ನಗರಗಡ್ಡಿ ಶ್ರೀಗಳಿಂದ ಸಮಾಜಮುಖಿ ಕಾರ್ಯ: ಡಾ.ಕೆ.ಎಂ.ಸೈಯದ್

ಕೊಪ್ಪಳ: ನಗರಗಡ್ಡಿ ಶ್ರೀ ಶಾಂತಲಿಂಗೇಶ್ವರ ಮಹಾಸ್ವಾಮಿಗಳಿಂದ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಕೆಪಿಸಿಸಿ ಸಂಯೋಜಕ ಹಾಗೂ ಸೈಯದ್ ಫೌಂಡೇಶನ್ ಅಧ್ಯಕ್ಷ ಡಾ. ಕೆ.ಎಂ.ಸೈಯದ್ ಹೇಳಿದರು.
ಅವರು ಬುಧವಾರದಂದು ಕೊಪ್ಪಳ ತಾಲೂಕಿನ ಬಂಡಿ ಹರ್ಲಾಪುರ್ ಬಳಿಯ ನಗರಗಡ್ಡಿಯ ಶ್ರೀ ಶಾಂತಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ ನಗರಗಡ್ಡಿ ಶ್ರೀಗಳು ಇಲ್ಲಿನ ಪರಿಸರವನ್ನು ಕಾಪಾಡಿ ಸುತ್ತಮುತ್ತಲಿನ ಹಳ್ಳಿಗಳಿಗೆ ಶ್ರೀ ಮಠ ಮಾದರಿಯಾಗಿದ್ದು, ಪ್ರತಿ ವರ್ಷ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗುತ್ತದೆ ಎಂದರು.
ಜಾತ್ರಾ ಮಹೋತ್ಸವದ ಸಾನಿಧ್ಯವನ್ನು ವಿವಿಧ ಮಠಾಧೀಶರು ವಹಿಸಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೋಮಶೇಖರ್ ಹಿಟ್ನಾಳ್, ಜಾತ್ರಾ ಸಮಿತಿಯ ಚಂದ್ರಪ್ಪ ಬಿಸರಳ್ಳಿ ಬಂಡಿ ಹರ್ಲಾಪುರ್ ಬಸಾಪುರ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಗುರು ಹಿರಿಯರು ಪಾಲ್ಗೊಂಡಿದ್ದರು.
Comments are closed.