ದೇವದಾಸಿ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈ ಜೋಡಿಸಿ: ವಾಸಂತಿ ಉಪ್ಪಾರ ಕರೆ

Get real time updates directly on you device, subscribe now.

 : ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಅನಿಷ್ಟ ಪದ್ಧತಿಯಾದ ದೇವದಾಸಿ ಪದ್ಧತಿಯ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಪ್ರದಾನ ವ್ಯವಸ್ಥಾಪಕರಾದ ವಾಸಂತಿ ಉಪ್ಪಾರ ಅವರು ಕರೆ ನೀಡಿದ್ದಾರೆ.
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಮಾಜಿ ದೇವದಾಸಿ ಮಹಿಳೆಯರೊಂದಿಗೆ ಇತ್ತೀಚೆಗೆ (ಜೂ. 8ರಂದು) ಹಮ್ಮಿಕೊಂಡಿದ್ದ ಸಂವಾದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇವದಾಸಿ ಬಿಡುವ ಪದ್ಧತಿಯು ಅತ್ಯಂತ ಕೆಟ್ಟ ಸಾಮಾಜಿಕ ಪಿಡುಗು ಆಗಿದ್ದು, ಇದು ಮುಗ್ಧ ಮಹಿಳೆಯರ ಬದುಕನ್ನು ಕತ್ತಲೆಗೆ ನೂಕುತ್ತದೆ. ಈ ಅನಿಷ್ಠ ಪದ್ಧತಿಯನ್ನು ನಿರ್ಮೂಲನೆಗೆ ಸರ್ಕಾರ ಕಾನೂನು ಜಾರಿಗೆ ತಂದಿದ್ದು ಯಾವುದೇ ಮಹಿಳೆಯನ್ನು ದೇವದಾಸಿ ಪದ್ಧತಿಗೆ ಒಳಪಡಿಸಿದಲ್ಲಿ ಅದಕ್ಕೆ ಕಾರಣರಾದವರಿಗೆ, ಅದಕ್ಕೆ ಪ್ರೋತ್ಸಾಹ ನೀಡಿದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಯಾವುದೇ ರೂಪದಲ್ಲಿ ದೇವದಾಸಿ ಪದ್ಧತಿಯನ್ನು ಆಚರಿಸುವದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ ಆಗಿರುತ್ತದೆ. ಹಾಗಾಗಿ ಮಾಜಿ ದೇವದಾಸಿಯರಾದ ನೀವುಗಳು ಯಾರೇ ಈ ಅನಿಷ್ಠ ಪದ್ಧತಿಯನ್ನು ಆಚರಿಸುವದು ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ, ಈ ಪದ್ಧತಿಯ ನಿರ್ಮೂಲನೆಗೆ ಕೈ ಜೋಡಿಸಬೇಕೆಂದರು.
ಸರ್ಕಾರವು ಮಾಜಿ ದೇವದಾಸಿಯರ ಸಮೀಕ್ಷೆಯನ್ನು ನಡೆಸಿದ್ದು, ಸರ್ವೆ ವರದಿಯ ಆಧಾರದ ಮೇಲೆ ಮಾಜಿ ದೇವದಾಸಿ ಮಹಿಳೆಯರ ಜೀವನ ಸುಧಾರಣೆಗೆ ಸರ್ಕಾರದ ಮಟ್ಟದಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಮಾಲೋಚನಾ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಅಮರೇಶ್ ಹಾವಿನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅನ್ನಪೂರ್ಣ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ, ಮಹಿಳಾ ಅಭಿವೃದ್ಧಿ ನಿಗಮದ ನಿರೀಕ್ಷಕಿ ಪೂರ್ಣಿಮಾ ಹಾಗೂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

: Vasanti Uppara, Chief Executive Officer of Karnataka State Women Development Corporation, has called for everyone to join hands in the eradication of the Devadasi system, an evil system that is destroying the well-being of the society.
She spoke after participating in a dialogue meeting organized recently (June 8) with former Devadasi women at the Koppal Urban Development Authority auditorium.
The practice of leaving Devadasi is the worst social evil, which plunges the lives of innocent women into darkness. The government has enacted a law to eradicate this iniquitous system, and if any woman is subjected to the Devadasi system, those responsible for it and those who encouraged it will be severely punished. Practicing the Devadasi system in any form is a punishable offense under the law. Therefore, if you, the former Devadasi, are found practicing this iniquitous system, you should join hands in the eradication of this system by informing the concerned authorities.
He said that the government has conducted a survey of former Devadasis and based on the survey report, steps are being taken at the government level to improve the lives of former Devadasis women.
Deputy Director of the Women and Child Development Department Amaresh Havina, Women and Child Development Officer Annapurna, Child Development Project Officer Rohini, Inspector of the Women Development Corporation Purnima and the staff of the department were present in this consultation meeting.

Get real time updates directly on you device, subscribe now.

Comments are closed.

error: Content is protected !!