ಪ್ರೀತಿಗಿಂತ ದೊಡ್ಡ ಬಂಡಾಯ,ತತ್ವಜ್ಞಾನ ಮತ್ತೊಂದಿಲ್ಲ ಕವಿಗಳು ತಮ್ಮದೇ ಕಾವ್ಯಭಾಷೆ ರೂಢಿಸಿಕೊಳ್ಳಬೇಕು- ಡಾ.ಕೆ.ವೈ.ನಾರಾಯಣಸ್ವಾಮಿ

0

Get real time updates directly on you device, subscribe now.

ಹುಬ್ಬಳ್ಳಿ (ನರಗುಂದ-ನವಲಗುಂದ ರೈತ ಬಂಡಾಯ ವೇದಿಕೆ) ಮೇ, 17:

ಪ್ರೀತಿಯಿಂದ ಮಾತ್ರ ಶತ್ರುತ್ವವನ್ನು ಕೊಲ್ಲಬಹುದು,ಪ್ರೀತಿಗಿಂತ ದೊಡ್ಡ ಬಂಡಾಯ,ತತ್ವಜ್ಞಾನ ಮತ್ತೊಂದಿಲ್ಲ.ನಮ್ಮಲ್ಲಿರುವ ಯುದ್ಧ,ತಾರತಮ್ಯ ,ಅಸಮಾನತೆ ನಿವಾರಿಸಲು ಕವಿಗಳು ಪ್ರೀತಿಯ ಭಾಷೆಯನ್ನು ಹಂಚಬೇಕು.ಎಲ್ಲ ಕವಿಗಳೂ ಕೂಡ ತಮ್ಮದೇ ಛಾಪು ತರಲು ,ಜೀವಂತಿಕೆ ಕಾಪಿಡಲು ತಮ್ಮದೇ ಕಾವ್ಯ ಭಾಷೆ ರೂಢಿಸಿಕೊಳ್ಳಬೇಕು ಎಂದು ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿ.ವಿ.ಕುಲಪತಿ ಡಾ.ಕೆ.ವೈ.ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಆರ್.ಎನ್‌‌.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಮೇ ಸಾಹಿತ್ಯ ಮೇಳದ ಎರಡನೇ ದಿನದ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡದ ಹೊಸ ತಲೆಮಾರಿನ ಈ ಕವಿಗಳು ಕನ್ನಡದ ಬೇರೆ ಬೇರೆ ಸಮುದಾಯಗಳ ಹಿನ್ನೆಲೆಯಿಂದ ಬಂದಿರುವ ಗಟ್ಟಿಧ್ವನಿಯಾಗಿದ್ದಾರೆ.ಇಂದು ವಾಚಿಸಲ್ಪಟ್ಟ ಕವಿತೆಗಳ ವಸ್ತುಗಳೆಲ್ಲವೂ ಭಿನ್ನ ಆಲೋಚನೆಗಳನ್ನು ಸಹೃದಯರ ಮುಂದೆ ಇರಿಸಿದವು‌.ವರ್ತಮಾನಕ್ಕೆ ಪ್ರತಿಕ್ರಿಯಾತ್ಮಕವಾಗಿ,ಸಂವಾದವಾಗಿ ಸಾಹಿತ್ಯ ಮೂಡಿಬಂದಾಗ ಕವಿತೆ ಕಾಲ,ದೇಶವನ್ನು ಮೀರಲು ಸಾಧ್ಯ.ಇಂದಿನ ಗೋಷ್ಠಿಯಲ್ಲಿ ಅಂತಹ ಭರವಸೆದಾಯಕ ಕವಿತೆಗಳು ಬಂದಿವೆ.ಆಳ,ಸೂಕ್ಷ್ಮವಾದ ವಿಚಾರಗಳು ಕೇಳುಗರನ್ನು ಅಷ್ಟೇ ಆಳವಾಗಿ ,ಸೂಕ್ಷ್ಮವಾಗಿ ಅಭಿವ್ಯಕ್ತಿ ಮಾಡುವ ಕಾವ್ಯಭಾಷೆಯ ಲಯ ಕಂಡುಕೊಳ್ಳಬೇಕು. ಕವಿಯಾದವನು ವಸ್ತು,ವಿಷಯಗಳಷ್ಟೇ ಅಲ್ಲ ಅದನ್ನು ಹೇಳುವ ಭಾಷೆಯನ್ನು ಕೂಡ ಹುಡುಕುತ್ತಿರಬೇಕು.ಸರ್ವಜ್ಞ, ಮಹಾಯೋಗಿ ವೇಮನ,ಕೈವಾರ ನಾರಾಯಣಪ್ಪ,ಬಸವಣ್ಣನವರಲ್ಲಿ ಮತ್ತೆ ಮತ್ತೆ ಹೋಗಿ ಕಾವ್ಯ ಭಾಷೆಗೆ ತಡಕಾಡುವ ನಾವು,ಹೊಸತನದ ಕಾವ್ಯ ಭಾಷೆ ರೂಢಿಸಿಕೊಳ್ಳಬೇಕು ಎಂದು ಡಾ.ಕೆ.ವೈ.ನಾರಾಯಣಸ್ವಾಮಿ ಹೇಳಿದರು.

