ಅಳವಂಡಿಯ ಅನ್ವರ ಹುಸೇನ್ ಗಡಾದ ಅವರಿಗೆ ಹೈದರಾಬಾದ್ ನಲ್ಲಿ ಪ್ರತಿಷ್ಠಿತ ಸೈಮಾ ಅವಾರ್ಡ ಪ್ರದಾನ

Get real time updates directly on you device, subscribe now.

ಕೊಪ್ಪಳ:

ಕೊಪ್ಪಳ ತಾಲ್ಲೂಕಿನ ಅಳವಂಡಿ ಗ್ರಾಮದ ಸಮಾಜಸೇವಕ ಅನ್ವರ ಹುಸೇನ್ ಗಡಾದರವರ ಸಾಮಾಜಿಕ,ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿನ ಸುದೀರ್ಘ ಸೇವೆಯನ್ನು ಗುರುತಿಸಿ ಸೌತ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ವತಿಯಿಂದ ಹೈದರಾಬಾದ್ ನ ಪ್ರತಿಷ್ಠಿತ ಹೊಟೆಲ್ ನಲ್ಲಿ ಆಯೋಜಿಸಿದ್ದ ಸೈಮಾ‌ ಅವಾರ್ಡ್ ಕಾರ್ಯಕ್ರಮದಲ್ಲಿ ಸೈಮಾ ಅವಾರ್ಡ್ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ತೆಲಂಗಾಣ ಸರ್ಕಾರದ ಸಚಿವರಾದ ದನಸಾರಿ ಸೀತಕ್ಕ, ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೊಡ್ಲರಿ ಲಕ್ಷ್ಮಣ್ ,ಕೊಂಡಾ ಸುರೇಖಾ, ಚಾಮಲಾ ಕಿರಣ್ ಕುಮಾರ್ ರೆಡ್ಡಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸಿದ್ದನಕೊಳ್ಳ ಶಿವಕುಮಾರ ಸ್ವಾಮಿಜಿ ಸಂಸದರಾದ ಸಾಗರ ಖಂಡ್ರೆ, ಮಂಜುಳಾ ಗುರುರಾಜ ಹಾಗೂ ತೆಲಗು ಮತ್ತು ಕನ್ನಡ ಖ್ಯಾಟ ನಟ ನಟಿಯರು ಉಪಸ್ಥಿತಿ ಇದ್ದು ಪ್ರಶಸ್ತಿ ಪ್ರದಾನ ಮಾಡಿದರು.ಇದೇ ಸಂದರ್ಭದಲ್ಲಿ ಅನ್ವರ ಹುಸೇನ್ ಗಡಾದ ಸ್ನೇಹ ಬಳಗ ಹಾಗೂ ಕುಟುಂಬಸ್ಥರು ಉಪಸ್ಥಿತಿ ಇದ್ದರು

Get real time updates directly on you device, subscribe now.

Comments are closed.

error: Content is protected !!