ಕೊಪ್ಪಳ ನಗರ ಹಾಗೂ ಭಾಗ್ಯನಗರ ಪಟ್ಟಣದ ಅಭಿವೃದ್ಧಿಗೆ ವೇಗ –ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಸೂಚನೆ

0

Get real time updates directly on you device, subscribe now.

ಸಾರ್ವಜನಿಕರಿಗಾಗಿ ಹೆಲ್ಪ್ ಲೈನ್ ಸ್ಥಾಪಿಸಲು ಸೂಚನೆ.

ಅಧಿಕಾರಿಗಳ ಸಭೆಯಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಸೂಚನೆ.

ಕೊಪ್ಪಳ : ಕೊಪ್ಪಳ ಕೊಪ್ಪಳ ನಗರ ಹಾಗೂ ಭಾಗ್ಯನಗರದ ಸಮಗ್ರ ಅಭಿವೃದ್ಧಿ, ಮೂಲಭೂತ ಸೌಕರ್ಯಗಳ ಸುಧಾರಣೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಕೊಪ್ಪಳ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಇಂದು ಕೊಪ್ಪಳ ನಗರಸಭೆಯಲ್ಲಿ ಕೊಪ್ಪಳ ನಗರಸಭೆ ಹಾಗೂ ಭಾಗ್ಯನಗರ ಪಟ್ಟಣ ಪಂಚಾಯತ್ ಅಧಿಕಾರಿಗಳು ಮತ್ತು ಸದಸ್ಯರೊಂದಿಗೆ ಸಭೆ ನಡೆಸಿದರು.

ಕೆಕೆಆರ್ ಡಿಬಿ ಯೋಜನೆಡಿಯಲ್ಲಿ ಕೊಪ್ಪಳದ ನಗರದ 31 ವಾರ್ಡ್

ಗಳಿಗೆ ತಲಾ 20-25 ಲಕ್ಷ ಹಾಗೂ ಭಾಗ್ಯನಗರದ 19 ವಾರ್ಡ್ ಗಳಿಗೆ ತಲಾ 20-25 ಲಕ್ಷ ಅನುದಾನ ನೀಡಿದ್ದು ಸೆಪ್ಟೆಂಬರ್ ತಿಂಗಳಿನ ಮೊದಲನೇ ವಾರದಲ್ಲಿ ಪ್ರತಿ ವಾರ್ಡ್ ಗೂ ಕೂಡ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸುತ್ತೇನೆ ಎಂದರು.

138 ಕೋಟಿ ವೆಚ್ಚದಲ್ಲಿ ಕೊಪ್ಪಳ ಹಾಗೂ ಭಾಗ್ಯನಗರದ ಸುಮಾರು 18 ಸಾವಿರ ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಮತ್ತೆಕಾಮಗಾರಿ 80% ಮುಗಿದಿದ್ದು ಇನ್ನುಳಿದ ಕಾಮಗಾರಿಯನ್ನು ಕೂಡ ಶೀಘ್ರದಲ್ಲಿ ಮುಗಿಸಿ ಇನ್ನೂ ಎರಡೂವರೆ ತಿಂಗಳಿನಲ್ಲಿ ಎರಡು ನಗರಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು.

ಕೊಪ್ಪಳ ನಗರದ ಎರಡು ರಾಜ ಕಾಲುವೆ ಅಭಿವೃದ್ಧಿ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ರಾಜ ಕಾಲುವೆ ಮೇಲೆ ಇರುವ ಎಲ್ಲಾ ಅತಿಕ್ರಮಣವನ್ನು ತೆರವುಗೊಳಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ಆರ್ಥಿಕ ವರ್ಷದಲ್ಲಿ ಒಂದು ರಾಜ ಕಾಲುವೆ ಹಾಗೂ ಮುಂದಿನ ವರ್ಷದಲ್ಲಿ ಇನ್ನೊಂದು ರಾಜ ಕಾಲುವೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದರು.

ನಗರಸಭೆ ವತಿಯಿಂದ ನೂತನವಾಗಿ ಒಂದು ಹೆಲ್ಪ್ ಲೈನ್ ತೆರೆಯಲು ಸೂಚನೆ ನೀಡಿದ್ದೇನೆ. ಇದರಿಂದ ಸಾರ್ವಜನಿಕರಿಗೆ ಏನೇ ಸಮಸ್ಯೆ ಇದ್ದಲ್ಲಿ ಹೆಲ್ಪ್ ಲೈನ್ ಗೆ ಕರೆ ಮಾಡಿದರೇ ಅಧಿಕಾರಿಗಳು ತತಕ್ಷಣದಲ್ಲಿ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೊಪ್ಪಳ ನಗರದ 31 ವಾರ್ಡ್ ಗಳಲ್ಲಿ ಬರುವ ಎಲ್ಲಾ ಚರಂಡಿಗಳನ್ನು 15 ದಿವಸದೊಳಗೆ ಕ್ಲಿನ್ ಮಾಡಲು ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಈ ಸಂಧರ್ಭದಲ್ಲಿ ಯೋಜನಾ ನಿರ್ದೇಶಕರಾದ ಮಂಜುನಾಥ್ ಗುಂಡೂರ್, ಭಾಗ್ಯನಗರ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಮೇಶ ಹ್ಯಾಟಿ, ಉಪಾಧ್ಯಕ್ಷರಾದ ಹೊನ್ನೂರ್ ಸಾಬ್,ಮಾಜಿ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್,ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ,ಕಾಟನ್ ಪಾಷಾ, ರಾಜಶೇಖರ್ ಆಡೂರ್,ಸಿದ್ದು ಮ್ಯಾಗೇರಿ ಪಟ್ಟಣ ಪಂಚಾಯತ್ ಅಧಿಕಾರಿ ಸುರೇಶ್ ಬಬಲಾದಿ ಸೇರಿದಂತೆ ನಗರಸಭೆ ಹಾಗೂ ಪಟ್ಟಣ ಪಂಚಾಯತ್ ಅಧಿಕಾರಿಗಳು ಉಪಸ್ಥಿತರಿದ್ದರು.

ಫೋಟೋ ಕ್ಯಾಪ್ಶನ್ : ಕೊಪ್ಪಳ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ನಗರಸಭೆ ಕಛೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಿರುವುದು.

Get real time updates directly on you device, subscribe now.

Leave A Reply

Your email address will not be published.

error: Content is protected !!