ಹೈದರಾಬಾದಿನ ಕವಯಿತ್ರಿ ,ಲೇಖಕಿ ನಿಶತ್ ಜಮೀಲಾ ತಮ್ಮ ಆಶಯ ಭಾಷಣದಲ್ಲಿ ,ಅಭಿವ್ಯಕ್ತಿಯು ಅನುಭವವನ್ನು ಆಧರಿಸಿಯೇ ವ್ಯಕ್ತವಾಗಬೇಕು.ನಾವು ಅನುಭವಿಸದೇ ಕೇವಲ ಊಹಾತ್ಮಕವಾಗಿ ಬರೆಯುವುದು ತರವಲ್ಲ.ಸತ್ಯವೇ ಬದುಕಿನ ಹಾಗೂ ಬರವಣಿಗೆಯ ಭಾಗವಾಗಿರಬೇಕು.ಶಾಂತಿ,ನ್ಯಾಯ,ಸುಸ್ಥಿರತೆಗೆ ಸಾಹಿತ್ಯ ಹಾಗೂ ಸಾಹಿತಿಯ ಪಾತ್ರ ಬಹಳ ಮುಖ್ಯ ಎಂದು ಅಭಿಪ್ರಾಯ ಪಟ್ಟರು.

ಕವನ ವಾಚನ

ಆರನಕಟ್ಟೆ ರಂಗನಾಥ” ಷರತ್ತುಗಳು ಅನ್ವಯಿಸುವುದಿಲ್ಲ….” ಅಶೋಕ ಹೊಸಮನಿ” ಮೂಕ ಪರದೆಯ ಮೇಲೆ ಹೃದಯದ ಹೆಜ್ಜೆಗಳು” ,ಮೆಹಬೂಬ್ ಮುಲ್ತಾನಿ”ಇಸ್ರಫಿಲ್‌ನ ತುತ್ತೂರಿ..ಮನಸ್ಸು ಭಯಗೊಳ್ಳುತ್ತಿದೆ ಪ್ರಶ್ನಿಸಲು ಆದರೂ ಭಂಡ ಧೈರ್ಯ ಕೇಳುವುದು ಬಿಡಲಿಲ್ಲ..” ಸದಾಶಿವ ಸೊರಟೂರು “ಮಗಳೇ ಇನ್ನೇನು ನಾನು ಉಸಿರುಬಿಡುತ್ತೇನೆ ಎಂದ ಕೂಡಲೇ ಬಾಯಿಗೆ ನೀರು ಬಿಡಬೇಡ..ಓಡಿ ಹೋಗಿ ಮರಣ ಪ್ರಮಾಣ ಪತ್ರಕ್ಕೊಂದು ಅರ್ಜಿ ಕೊಡು..ಇಲ್ಲಿ ಕೊಳ್ಳೆ ಹೊಡೆಯಲು ದಾಖಲೆಗಳು ಬೇಕಿಲ್ಲ..ನಿಯತ್ತಿಗೆ ಮಾತ್ರ” ಎಂಬ ಕವಿತೆ ಸಹೃದಯರ ಎದೆ ಮುಟ್ಟಿದವು.
ಡಾ.ಬಿ.ವಿ. ಸುನಿತಾ,
ನಾಗರಾಜ ಹರಪನಹಳ್ಳಿ, ಮರ್ಸಿ ಮಾರ್ಗರೆಟ್ ಹೈದರಾಬಾದ್,
ಶಮೀಮ ಕುತ್ತಾರ್ ಕಾಸರಗೋಡು,ಮಧು ಕಾರಗಿ,ಜಬೀವುಲ್ಲಾ ಅಸಾದ್,ಕೆ.ಬಿ. ವೀರಲಿಂಗನಗೌಡ್ರ ,ದೀಪಾ ಗೋನಾಳ,ಶಿಲ್ಪಾ ಮ್ಯಾಗೇರಿ, ,ಮೆಹಬೂಬ್ ಮಠದ ಸೇರಿದಂತೆ ಅನೇಕರು ಮಹತ್ವದ ಜನಪರ ಧೋರಣೆಯ ಕವಿತೆಗಳನ್ನು ಗೋಷ್ಠಿಯಲ್ಲಿ ವಾಚಿಸಿದರು.

ಸುನಂದಾ ಕಡಮೆ ಹಾಗೂ ಮೆಹಬೂಬ್ ಮಠದ ಕವಿಗೋಷ್ಠಿ ಸಂಯೋಜಿಸಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!