ಕೆ.ಎಂ.ಸೈಯದ್ ಎಂ ಎಲ್ ಸಿ ಆಗಲು ದೇವರ ಮೊರೆ ಹೋದ ಅಭಿಮಾನಿಗಳು

ಕೊಪ್ಪಳ,ಆ.28: ತಾಲೂಕಿನ
ಬಸಾಪುರ ಗ್ರಾಮದ ಉಸ್ಮಾನ್ ಹಾಗೂ ಇಬ್ರಾಹಿಂ ಎನ್ನುವ ಯುವಕರು ಕೊಪ್ಪಳದ ಕೆಪಿಸಿಸಿ ಸಂಯೋಜಕ ಕಾಂಗ್ರೆಸ್ ಮುಖಂಡ ಸೈಯದ್ ವಿಧಾನ ಪರಿಷತ್ ಸದಸ್ಯರಾಗಲೆಂದು ಶುಕ್ರವಾರ ಹಾಸನ ಜಿಲ್ಲೆಯ ಜಾವಗಲ್ ನಲ್ಲಿ ಇರುವ ಬಾಬಾ ಖಲಂದರ್ ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸುಮಾರು 350 ಕೀಮೀ ದೂರದಲ್ಲಿ ಇರುವ ದರ್ಗಾ ಭೇಟಿ ನೀಡುವ ಮೂಲಕ ದರ್ಶನ ಪಡೆದು ಕೆ.ಎಂ ಸೈಯದ್ ಅವರಿಗಾಗಿ ಪ್ರಾರ್ಥಿಸಿದ್ದಾರೆ.