ಕಾರ್ಖಾನೆ ತೊಲಗಲಿ, ಬಾಳು ಬೆಳಗಲಿ ಎಂದ ಜೋಡಿಗೆ ಹಾರೈಸಿದ ಹೋರಾಟಗಾರರು

Get real time updates directly on you device, subscribe now.

153 ನೇ ದಿನದ ಬಲ್ಡೋಟ ತೊಲಗಿಸಿ ಹೋರಾಟ ಸಂಪನ್ನ

ಕೊಪ್ಪಳ ಕಾರ್ಖಾನೆ ಬಾಧಿತ ರೈತ ಸಂಘ ರಚನೆಗೆ ಹಳ್ಳಿ ಕಡೆಗೆ ಹೋರಾಟಗಾರರ ನಡೆ

ಕೊಪ್ಪಳ: ನಗರಸಭೆ ಮುಂದುಗಡೆ ನಡೆದಿರುವ ಬಲ್ಡೋಟ ಕಾರ್ಖಾನೆ ವಿರೋಧಿ ಧರಣಿ 153ನೇ ದಿನ ಪೂರ್ಣಗೊಳಿಸಿತು.
ಗುರುವಾರ ಎಪ್ರಿಲ್ 2 ರಂದು ಎಂ.ಎಸ್.ಪಿ.ಎಲ್, ಪಿ.ಬಿ.ಎಸ್, ಠಾಕೂರ್ ಸ್ಟೀಲ್, ಐ.ಎಲ್.ಸಿ, ಎಸ್.ಕೆ.ಎಸ್. ಸ್ಟೀಲ್ ಮುಂತಾದ ಕಾರ್ಖಾನೆಗಳಿಂದ ದೂಳು, ಹೊಗೆ, ಬೂದಿ ಬಾಧಿತ ಹಾಲವರ್ತಿ ಗ್ರಾಮದಲ್ಲಿ ‘ಕೊಪ್ಪಳ ಕಾರ್ಖಾನೆ ಬಾಧಿತ ರೈತ ಸಂಘ’ ಗ್ರಾಮ ಘಟಕ ಉದ್ಘಾಟನೆ ನೆರವೇರಿಸಲು ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಒಳಗೊಂಡು ಸಂಚಾಲಕ ಮಂಡಳಿ ಸಿದ್ದಗೊಂಡಿತು.
ಇದೇ ವೇಳೆ ಮಂಜುನಾಥ ಸಾಲಿಮಠ ಅವರ ಮಗಳ ವಿವಾಹವನ್ನು ಕಾರ್ಖಾನೆ ತೊಲಗಲಿ ನವಜೋಡಿ ಬೆಳಗಲಿ ಎಂಬ
ಸ್ವಾಗತ ಕಮಾನು ಮಾಡಿ ಅತಿಥಿಗಳನ್ನು ಆಹ್ವಾನ ನೀಡಿ ಸಂಗೀತ ಕಾರ್ಯಕ್ರಮದಿಂದ ಬಲ್ಡೋಟ ತೊಲಗಿಸಿ ಹೋರಾಟಗಾರರನ್ನು ಸ್ವಾಗತ ಕೋರಿದರು. ಸಾಲಿಮಠ ನವ ಜೋಡಿಗೆ ಹೋರಾಟದ ತಂಡದಿಂದ ಹಾರೈಸಿದರು.
ಧರಣಿಯಲ್ಲಿ ಸಂಚಾಲಕರಾದ ಮಲ್ಲಿಕಾರ್ಜುನ ಬಿ‌. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಪ್ರಾಚಾರ್ಯ ಎಸ್.ಬಿ.ರಾಜೂರು, ಪ್ರಕಾಶಕ ಡಿ.ಎಂ.ಬಡಿಗೇರ, ಎಲ್.ಎಫ್. ಪಾಟೀಲ್, ಬಿ.ಜಿ.ಕರಿಗಾರ, ಶಂಭುಲಿಂಗಪ್ಪ ಹರಗೇರಿ, ಶರಣು ಶೆಟ್ಟರ್, ವೀರಭದ್ರ ಪಾಂಚಾಳ, ಡಾ. ಬಸವರಾಜ ಪೂಜಾರ, ಎಂ.ಎಸ್‌. ಗಂಟಿ, ರಾಜಶೇಖರ ಏಳುಬಾವಿ, ರವಿ ಕಾಂತನವರ, ಮಹಾದೇವಪ್ಪ ಮಾವಿನಮಡು, ಶಿವಪ್ಪ ಹಲಗೇರಿ, ಬಸವರಾಜಪ್ಪ ಶೆಟ್ಟರ್, ಪಂಪಣ್ಣ ಚಿಂತಪಲ್ಲಿ, ನಾಗರಾಜ ಕುಷ್ಟಗಿ, ರತ್ನಮ್ಮ ದೊಡ್ಡಮನಿ, ಗಂಗಮ್ಮ ಕೊಡೇಕಲ್, ವೈ. ನಾರಾಯಣ, ಬಸಪ್ಪ ಕಲಕೇರಿ, ಗುರಪ್ಪ ಒಂಟೆತ್ತಿನವರ, ಶಿವಪ್ಪ ಜಲ್ಲಿ ಪಾಲ್ಗೊಂಡರು.

Get real time updates directly on you device, subscribe now.

Comments are closed.

error: Content is protected !!