ರಾಜ್ಯ ಕರಾಟೆ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ  ಮೌನೇಶ  ವಡ್ಡಟ್ಟಿ ಅವಿರೋಧ ಆಯ್ಕೆ

Get real time updates directly on you device, subscribe now.

ಕೊಪ್ಪಳ :  ರಾಜ್ಯ ಕರಾಟೆ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ನಗರದ ಖ್ಯಾತ ಕರಾಟೆ ಪಟು ಮತ್ತು ಹಿರಿಯ ಕರಾಟೆ ತರಬೇತುದಾರ ಮೌನೇಶ ಶಂಕ್ರಪ್ಪ ವಡ್ಡಟ್ಟಿ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.


ಇತ್ತಿಚೆಗೆ ಮಾರ್ಚ್ 29 ರಂದು ಉಡುಪಿ ಜಿಲ್ಲೆಯ ದುರ್ಗಾ ಇಂಟರ್ನ್ಯಾಷನಲ್ ಹೊಟೆಲ್ ಸಭಾಂಗಣದಲ್ಲಿ ಜರುಗಿದ ರಾಜ್ಯ ಕರಾಟೆ ಶಿಕ್ಷಕರ ಸಂಘದ 8 ನೇ ವರ್ಷದ ಮಹಾ ಸಮ್ಮೀಲನ ಕಾರ್ಯಕ್ರಮ ಜರುಗಿತು ಈ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ 200 ಕ್ಕೂ ಹೆಚ್ಚು ಕರಾಟೆ ಶಿಕ್ಷಕರು ಭಾಗವಹಿಸಿದ್ದರು ಕಾರ್ಯಕ್ರಮದ ನಂತರ ನಡೆದ ಪದಾಧಿಕಾರಿಗಳು ಬದಲಾವಣೆ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ಆಚಾರ್ಯ ಮತ್ತು ಚೇರ್ಮನ್ ಪ್ರವೀಣ ರಾಂಕಾ ರವರು ಮಾತನಾಡಿ ಕೊಪ್ಪಳ ಜಿಲ್ಲೆಯ ಹಿರಿಯ ಕರಾಟೆ ತರಬೇತುದಾರ ಮೌನೇಶ ರವರು ಈ ಹಿಂದೆ ರಾಜ್ಯ ವಕ್ತಾರರಾಗಿ ಕೊಪ್ಪಳ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಕರಾಟೆ ಶಿಕ್ಷಕರಿಗೊಸ್ಕರ ಮತ್ತು ಶಾಲಾ ವಿಧ್ಯಾರ್ಥಿನಿಯರಿಗೆ ಸರ್ಕಾರದ ವತಿಯಿಂದ ಕರಾಟೆ ತರಬೇತಿ ಕೊಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರನ್ನು ಮತ್ತು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪರವರನ್ನು ಬೇಟಿ ಮಾಡಿ ಮನವಿ ಸಲ್ಲಿಸಿ ಪ್ರೌಡ ಶಾಲಾ ವಿಧ್ಯಾರ್ಥಿನಿಯರಿಗೆ ಕರಾಟೆ ತರಬೇತಿ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಜಿಲ್ಲೆಯಲ್ಲಿ ಅನೇಕ ತರಬೇತಿಯನ್ನು ನೀಡುವುದರ ಜೊತೆಗೆ ಉತ್ತಮ ಕರಾಟೆ ಪ್ರದರ್ಶನ ನೀಡಿ ಕರಾಟೆ ಕಲೆಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದಾರೆ ಆದ ಕಾರಣ ಕಾರ್ಯಕಾರಣಿ ಸಮಿತಿಯ ಎಲ್ಲ ಸದಸ್ಯರ ಒಪ್ಪಿಗೆ ಮೇರೆಗೆ ಮೌನೇಶ ರವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ತಿಳಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷ ಮಹಮ್ಮದ ನದೀಮ ಮಂಗಳೂರು, ಉಪಾಧ್ಯಕ್ಷರುಗಳಾದ ಸತೀಶ್ ಬೆಳ್ಮಣ ಉಡುಪಿ, ವಿಶಾಲ್ ನಾಯಕ ಕಾರವಾರ, ಸುಂದರಂ ಬೆಂಗಳೂರು, ಪ್ರಧಾನ ಕಾರ್ಯದರ್ಶಿ ಕಟ್ಟೆಸ್ವಾಮಿ ಬಳ್ಳಾರಿ, ಕೋಶಾಧಿಕಾರಿ ಶಿವಕುಮಾರ ಶಾರದಳ್ಳಿ ವಿಜಯಪುರ, ಸಹ ಕಾರ್ಯದರ್ಶಿ ಪ್ರಕಾಶ ಉಜ್ಜೆನಕೊಪ್ಪ ಹಾವೇರಿ, ಸಂಘಟನಾ ಕಾರ್ಯದರ್ಶಿ ರೋಹಿತಾಕ್ಷ ಉಡುಪಿ, ಕ್ರೀಡಾ ಕಾರ್ಯದರ್ಶಿ ಸರ್ಪಾಜ ಮಂಗಳೂರು, ಹಿರಿಯ ಸಲಹೆಗಾರ ರವಿ ಕೋಟ್ಯಾನ್ ಉಡುಪಿ, ಕಿರಣ ಕುಂದಾಪುರ, ಕಾರ್ಯಕಾರಣಿ ಸದಸ್ಯರಾದ ರಾಹುಲ್ ಟಿ ಜೆ, ಭಾಷಾ, ಸೇರಿದಂತೆ ಜಿಲ್ಲೆಯ ಜಬಿವುಲ್ಲಾ ಗಂಗಾವತಿ, ವಿಠಲಕುಮಾರ ಹೊಳೆಯಪ್ಪನವರ, ಅಶೋಕ ನರಗುಂದ, ಸೋಮಲಿಂಗ ಕವಲೂರು, ಸಲೀಮ ಹಾವೇರಿ, ಶಾಂತವೀರ, ಚಂದ್ರು ಪೂಜಾರ, ಸೌಮ್ಯ, ಮಹಾಂತೇಶ, ಮಂಜುನಾಥ ಸೇರಿದಂತೆ ಉಪಸ್ಥಿತರಿದ್ದರು.

ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೌನೇಶ ರವರನ್ನು ನಗರದ ಭೂಮಿ ಕರಾಟೆ ಫೌಂಡೇಷನ್ ಎಲ್ಲಾ ಪದಾಧಿಕಾರಿಗಳು ಮತ್ತು ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಎಲ್ಲ ಪದಾಧಿಕಾರಿಗಳು ನಗರದ ಕರಾಟೆ ಶಿಕ್ಷಕರು ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!