ಕೊಪ್ಪಳ- ಭಾಗ್ಯ ನಗರದಲ್ಲಿ ನಿತ್ಯ 24 ತಾಸು ಕುಡಿಯುವ ನೀರು ಪೂರೈಕೆಗೆ ಆಗ್ರಹ.
ಕೊಪ್ಪಳ ನಗರ. ಭಾಗ್ಯ ನಗರದಲ್ಲಿ ನಿತ್ಯ ಇಪ್ಪತ್ನಾಲ್ಕು ತಾಸೂ ಕುಡಿಯುವ ನೀರು ಪೂರೈಕೆಗೆ ಆಗ್ರಹ.
ಕೊಪ್ಪಳ : ಸೆ.16. ಕೊಪ್ಪಳ ನಗರ ಹಾಗೂ ಭಾಗ್ಯ ನಗರದಲ್ಲಿ ನಿತ್ಯ ಇಪ್ಪತ್ನಾಲ್ಕು ತಾಸೂ ಕುಡಿಯುವ ನೀರು ಪೂರೈಕೆ. ಸೊಳ್ಳೆಗಳ ನಿರ್ಮೂಲನೆ. ಚರಂಡಿ ಸ್ವಚ್ಛತೆಗೆ. ಬಿಡಾಡಿ ದನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಶ್ರೀಮತಿ ಸಾವಿತ್ರಿ ಬಿ. ಕಡಿ ಹಾಗೂ ಕೊಪ್ಪಳ ನಗರ ಸಭೆ ಅಧ್ಯಕ್ಷೆ ಶ್ರೀಮತಿ ಶಿವಗಂಗಾ ಎಸ್. ಭೂಮಕ್ಕನವರ್ ಅವರಿಗೆ ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್. ಮರಿಯಮ್ಮ ದೇವಿ ಕಟ್ಟಡ ಮತ್ತು ಇತರೆ ಕಾರ್ಮಿಕರ ಹಿತರಕ್ಷಣಾ ಸಮಿತಿಯ ಉಪಾಧ್ಯಕ್ಷ ತುಕಾರಾಂ ಬಿ. ಪಾತ್ರೋಟಿ. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಸಿದ್ದಪ್ಪ ನಾಯಕ್ ಮುಂತಾದವರು ಮನವಿ ಸಲ್ಲಿಸಿದರು.
ಮನವಿಯಲ್ಲಿ ಕೊಪ್ಪಳ ನಗರದ ಅನೇಕ ವಾರ್ಡ್ ಗಳಲ್ಲಿ ಚರಂಡಿಗಳು ತುಂಬಿ ಕೊಳಚೆ ಪ್ರದೇಶಗಳಾಗಿವೆ. ಕೆಲ ವಾರ್ಡುಗಳಲ್ಲಿ ಮಳೆ ನೀರು ಸಂಗ್ರಹ ಗೊಂಡಿದೆ. ಚರಂಡಿಗಳ ಸ್ವಚ್ಛತೆ ಎನ್ನುವುದು ಬೆರಳಣಿಕೆಯಷ್ಟು ವಾರ್ಡ್ ಗಳಿಗೆ ಮಾತ್ರ ಸೀಮಿತಗೊಂಡಿದೆ. ವಾರ್ಡ್ ಗಳ ಚರಂಡಿಗಳಲ್ಲಿ ನಿಲ್ಲುವ ನೀರಿನಲ್ಲಿ ಈಡಿಸ್ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡಿಕೊಂಡು ಜನರಿಗೆ ಡೆಂಗೆ. ಚಿಕುನ್ ಗುನ್ಯ. ಮಲೇರಿಯಾ ದಂತಹ ಅಪಾಯಕಾರಿ ರೋಗಗಳು ಹರಡಿ ಅನೇಕರು ಚಿಕಿತ್ಸೆ ಪಡೆದಿದ್ದಾರೆ. ಇನ್ನೂ ಸೊಳ್ಳೆಗಳ ಉತ್ಪನ್ನಗಳ ತಾಣಗಳು ಹೆಚ್ಚಾದರೆ ಜೀವ ಹಾನಿಯಾಗುವ ಸಂಭವವಿದೆ.
