ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಕನಕಗಿರಿ, ಮಾ.27: ತಾಲೂಕು ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಕ್ಕೆ ಗುರುವಾರ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ ಅಮರೇಶ ವೆಂಕಟಾಪುರ, ಉಪಾಧ್ಯಕ್ಷರಾಗಿ ವಿನಯ ಕುಮಾರ.ಆರ್.ಪಿ, ಕಾರ್ಯದರ್ಶಿಗಳಾಗಿ ಬಸವರಾಜ.ಎಲ್.ಚಿಗರಿ, ಸಂಘಟನಾ ಕಾರ್ಯದರ್ಶಿಗಳಾಗಿ ಸೋಮಶೇಖರ, ಖಜಾಂಚಿಯಾಗಿ ಬಾಲಪ್ಪ ಕುರಿ ಹಾಗೂ ಮಾಧ್ಯಮ ಪ್ರತಿನಿಧಿಯಾಗಿ ವಿಜಯ್ ಸರೋದೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಹಾಗೆಯೇ ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಸುರೇಶ್.ಪಿ, ಸಿದ್ದಪ್ಪ, ಸೈಯದ್ ಹಿದಾಯತುಲ್ಲಾ, ಬೋರಯ್ಯ, ಶ್ರೀಕಾಂತ, ನಿರುಪಾದಿ, ಡಾ. ಕರಿಯಪ್ಪ, ರಮೇಶ, ಅಂದಿಗೇಲಪ್ಪ, ರಾಘವೇಂದ್ರ, ಶರಣಪ್ಪ ಸಾಸಲಮರಿ, ಹನುಮವ್ವ, ಫರ್ಹಾನ್ ಹಾಗೂ ಹುಲಿಗೆಮ್ಮ ಅವರನ್ನು ಆಯ್ಕೆ ಮಾಡಲಾಯಿತು.
Comments are closed.