ಕ್ರಿಕೆಟ್ ಎಚ್‌ಪಿಎಲ್ ಸೀಜನ್-1ಗೆ ಚಾಲನೆ ನೀಡಿದ ಡಾ.ಕೆ.ಎಂ.ಸೈಯದ್ 

Get real time updates directly on you device, subscribe now.

ಕೊಪ್ಪಳ : ತಾಲೂಕಿನ ಹಳೇ ಬಂಡಿ ಹರ್ಲಾಪುರ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಎಚ್‌ಪಿಎಲ್ ಸೀಸನ್ 1 ರ ಕ್ರಿಕೆಟ್ ಪಂದ್ಯಾವಳಿಗೆ ಕೆಪಿಸಿಸಿ ಸಂಯೋಜಕ ಹಾಗೂ ಕೆಎಂಎಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಎಂ.ಸೈಯದ್ ಚಾಲನೆ ನೀಡಿದರು.
ನಂತರ ಮಾತನಾಡಿ ಕ್ರಿಕೆಟ್ ಇಂದು ಜಗತ್ತಿನಲ್ಲಿ ಪ್ರಸಿದ್ಧವಾದ ಆಟವಾಗಿದ್ದು, ಕ್ರಿಕೆಟ್ ಆಟ ಇಂದು ಗ್ರಾಮೀಣ ಮಟ್ಟವನ್ನು ತಲುಪಿದ್ದು ಸಂತಸ ತಂದಿದೆ, ಕ್ರಿಕೆಟ್ ಆಟದಲ್ಲಿ ಕ್ರೀಡಾಪಟುಗಳು ಪಾಲ್ಗೊಂಡು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಂದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರು, ಹಳೇ ಬಂಡಿ ಹರ್ಲಾಪುರ ಗ್ರಾಮದ ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಭಾಗವಸಿದ್ದರು.

Get real time updates directly on you device, subscribe now.

Comments are closed.

error: Content is protected !!