ಕೆಲವು ಮನೆಗಳ ಮುಂದಿನ ಚರಂಡಿಗಳ ಮಾತ್ರ ಸ್ವಚ್ಛ ಮಾಡಿ ಇಡೀ ವಾರ್ಡಿನ ಚರಂಡಿಗಳನ್ನು ಸ್ವಚ್ಛ ಮಾಡಿದಂತ ಬಿಂಬಿಸಿಕೊಳ್ಳುತ್ತಾರೆ. ನಗರದ ಚರಂಡಿಗಳನ್ನು ಸ್ವಚ್ಛತೆಗಾಗಿ ದೂರು ನೀಡಿದಾಗ ಶ್ರೀಮಂತರು ವಾಸವಾಗಿರುವ ಅಭಿವೃದ್ಧಿ ಹೊಂದಿದ ವಾರ್ಡಗಳಲ್ಲಿ ಮಾತ್ರ ಸ್ವಚ್ಛ ಮಾಡಿ. ಕೊಳಚೆ ಪ್ರದೇಶದ ಬಡಾವಣೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ.ನಗರ ಸಭೆಯ ಇಂಥ ಧೋರಣೆಯಿಂದ ಜನರು ರೋಸಿ ಹೋಗಿದ್ದಾರೆ. ಆಯಾ ವಾರ್ಡಿಗಳ ಎಲ್ಲಾ ಒಳ ರಸ್ತೆಗಳ ಎರಡೂ ಬದಿಗಳು ಹೊಂದಿರುವ ಚರಂಡಿಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು.
ಕೊಪ್ಪಳ ನಗರ ಮತ್ತು ಭಾಗ್ಯ ನಗರಕ್ಕೆ ನಿತ್ಯ ಇಪ್ಪತ್ನಾಲ್ಕು ತಾಸೂ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಜೆಸ್ಕಾಂ ಇಲಾಖೆಯಿಂದ ಕುಡಿಯುವ ನೀರಿನ ಜಾಕ್ ವೆಲ್ ಘಟಕಕ್ಕೆ 11 ಕೆವಿ ವಿದ್ಯುತ್ ಸಂಪರ್ಕ ನಿತ್ಯ ಇಪ್ಪತ್ನಾಲ್ಕು ತಾಸೂ ಸ್ಥಗಿತಗೊಳಿಸದೆ ಪೂರೈಸಲು ದೃಢವಾದ ಕ್ರಮ ಕೈಗೊಳ್ಳಬೇಕು. ನಿತ್ಯ ಇಪ್ಪತ್ನಾಲ್ಕು ತಾಸೂ ಕುಡಿಯುವ ನೀರು ಪೂರೈಕೆಯಾಗಬೇಕು. ಬೀಡಾಡಿ ದನಗಳ ಹಾವಳಿ ಮತ್ತೆ ಹೆಚ್ಚಾಗುತ್ತಿದ್ದು ತಕ್ಷಣ ಗೋಶಾಲೆಗೆ ಕಳುಹಿಸಬೇಕು. ಕಾಲಕಾಲಕ್ಕೆ ಚರಂಡಿಗಳ ಸ್ವಚ್ಛತೆಗೊಳಿಸಬೇಕು. ಸೊಳ್ಳೆಗಳನ್ನು ಹರಡದಂತೆ ಫಾಗಿಂಗ್ ಮಾಡಿಸಿ. ಸೊಳ್ಳೆ ನಿರ್ಮೂಲನಾ ಪುಡಿ ಸಿಂಪಡಿಸಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್. ಮರಿಯಮ್ಮ ದೇವಿ ಕಟ್ಟಡ ಮತ್ತು ಇತರೆ ಕಾರ್ಮಿಕರ ಹಿತರಕ್ಷಣಾ ಸಮಿತಿಯ ಉಪಾಧ್ಯಕ್ಷ ತುಕಾರಾಂ.ಬಿ. ಪಾತ್ರೋಟಿ. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಸಿದ್ದಪ್ಪ ನಾಯಕ್ ಮುಂತಾದವರು ಒತ್ತಾಯಿಸಿದ್ದಾರೆ.