ಶ್ರವಣ ಮಾಡುವದರಿಂದ ನಮ್ಮ ಸಂಸ್ಕೃತಿ ಪರಿಚಯ : ನಾರಾಯಣದಾಸ್ ಕೊಪ್ಪಳ

Get real time updates directly on you device, subscribe now.

ಪುರಾಣ ಶ್ರವಣ ಮಾಡುವದರಿಂದ ನಮ್ಮ ಸಂಸ್ಕೃತಿಯ ಪರಿಚಯದೊಂದಿಗೆ ನಮ್ಮ ಋಷಿಮುನಿಗಳ ಸಾಧುಶರಣರ ಅವರ ಜಿವನ ಅನುಷ್ಠಾನ ಮೆಲುಕು ಹಾಕುವಂತೆ ಶ್ರೇಷ್ಠ ವಿಚಾರ ಕೇಳುವದರಿಂದ ಭಕ್ತ ಜನರು ತಮ್ಮ ಕೀಳರಿಮೆ ಮತ್ತು ಧರ್ಮಜೀವನ ತತ್ ಪ್ರೇರಣೆ ಪಡೆದುಕೊಳ್ಳುತ್ತಾರೆ ಈ ಮಾಹಾತ್ಮರ ಕೃಪಾಶಿರ್ವಾದದಿಂದ ಪಡೆಯುವದಕ್ಕೆ ಶ್ರೇಷ್ಠವಾದಂತಹ ಮಾರ್ಗವೇ ಜೀವನ, ಅವರ ಕುರಿತಾಗಿ ಚಿಂತನೆ ಸ್ಮರಣೆ ಧ್ಯಾನ ಇವೇ ಜೀವನದ ಪರಮೋದ್ದೇಶವಾಗಿದೆ ಎಂದು ನಾರಾಯಣದಾಸ್ ಸಂತೆಕೆಲ್ಲೂರು ಕೊಪ್ಪಳ ಇವರು ಹೇಳಿದರು.

ಅವರು ಕಿನ್ನಾಳದ ಬೆಟ್ಟದಲಿಂಗೇಶ್ವರರ ಕಲಾ ಸಾಂಸ್ಕೃತಿಕ ಮತ್ತು ಪುರಾಣ ಪ್ರವಚನ ವೇದಿಕೆ ಕಿನ್ನಾಳದ ಕೌಲಪೇಟಿಯ ಶ್ರೀ ಕಾಶಿವಿಶ್ವನಾಥ ದೇವಸ್ಥಾನದ ಆವರಣದಲ್ಲಿ ದಿನಾಂಕ ೦೬-೦೯-೨೦೨೩ ರಿಂದ ೧೭-೦೯-೨೦೨೨೩ ರವರೆಗೆ ೧೮ನೇ ವರ್ಷದ ಪುರಾಣ ವಿದ್ವಾಂಸರಿಂದ ಪುರಾಣಪ್ರವಚನ ಖ್ಯಾತ ಕಲಾವಿದರುಗಳಿಂದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ, ಭಕ್ತಿ ಸಂಗೀತ, ಕಾರ್ಯಕ್ರಮದ ಕುರಿತು ಮಾತನಾಡುತ್ತಿದ್ದರು.ಮುಂದುವರೆದು ಮಾತನಾಡಿದ ಆವರು ಮಹಾತ್ಮರ ಕೃಪಾಶಿರ್ವಾದ ಯಾವ ರೀತಿ ಇರುತ್ತದೆ ಎಂದರೆ ನಾವೂ ಯಾರೂ ಗಾಳಿಯನ್ನು ನೋಡಲಾರೆವು, ಆದರೆ ಅದರ ಅನುಭವವಾಗುತ್ತದೆ. ಅದೆ ರೀತಿ ಮಹಾತ್ಮರು ಸಶರೀರವಾಗಿಲ್ಲದಿದ್ದರೂ ಅವರ ಆಶಿರ್ವಾದ ತಂಗಾಳಿಯಂತೆ ದೊರಕೆ ದೊರಕುತ್ತದೆ, ಅದಕ್ಕೆ ಶ್ರಧ್ಧೆ, ವಿಶ್ವಾಸ, ನಂಬಿಕೆ ಇದ್ದರೇ ಸಾಕು, ಸಂತ ಶರಣರ ಸಂಕಲ್ಪ ಹೊಂದಿರುವವನಿಗೆ ಭಕ್ತಿಯೇ ನೂರಾರು ಮಂದಿಯನ್ನು ಜೊತೆಗೂಡಿಸುತ್ತದೆ ಎಂದರು.

ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಗಂಗಾವತಿ ವಿಧಾನಸಭಾ ಕ್ಷೇತ್ರದ   ಶಾಸಕರಾದ  ಜಿ. ಜನಾರ್ಧನ್ ರೆಡ್ಡಿಯವರು ಆಗಮಿಸಿ ಸನ್ಮಾನವನ್ನು ಸ್ವೀಕರಿಸಿ ಜನರ ಸಮಸ್ಯೆಗಳನ್ನು ಆಲಿಸಿದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ  ಲಕ್ಷ್ಮಣಪ್ಪ ಬಡಗಲ್ ಸಮಾಜ ಸೇವಕರು ಗಂಗಾವತಿ,ಶ್ರೀಶೈಲಪ್ಪ ಬೆಲ್ಮಕೊಂಡಿ, ಪರಶುರಾಮಪ್ಪ ಚಿತ್ರಗಾರ, ನಾಗಪ್ಪ ಗ್ವಡಕೇರ, ಪುಟ್ಟಣ್ಣ ಬೆಲ್ಮಕೊಂಡಿ,ಸಂಗಪ್ಪ ಚಕ್ರಸಾಲಿ, ಶಿವಪ್ಪ ಲಕ್ಕುಂಡಿ,ಮಹಾಬಳೇಶ ಕುದರಿಮೋತಿ ಶಿಕ್ಷಕರು, ಶಂಕ್ರಪ್ಪ ಶಿರಿಗೇರಿ, ರಾಮಚಂದ್ರಪ್ಪ ಪೂಜಾರ, ಚಂದ್ರಪ್ಪ ಸೋಮಪ್ಪ ಶಿರಿಗೇರಿ,ಗೋವಿಂದಪ್ಪ ಮೆತಗಲ್ ಇನ್ನೂ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

Get real time updates directly on you device, subscribe now.

Comments are closed.

error: Content is protected !!
%d bloggers like this: