ಕೊಪ್ಪಳ ವಿವಿಯ ಪಿಜಿ ಫಲಿತಾಂಶ: ರ್ಯಾಂಕ್‌ ಗಳಿಕೆಯಲ್ಲಿ ಎಸ್‌ಕೆಎನ್‌ಜಿ ಕಾಲೇಜಿಗೆ ಸಿಂಹಪಾಲು

Get real time updates directly on you device, subscribe now.

  • ಇತಿಹಾಸ, ಕನ್ನಡ ಮತ್ತು ಸಮಾಜಶಾಸ್ತ್ರದ ಟಾಪ್‌ 5 ಸ್ಥಾನ ಕಾಲೇಜಿನ ಮಡಿಲಿಗೆ ಗಂಗಾವತಿ: ಕೊಪ್ಪಳ ವಿಶ್ವವಿದ್ಯಾಲಯ ಹಾಗೂ ವಿವಿ ವ್ಯಾಪ್ತಿಯಲ್ಲಿ 2023-24ನೇ ಸಾಲಿನಲ್ಲಿ ಪ್ರವೇಶ ಪಡೆದು 2024-25ನೇ ಸಾಲಿನಲ್ಲಿ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿ ರ್ಯಾಂಕ್‌ ಪಡೆದವರಲ್ಲಿ ನಗರದ ಶ್ರೀ ಕೊಲ್ಲಿ ನಾಗೇಶ್ವರರಾವ್‌ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಿಂಹಪಾಲು ಲಭಿಸಿದೆ.

  • ಎಂ.ಎ. ಅರ್ಥಶಾಸ್ತ್ರ ವಿಭಾಗದಲ್ಲಿ ಹಬೀಬಾ (82.25%) ಪ್ರಥಮ ರ್ಯಾಂಕ್‌, ಮಂಜಮ್ಮ (81%) ದ್ವೀತೀಯ ರ್ಯಾಂಕ್‌ ಗಳಿಸಿದ್ದಾರೆ.
    ಎಂ.ಎ.ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಲ್ಲಿ ಆನಂದಕುಮಾರ್‌ (84%) ಪ್ರಥಮ ರ್ಯಾಂಕ್‌, ಶರಣಮ್ಮ(82.54%) ದ್ವಿತೀಯ ರ್ಯಾಂಕ್‌, ರುವಾನಾ ಬೇಗಂ (82.21%) ತೃತೀಯ ರ್ಯಾಂಕ್‌, ಶೋಭಾ (80.88%) ನಾಲ್ಕನೇ ರ್ಯಾಂಕ್‌ ಹಾಗೂ ಶ್ರೀದೇವಿ (80.17%) ಐದನೇ ರ್ಯಾಂಕ್ ಗಳಿಸಿದ್ದಾರೆ.
    ಎಂ.ಎ. ಕನ್ನಡದಲ್ಲಿ ಹೀನಾ (85.75%) ಪ್ರಥಮ ರ್ಯಾಂಕ್‌, ಸುಮಾ ಹೊರಪೇಟೆ (84.46%) ದ್ವಿತೀಯ ರ್ಯಾಂಕ್‌, ವಿನಾಯಕ (84.42%) ತೃತೀಯ ರ್ಯಾಂಕ್‌, ಅಮರಪ್ಪ (84%) ನಾಲ್ಕನೇ ರ್ಯಾಂಕ್‌ ಹಾಗೂ ಹೊನ್ನೂರಪ್ಪ (83.75%) ಐದನೇ ರ್ಯಾಂಕ್‌ ಪಡೆದಿದ್ದಾರೆ.
    ಎಂ.ಎ.ಸಮಾಜಶಾಸ್ತ್ರ ವಿಭಾಗದಲ್ಲಿ ಜಯಮ್ಮ ಮತ್ತು ದುರ್ಗಮ್ಮ ನಾಯಕ್‌ (78.63%) ಇಬ್ಬರೂ ಪ್ರಥಮ ರ್ಯಾಂಕ್, ಕವಿತಾ ಹಾಗೂ ಜಿ.ಸುಮಲತಾ (78.33%) ಇಬ್ಬರೂ ದ್ವಿತೀಯ ರ್ಯಾಂಕ್, ಶ್ಯಾಮಲಾ (77.42%) ತೃತೀಯ ರ್ಯಾಂಕ್‌, ಕನಕಮ್ಮ (76.13%) ನಾಲ್ಕನೇ ರ್ಯಾಂಕ್‌ ಹಾಗೂ ಅಂಜುಮ್‌ ಬೇತಾಲಿ (75.63%) ಐದನೇ ರ್ಯಾಂಕ್‌ ಗಳಿಸಿದ್ದಾರೆ.
    ಎಂ.ಎ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪಂಪಾಪತಿ (77.13%) ಪ್ರಥಮ ರ್ಯಾಂಕ್‌, ಮಂಜುನಾಥ್‌ (74.42%) ದ್ವಿತೀಯ ರ್ಯಾಂಕ್‌ ಗಳಿಸಿದ್ದಾರೆ. ಎಂ.ಎ. ರಾಜ್ಯಶಾಸ್ತ್ರ ವಿಭಾಗದಲ್ಲಿ ಸುಷ್ಮಾ ಸರೋಜಾ (78.08%) ದ್ವೀತೀಯ ರ್ಯಾಂಕ್‌ ಗಳಿಸಿದ್ದಾರೆ.
    ಎಂ.ಎ. ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಬಿ.ಚೈತ್ರಾ (81.58%) ಪ್ರಥಮ ರ್ಯಾಂಕ್‌, ಶಕೀಲಾ (79.21%) ದ್ವಿತೀಯ ರ್ಯಾಂಕ್‌, ಎಂ.ದುರ್ಗಶ್ಯಾಮಪ್ರಸಾದ್‌ (78.71%) ನಾಲ್ಕನೇ ರ್ಯಾಂಕ್ ಗಳಿಸಿದ್ದಾರೆ.
    ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಾಸಕ ಜಿ,ಜನಾರ್ಧನರೆಡ್ಡಿ, ಉಪಾಧ್ಯಕ್ಷ ವೀರೇಶ ಬಲಕುಂದಿ, ಸಮಿತಿಯ ಎಲ್ಲ ಸದಸ್ಯರು, ಪ್ರಾಚಾರ್ಯ ಡಾ.ಶಿವರಾಜ ಜಿ.ಗುರಿಕಾರ ಹಾಗೂ ಎಲ್ಲ ವಿಭಾಗಗಳ ಬೋಧಕರು ಶ್ಲಾಘಿಸಿ ಅಭಿನಂದಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!