ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬ; ಕುಷ್ಟಗಿ ಬಿಜೆಪಿ ಯುವ ಮೋರ್ಚಾ ದಿಂದ ಹಾಲು ಹಣ್ಣು ವಿತರಣೆ
ಕುಷ್ಟಗಿ. ಸೆ.೧೭; ಪ್ರಧಾನಮಂತ್ರಿ ನರೇಂದ್ರ ಮೋದಿ ಯವರ ಹುಟ್ಟು ಹಬ್ಬದ ಪ್ರಯುಕ್ತ ರವಿವಾರ ಬೆಳಗ್ಗೆ ತಾಲೂಕು ಸಾರ್ವಜನಿಕ ಆಸ್ಪತ್ರೆ ಒಳ ರೋಗಿಗಳಿಗೆ ಬಿಜೆಪಿ ಯುವ ಮೋರ್ಚಾ ಘಟಕದ ವತಿಯಿಂದ ಬಡ ರೋಗಿಗಳಿಗೆ ಹಾಲು ಹಣ್ಣು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ದೊಡ್ಡನಗೌಡ ಎಚ್ ಪಾಟೀಲ್, ಯುವ ಮೋರ್ಚಾ ಅಧ್ಯಕ್ಷ ಉಮೇಶ್ ಯಾದವ್, ಡಾ.ಕೆ.ಎಸ್ ರೆಡ್ಡಿ, ಬಾಲಾಜಿ ಬಳಿಗಾರ, ಮಹೇಶ ಹಿರೇಮಠ್ ಚಂದ್ರಕಾಂತ ವಡಗೇರಿ, ಲಕ್ಷ್ಮಣ್ ಕಟ್ಟಿಹೊಲ, ಪರಸಪ್ಪ ಮೇಗೂರ ಹಾಗೂ ತಾಲೂಕು ಆಸ್ಪತ್ರೆ ಸಿಬ್ಬಂದಿ ವರ್ಗದವರು ಮತ್ತು ಬಿಜೆಪಿ ಯುವ ಮೋರ್ಚಾ ಕಘಟಕದ
ಪದಾಧಿಕಾರಿಗಳು ಉಪಸ್ಥಿತರಿದ್ದರು.