತಿನಿಧಿಗಳು ಒಂದು ಗಾಡಿಯ ಚಕ್ರದ ತರಹ ಕೆಲಸ ಮಾಡಬೇಕು ಸಾರ್ವಜನಿಕರ ಅಗತ್ಯ ಸೌಲಭ್ಯಗಳನ್ನು ನೀಡುವ ಮೂಲಕ ಜನಸ್ನೇಹಿ ನೌಕರರಾಗಬೇಕು ಸೇವೆ ಸಲ್ಲಿಸಬೇಕು ಎಂದು ಕಿವಿಮಾತು ಹೇಳಿದರು. ಸರಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಅಧ್ಯಕ್ಷ ನಾಗರಾಜ ಜುಮ್ಮನ್ನವರ ಮಾತನಾಡಿ ಹುದ್ದೆಗಳು ಶಾಶ್ವತವಲ್ಲ ನಾವು ಮಾಡುವ ಕಾರ್ಯ ತುಂಬಾ ಮಹತ್ವವಾಗಿದೆ ನಿಷ್ಠೆಯಿಂದ ಕೆಲಸ ಮಾಡುವ ಅಗತ್ಯವಿದೆ. ಸರಕಾರಿ ನೌಕರರು ಸುಮಾರು 12 ತಾಸು ಕೆಲಸ ಮಾಡುತ್ತಿದ್ದಾರೆ. ಅ.1 ರಂದು ಕೊಪ್ಪಳ ಜಿಲ್ಲೆಯಲ್ಲಿ ಶೇಕಡಾ 98 ರಷ್ಟು ಅಂಕ ಪಡೆದ ಸರಕಾರಿ ನೌಕರರ ಮಕ್ಕಳಿಗೆ ಗೌರವ ಸನ್ಮಾನ ಹಾಗೂ ಸೈಬರ್ ಕ್ರೈಂ ಅಪರಾಧ ಭದ್ರತೆ ಸೈಬರ್ ಹಾಸ್ಯ ಸಂಜೆ, ಸಾಮಾನ್ಯ ಸಭೆ ಏರ್ಪಡಿಸಲಾಗಿದೆ ಕಾರಣ ಸಂಘದ ಸದಸ್ಯರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಾಜಿ ಬಳಿಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಗುರಪ್ಪ ಕುರಿ, ಶ್ರೀನಿವಾಸ ನಾಯಕ, ನೀಲಪ್ಪ ಹೊಸಗೌಡರ, ಅಹ್ಮದ್ ಹುಸೇನ್, ಶಿವಪ್ಪ ಜೋಗಿ, ಸೋಮಲಿಂಗಪ್ಪ ಗುರಿಕಾರ, ಅಮರೇಗೌಡ ನಾಗೂರ, ಅಡಿವೆಪ್ಪ ಕೊನಸಾಗರ,ಮಲ್ಲಪ್ಪ ಕುದರಿ, ರಾಚಪ್ಪ ಯರಗಲ್, ಅಡಿವೆಪ್ಪ ಕೋನಸಾಗರ, ಚನ್ನಬಸಮ್ಮ, ವಿದ್ಯಾ ಕಂಪಾಪೂರಮಠ, ಪ್ರೇಮಾ ಹಿರೇಮನಿ,  ಕೊರಡಕೇರಿ ಶಾಲೆ ಮುಖ್ಯೋಪಾಧ್ಯಾಯ ಸಿದ್ದಯ್ಯ ಗುರವಿನ ಪ್ರಾರ್ಥಿಸಿದರು. ವಿರುಪಾಕ್ಷಪ್ಪ ಅಂಗಡಿ ಸ್ವಾಗತಿಸಿದರು. ಜೀವನಸಾಬ ಬಿನ್ನಾಳ ನಿರೂಪಿಸಿದರು.

Get real time updates directly on you device, subscribe now.

Comments are closed.

error: Content is protected !!