ವರ್ತಮಾನದ ತಲ್ಲಣಗಳಿಗೆ ಕವಿ ಸ್ಪಂದಿಸಲಿ  ಡಾ.ಪುಷ್ಪಾ.ಶಲವಡಿಮಠ 

Get real time updates directly on you device, subscribe now.

ದರ್ವೇಶಿ ಕಾವ್ಯ ಕೃತಿ ಜನಾರ್ಪಣೆ
ಗದಗ : ಬಡತನ ಹಸಿವು ನೋವು ಸಂಕಟಗಳು
ವರ್ತಮಾನದ ತಲ್ಲಣಗಳಿಗೆ ಕವಿ ಸ್ಪಂದನೆ ಅಗತ್ಯ ಎಂದು ಹಾವೇರಿ ಜಿಲ್ಲಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರು, ಹಿರಿಯ ಕವಯತ್ರಿ   ಡಾ ಪುಷ್ಪಾ ಶಲವಡಿಮಠ ಅಭಿಮತ ವ್ಯಕ್ತಪಡಿಸಿದರು.
ಹೂವಿನ ಹಡಗಲಿ ಪಟ್ಟಣದ ಸರಕಾರಿ ನೌಕರರ ಭವನದಲ್ಲಿ ಏರ್ಪಡಿಸಲಾಗಿದ್ದ  ಸಿಂಚನ ಪ್ರಕಾಶನ. ಮೇ ಸಾಹಿತ್ಯ ಮೇಳ ಬಳಗ ಹೂವಿನ ಹಡಗಲಿ ಸಹಯೋಗದಲ್ಲಿ ಗದುಗಿನ ಕವಿ ಎ.ಎಎಸ್. ಮಕಾನದಾರ ಅವರ ಮಹತ್ವದ ಕವನ ಸಂಕಲನ  ದರ್ವೇಶಿ ಪದ್ಯ ಕೃತಿ ಜನಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃತಿ ಕುರಿತು ಮಾತನಾಡಿದರು.
ಶರಣರ ಸೂಫಿ ಸಂತರ ಸೌಹಾರ್ದತೆ ಸಮಾನತೆಯ ನುಡಿಗಳನ್ನು ಕವಿ ಸರಳ ಪದ್ಯಗಳಲ್ಲಿ ಅನಾವರಣಗೊಳಿಸಿದ್ದಾರೆ.
ಸಮಾಜದ ಜನ ಸಾಮಾನ್ಯರ
ಕಡು ಕಷ್ಟಗಳಿಗೆ ಕವಿ ಮರುಗಿ ಕರಗಿ ಕಾವ್ಯರೂಪದಲ್ಲಿ ಅಭಿವ್ಯಕ್ತ ಪಡಿಸಿದ್ದಾರೆ ಎಂದು ತಿಳಿಸಿದರು.
ದರ್ವೇಶಿಗಳು ಸರಳ ಜೀವನ ನಡೆಸುವ ಉದಾತ್ತ ಮೌಲ್ಯಗಳನ್ನು ಬಿತ್ತರಿಸುವ ಕೆಲಸ ನಿರಂತರವಾಗಿ ಮಾಡುವವರು. ದರ್ಪವಿಲ್ಲದ ತ್ಯಾಗಮಯ ಬದುಕು ನಿರ್ವಹಿಸುವ ದರ್ವೇಶಿ  ಬಗ್ಗೆ
ಕನ್ನಡ ಸಾಹಿತ್ಯ ಲೋಕಕ್ಕೆ ಅಪರೂಪದ ವಿಶಿಷ್ಟ ರೀತಿಯಲ್ಲಿ ಪದ್ಯಗಳನ್ನು ರಚಿಸಿದ್ದಾರೆ ಎಂದು ಬಣ್ಣಿಸಿದರು.
ಅಸಮಾನತೆ ಭ್ರಷ್ಟಾಚಾರ ಯುದ್ಧದ ಭೀತಿಯ ಸಂದರ್ಭದಲ್ಲಿ ದರ್ವೇಶಿ  ಕೃತಿಯ ಕವಿತೆಗಳು ಮಾನವೀಯ ಸಂಬಂಧಗಳು
ಬೆಸೆಯುವಲ್ಲಿ ಸಾರ್ಥಕಗೊಂಡಿವೆ ಎಂದು ಹೇಳಿದರು.
ದರ್ವೇಶಿ ಕೃತಿಯ ಕವಿತೆಗಳು
ಬಳ್ಳಾರಿ ಕೃಷ್ಣದೇವರಾಯ ವಿಶ್ವವಿದ್ಯಾಲಯದ, ಕುವೆಂಪು ವಿಶ್ವ ವಿದ್ಯಾಲಯ ಗಳ ಪಠ್ಯಕ್ಕೆ ಆಯ್ಕೆ ಆಗಿರುವುದನ್ನು ಸ್ಮರಿಸಿದರು.
ಸಾಹಿತಿ ಇಸ್ಮಾಯಿಲ್ ಎಲಿಗಾರ್ ದರ್ವೇಶಿ  ಪದ್ಯ  ಕೃತಿ ಜನಾರ್ಪಣೆ ಮಾಡಿದರು.
ನಿರಂತರ ಪ್ರಕಾಶನದ ಕವಿ ಎ ಎಸ್ ಮಕಾನದಾರ ಮಾತನಾಡಿ
ಬಳ್ಳಾರಿ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪಠ್ಯಕ್ಕೆ ಕಾವ್ಯಗಳನ್ನು ಪದವಿ ವಿದ್ಯಾರ್ಥಿಗಳು ಓದುತ್ತಿದ್ದಾರೆ.
ಅಖಂಡ ಬಳ್ಳಾರಿ ವಿಜಯನಗರ ಜಿಲ್ಲೆಯ
ಸಾಂಸ್ಕೃತಿಕ ನೆಲ ಹೂವಿನ ಹಡಗಲಿಯಲ್ಲಿ ದರ್ವೇಶಿ  ಕೃತಿ
ಜನಾರ್ಪಣೆ ಆಗಿರುವುದು ವಿಶೇಷ ಸಂಗತಿ ಎಂದು ಹೇಳಿದರು.
ಸಾಹಿತಿ ತೋ.ಮ. ಶಂಕ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ಕವಿ ರಾಮಪ್ಪ ಕೋಟಿಹಾಳ ಸಿಂಚನ ಪ್ರಕಾಶನದ ಸವಿತಾ ಅಂಗಡಿ
ಗ್ರಂಥಾಲಯಾಧಿಕಾರಿ ಬಿ.ನಾರಾಯಣ್ ದಾಸ್  ಸಿಂಚನ ಕಾವ್ಯ ಪ್ರಶಸ್ತಿ ಪುರಸ್ಕೃತರಾದ ಸೋಮಲಿಂಗ ಬೇಡರ ಆಳೂರ ಹಾಗೂ ಹುರಕಡ್ಲಿ ಶಿವಕುಮಾರ ಉಪಸ್ಥಿತರಿದ್ದರು.
ಪತ್ರಕರ್ತ ಎಂ ದಯಾನಂದ,ನಯನಾ ಅಂಗಡಿ, ನಾಗರಾಜ್  ಮಲ್ಕಿಒಡೆಯರ್ ನಿರ್ವಹಿಸಿದರು. ಇದೇ ವೇಳೆ ವಿವಿಧ ಪ್ರಕಾಶನ ಸಂಸ್ಥೆಗಳ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಕಲ್ಪಿಸಲಾಗಿತ್ತು. ಹೂವಿನ ಹಡಗಲಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿಯ
ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

