ವಿಜ್ಞಾನ & ತಂತ್ರಜ್ಞಾನ ಅಕಾಡೆಮಿ: ಜುಲೈ 16 ರಿಂದ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ
: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು “ಪ್ರಕೃತಿಯ ಔಷಧಾಲಯವನ್ನು ಅನ್ವೇಷಿಸುವುದು: ಆರೋಗ್ಯ, ಜೀವನೋಪಾಯ, ಜೈವಿಕ ಆರ್ಥಿಕತೆ ಮತ್ತು ಸಂರಕ್ಷಣೆಗಾಗಿ ಔಷಧೀಯ ಮತ್ತು ಸುಗಂಧಭರಿತ ಸಸ್ಯಗಳ ಸಾಮರ್ಥ್ಯಗಳು (Exploring Nature’s Pharmacy: Potentials of Medicinal and Aromatic Plants for Health, Livelihoods, Bio-economy and Conservation)” ವಿಷಯದ ಮೇಲೆ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಜುಲೈ 16 ರಿಂದ 18ರ ವರೆಗೆ ಅಕಾಡೆಮಿಯ ಕಛೇರಿಯಲ್ಲಿ ಆಯೋಜಿಸಲಾಗುತ್ತಿದೆ.