ಶೈಕ್ಷಣೀಕ ಕ್ಷೇತ್ರಕ್ಕೆ ಮಹಾಂತಯ್ಯನಮಠ ಕೊಡುಗೆ ಅಪಾರ : ದೇವರುಗುಡಿ

Get real time updates directly on you device, subscribe now.


ಕೊಪ್ಪಳ : ಶೈಕ್ಷಣೀಕ ಕ್ಷೇತ್ರಕ್ಕೆ ದಿ.ಎಂ.ಎಸ್.ಮಹಾಂತಯ್ಯನಮಠ ಕೊಡುಗೆ ಅಪಾರ ಎಂದು ಶ್ರೀಶಿವಮೂರ್ತಯ್ಯ ಮಹಾಂತಯ್ಯನಮಠ ಶಿಕ್ಷಣ ಸಂಸ್ಥೆಯ ನಿರ್ದೇಶಕ ಪತ್ರಪ್ಪ ದೇವರುಗುಡಿ ಹೇಳಿದರು.
ಅವರು ರವಿವಾರದಂದು ಸಂಸ್ಥೆಯ ೧೩ನೇ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೋಂಡು ಮಾತನಾಡಿ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡಿ ಮಕ್ಕಳ ಪ್ರಗತಿ ಬಯಸುತ್ತಿದ್ದ ದಿ.ಎಂ.ಎಸ್.ಮಹಾಂತಯ್ಯನಮಠರು ಕೊಪ್ಪಳ ನಗರದಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಕಾರ್ಯ ಶ್ಲಾಘನೀಯ, ಇಂದು ಈ ಸಂಸ್ಥೆಯಲ್ಲಿ ಕಲಿತ ಮಕ್ಕಳು ವಿವಿಧ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸಂತಸ ತಂದಿದೆ ಎಂದರು.
ಇನೋರ್ವ ಮುಖ್ಯ ಅತಿಥಿಗಳಾಗಿ ಪಾಲ್ಗೋಂಡಿದ್ದ ಪತ್ರಕರ್ತ ಶಿವರಾಜ್ ನುಗಡೋಣಿ ಮಾತನಾಡಿ ಮಹಾಂತಯ್ಯನಮಠ ಶಿಕ್ಷಣ ಸಂಸ್ಥೆಯು ಮಕ್ಕಳ ಪ್ರಗತಿಗಾಗಿ ಸದಾ ಶ್ರಮಿಸುತ್ತಿದೆ ಇಲ್ಲಿ ಕಲಿತ ವಿದ್ಯಾರ್ಥಿಗಳು ಯಶಸ್ಸು ಸಾಧಿಸಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ವಿರೇಶ ಮಹಾಂತಯ್ಯನಮಠ ವಹಿಸಿ ಶಿಕ್ಷಕರು ಮಕ್ಕಳ ಶಿಕ್ಷಣಕ್ಕೆ ಶ್ರಮಿಸುತ್ತಿದ್ದು ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ನಿರ್ಮಿಸುವ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಸವಿತಾ ಕಲ್ಲುಗುಡಿ ಹಾಗೂ ರೇಣುಕಾ ಹೂಗಾರ ಅವರನ್ನು ಈ ವರ್ಷದ ಉತ್ತಮ ಶಿಕ್ಷಕಿಯರು ಎಂದು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಭಾರತಿ ಮಹಾಂಯ್ಯನಮಠ,ವಿಶ್ವನಾಥ ಮಹಾಂತಯ್ಯನಮಠ, ಶಿವಮೂರ್ತಯ್ಯ ಮಹಾಂತಯ್ಯನಮಠ, ಶಾಲೆಯ ಮುಖ್ಯ ಶಿಕ್ಷಕರಾದ ಮಹೇಶ, ಪವಿತ್ರಾ ಮಡಿವಾಳರ, ಶಿಕ್ಷಕರು, ಪಾಲಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Get real time updates directly on you device, subscribe now.

Comments are closed.

error: Content is protected !!