Darveshi poetry collection launch

Gadag: Poverty, hunger, pain and suffering

A member of the District Awareness Committee of Haveri District Kannada Development Authority, senior poet Dr. Pushpa Shalavadi Math expressed the opinion that a poet needs to respond to the current anxieties.

Sinchana Prakashan was organized at the Government Employees’ Hall in Huvana Hadagali town. In collaboration with the May Sahitya Mela Balaga Huvana Hadagali, Gadag poet A.A.S. Makanadara participated in the launch program of an important poetry collection Darveshi Padhya Kriti and spoke about the work.

The poet has revealed the words of friendship and equality of the Sufi saints of Sharan in simple verses.

He said that the poet has melted away and expressed the severe hardships of the common people of the society in poetic form.

Derveshis are those who constantly work to spread the noble values ​​of leading a simple life. He described the derveshi, who leads a life of sacrifice without pride, as having composed poems in a unique way that is rare in the world of Kannada literature.

He said that in the era of inequality, corruption, and the fear of war, the poems of the derveshi work have been fruitful in fusing human relations.

He recalled that the poems of the derveshi work have been selected for the curriculum of Krishnadevaraya University, Bellary and Kuvempu University.

Literary scholar Ismail Eligar dedicated the poem of the derveshi.

Continuously published poet A.S. Makanadara spoke and said that the poems are being read by graduate students for the curriculum of Krishnadevaraya University, Bellary.
Akhand Bellary Vijayanagar district’s cultural land Flower Boat in Vijayanagar district said that it was a special event that Derveshi’s work was launched.

Literary scholar To.M. Shankraya presided over the event.

Poet Ramappa Kotihal, Sinchana Prakashan Savita Angadi, Librarian B. Narayan Das, Sinchana Poetry Award winners Somalinga Bedara Alur and Hurakadli Shivakumar were present.

Journalist M Dayanand, Nayana Angadi, Nagaraj Malki Odeyar conducted the event.

At the same time, a book exhibition and sale of various publishing houses was organized.

Literature enthusiasts from Flower Boat, Harapanahalli, Hagaribommanahalli participated.

Get real time updates directly on you device, subscribe now.

Comments are closed.

error: Content is protected !!