ಪದ್ಮಶ್ರೀ ಪುರಸ್ಕೃತೆ ಭೀಮವ್ವ ಸಿಳ್ಳೆಕ್ಯಾತರ ಅವರಿಗೆ ಜಿಲ್ಲಾಧಿಕಾರಿಗಳಿಂದ ಗಣತಿ ನಮೂನೆ ವಿತರಣೆ

0

Get real time updates directly on you device, subscribe now.

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ
ಕೊಪ್ಪಳ ಜೂನ್ 30 : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯ (ಎಸ್.ಐ.ಆರ್) ಮನೆಮನೆ ಭೇಟಿ ಕಾರ್ಯವು ಜೂನ್ 30 ರಿಂದ ಆರಂಭವಾಯಿತು.
ಈ ಮನೆಮನೆ ಭೇಟಿ ಕಾರ್ಯವು ಜೂನ್ 30 ರಿಂದ ಆರಂಭವಾಗಿ ಜುಲೈ 29ರವರೆಗೆ ನಡೆಯಲಿದೆ.
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಹಿನ್ನೆಲೆಯಲ್ಲಿ, ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳಾದ ಡಾ.ಸುರೇಶ್ ಇಟ್ನಾಳ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ ಅವರು ಜೂನ್ 30ರಂದು ಗ್ರಾಮೀಣ ಪ್ರದೇಶದಲ್ಲಿ ಪ್ರವಾಸ ಕೈಗೊಂಡು ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮಕ್ಕೆ ತೆರಳಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಕೊಪ್ಪಳ ಜಿಲ್ಲೆಯ ತೊಗಲು ಗೊಂಬೆ ಕಲಾವಿದೆ ಭೀಮವ್ವ ಸಿಳ್ಳೆಕ್ಯಾತರ ಅವರ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಗಣತಿ ನಮೂನೆ (Enumeration Form) ವಿತರಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ತಹಶೀಲ್ದಾರ್ ಬಸವರಾಜ ತನ್ನಳ್ಳಿ, ಬೂತ್ ಮಟ್ಟದ ಅಧಿಕಾರಿ (ಬಿ.ಎಲ್.ಒ) ಲಕ್ಷ್ಮವ್ವ ಸೇರಿದಂತೆ ಜಿಲ್ಲಾ ಚುನಾವಣಾ ಶಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Special Voters’ List Revision

Koppal June 30: As per the directions of the Election Commission of India, the house-to-house visitation for the Special Voters’ List Revision (SIR) began from June 30.
This house-to-house visitation will begin from June 30 and will continue till July 29.
In the wake of the special voter list revision, District Election Officer Dr. Suresh Itnal and Zilla Panchayat Chief Executive Officer Varnit Negi, who are also the District Election Officers, toured the rural areas on June 30 and went to Moranal village in Koppal taluk. They visited the residence of Padma Shri awardee and Koppal district’s togalu doll artist Bhimavva Sillekyatara and distributed the Enumeration Form to her.
Koppal Tahsildar Basavaraja Thannalli, Booth Level Officer (BLO) Lakshmava, along with officers and staff of the District Election Branch were present on the occasion.

 

Get real time updates directly on you device, subscribe now.

Leave A Reply

Your email address will not be published.

error: Content is protected !!