ಉನ್ನತ ಶಿಕ್ಷಣ ಸಚಿವರನ್ನು ಭೇಟಿಯಾದ ಎಐಡಿಎಸ್‌ಒ ರಾಜ್ಯ ನಿಯೋಗ
“.
ಬೆಂಗಳೂರು : ರಾಜ್ಯದ ಉನ್ನತ ಶಿಕ್ಷಣದ ಹಲವು ಸಮಸ್ಯೆಗಳು ಹಾಗೂ ಸವಾಲುಗಳ ಕುರಿತು ಇಂದು ಲ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ಅವರನ್ನು ಎಐಡಿಎಸ್‌ಒ ರಾಜ್ಯ ನಿಯೋಗವು ಭೇಟಿ ಮಾಡಿತು. ಎನ್.ಇ.ಪಿ.- 20 ಇಂದ ಉಂಟಾಗಿರುವ ಗೊಂದಲಗಳು, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ, ಯು.ವಿ.ಸಿ.ಇ. ಮುಂತಾದ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಎದುರಿಸುತ್ತಿರುವ ಸವಾಲುಗಳು, ಹಾಸ್ಟೆಲ್ ಸಮಸ್ಯೆಗಳು, ವಿದ್ಯಾರ್ಥಿವೇತನ ವಿಳಂಬ, ಮುಂತಾದ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಿ, ಅಭಿಪ್ರಾಯಗಳನ್ನು ಅವರ ಮುಂದೆ ಮಂಡಿಸಲಾಯಿತು.
ಈ ಸಂದರ್ಭದಲ್ಲಿ ಎಐಡಿಎಸ್‌ಒ ರಾಜ್ಯ ಖಜಾಂಚಿ ಅಭಯಾ ದಿವಾಕರ್ ಹಾಗೂ ರಾಜ್ಯ ಸೆಕ್ರೆಟರಿಯಟ್ ಸದಸ್ಯರಾದ ಅಪೂರ್ವ ನಿಯೋಗವನ್ನು ಪ್ರತಿನಿಧಿಸಿದ್ದರು.

Comments are closed.