ಸಮ ಸಮಾಜ ನಿರ್ಮಾಣದಲ್ಲಿ ಸಂವಿಧಾನದ ಪಾತ್ರ ಮಹತ್ವದು: ಪ್ರೊ.ಬಿ.ಕೆ.ರವಿ
ಕೊಪ್ಪಳ : ಸಮ ಸಮಾಜ ನಿರ್ಮಾಣದಲ್ಲಿ ಭಾರತದ ಸಂವಿಧಾನದ ಪಾತ್ರ ತುಂಬಾ ಪ್ರಮುಖವಾಗಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ.ರವಿ ಅವರು ಹೇಳಿದರು.
ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 15ರಂದು ಆಯೋಜಿಸಿದ್ದ ಸಂವಿಧಾನ ಓದು ಕಾರ್ಯಕ್ರಮದಲ್ಲಿ ಭಾರತ ಸಂವಿಧಾನದ ಪ್ರಸ್ತಾವನೆಯ ಬೋಧನೆಯ ನಂತರ ಮಾತನಾಡಿದ ಅವರು, ಭಾರತದ ಅನೇಕ ಸಾಮಾಜಿಕ ವೈರುಧ್ಯಗಳಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವೇ ಪರಿಹಾರ ಎಂದರು. ದೇಶದ ಇಂದಿನ ಯುವಪೀಳಿಗೆಯು ಭಾರತದ ಸಂವಿಧಾನದ ಆಶೋತ್ತರಗಳನ್ನು ಅರಿತುಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.
ದೇಶದ ಶೋಷಿತರ, ಅವಕಾಶ ವಂಚಿತ ಸಮುದಾಯಗಳ, ಬಡವರ ಹಾಗೂ ಮಹಿಳೆಯರ ಸಬಲೀಕರಣದಲ್ಲಿ ಭಾರತದ ಸಂವಿಧಾನದ ಕೊಡುಗೆ ಅಪಾರ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಡಾ.ಮನೋಜ ಡೊಳ್ಳಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಛಲವಾದಿ ಸಿ.ಐ., ಡಾ.ಚಾಂದ ಪಾಷಾ ಹಾಗೂ ಅತಿಥಿ ಉಪನ್ಯಾಸಕರಾದ ಡಾ.ಪ್ರವೀಣ ಪಾಟೀಲ ಅವರು ಮಾತನಾಡಿದರು. ಡಾ.ಸುಧಾಕರ್ ನಿರೂಪಿಸಿದರು. ಷಣ್ಮುಖ ಬಿ. ಸ್ವಾಗತಿಸಿದರು. ಡಾ.ಶ್ವೇತಾ ವಂದಿಸಿದರು.
Comments are closed.