ಚಾಕು ಇರಿದು ಯುವಕನ ಕೊಲೆ
ಕುಷ್ಟಗಿ.; ವ್ಯಕ್ತಿಯೂರ್ವನ ಕುತ್ತಿಗೆ ಚಾಕು ಇರಿದು ಬರ್ಬರವಾಗಿ ಹತ್ಯೆ ಗೈದು ಕೊಲೆ ಮಾಡಿದ ಘಟನೆ ರವಿವಾರ ಮಧ್ಯರಾತ್ರಿ ತಾಲೂಕಿನ ಜಾಲಿಹಾಳ ಗ್ರಾಮದ ಸೀಮಾ ಬಳಿ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಹೇಳಿದರು.
ಮೃತಪಟ್ಟ ಯುವಕನನ್ನು ಜಾಲಿಹಾಳ ಗ್ರಾಮದ ಭಾಗ್ಯರಾಜ ತಂದೆ ಹನುಮಪ್ಪ ಕ್ಯಾದಿಗುಂಪಿ (30) ಎಂದು ಗುರುತಿಸಲಾಗಿದೆ.
ಈ ಘಟನೆ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕನ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.
ಮೃತನ ದೇಹವನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಿದರು.
ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಗಂಗಾವತಿ ವಿಭಾಗದ ಡಿ.ವಾಯ್.ಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್, ಸಿ.ಪಿ.ಐ ಯಶವಂತ ಬಿಸನಳ್ಳಿ, ಪಿ.ಎಸ್.ಐ ಮುದ್ದು ರಂಗಸ್ವಾಮಿ, ಬೆರಳಚ್ಚು ತಜ್ಞರು, ಸ್ವಾನದಳ ತಂಡದ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Comments are closed.